ಮುಂಬೈ : ಬೆಳಗಾವಿ ತನಗೇ ಸೇರಬೇಕು ಎಂದು ಪದೇ ಪದೆ ಮೊಂಡು ವಾದ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ ಖ್ಯಾತ ನ್ಯಾಯವಾದಿ ಹರೀಶ್ ಸಾಳ್ವೆ ಅವರ ಕಾನೂನು ಸಲಹೆ ಪಡೆದಿದೆ.
ಜತೆಗೆ ಅವರೇ ಕರ್ನಾಟಕದ ನೆರೆಯ ರಾಜ್ಯದ ಪರ ವಾದಿಸುವ ಸಾಧ್ಯತೆ ಇದೆ. ಈ ಬಗ್ಗೆ ಭಾನುವಾರ ಔರಂಗಾಬಾದ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ “ಗಡಿ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಕೀಲ ಹರೀಶ್ ಸಾಳ್ವೆ ಅವರನ್ನೂ ಸಂಪರ್ಕಿಸಿ, ಸಲಹೆ ಪಡೆದಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪರವಾಗಿ ಸಾಳ್ವೆ ಹಾಜರಾಗುವ ನಿರೀಕ್ಷೆ ಇದೆ’ ಎಂದಿದ್ದಾರೆ.
ನಾಗ್ಪುರದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲೂ ಗಡಿ ವಿಚಾರ ಪ್ರತಿಧ್ವನಿಸಿತ್ತು. ಈ ಸಂದರ್ಭದಲ್ಲಿ ಸಾಳ್ವೆ ಅವರನ್ನು ನೇಮಿಸಲು ಒತ್ತಾಯ ಕೇಳಿಬಂದಿತ್ತು. ಮಹಾರಾಷ್ಟ್ರದ ಕೆಲವು ಮುಖಂಡರು ಬೆಳಗಾವಿಗೆ ಬಂದು ವಿನಾ ಕಾರಣ ಗಲಾಟೆ ಎಬ್ಬಿಸುವ ಪ್ರಯತ್ನವನ್ನೂ ಮಾಡಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕರ್ನಾಟಕ-ಮಹಾರಾಷ್ಟ್ರ ಸಿಎಂಗಳ ನಡುವೆ ಮಾತುಕತೆ ನಡೆದಿತ್ತು. ಇದರ ಹೊರತಾಗಿಯೂ ಮಹಾರಾಷ್ಟ್ರ ಸರ್ಕಾರ ತಕರಾರು ತೆಗೆಯುವುದನ್ನು ಮುಂದುವರಿಸಿದೆ.