Advertisement
ಸೋಮವಾರ “ಕೃಷ್ಣಾ’ದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ವಿದ್ಯಾರ್ಥಿಗಳು ತಾವಿದ್ದ ಲಿಂದಲೇ ಕಲಿಯಬಹುದು. “ಲರ್ನಿಂಗ್ ಫ್ರಮ್ ಎನಿವೇರ್’ ಪರಿಕಲ್ಪನೆಯನ್ನು ಇದು ಸಾಕಾರಗೊಳಿಸುತ್ತದೆ. ಇದು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಿದೆ ಎಂದರು.
ಡಿಜಿಟಲ್ ಕಲಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ದೇಶದಲ್ಲೇ ಪ್ರಥಮ ವಾಗಿ ಎಲ್‌ಎಂಎಸ್ ಕಾರ್ಯ ಕ್ರಮವನ್ನು ಜಾರಿಗೆ ತರುತ್ತದೆ. ರಾಜ್ಯದ 430 ಸರಕಾರಿ ಪ್ರಥಮ ದರ್ಜೆ ಕಾಲೇಜು, 87 ಸರಕಾರಿ ಪಾಲಿ ಟೆಕ್ನಿಕ್ ಕಾಲೇಜು ಮತ್ತು 14 ಸರಕಾರಿ ಎಂಜಿನಿ ಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರಿಂದ 4.5 ಲಕ್ಷ ವಿದ್ಯಾರ್ಥಿಗಳು ಹಾಗೂ 24 ಸಾವಿರ ಅಧ್ಯಾಪಕರಲ್ಲಿ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ಹೇಳಿದರು. ಡಿಸಿಎಂ ಡಾ| ಅಶ್ವತ್ಥನಾರಾಯಣ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಉಪಸ್ಥಿತರಿದ್ದರು. ರಾ. ಶಿಕ್ಷಣ ನೀತಿ ಜಾರಿಗೆ ಶೀಘ್ರ ಅನುಮೋದನೆ
ಬೆಂಗಳೂರು, ನ. 30: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೂತನ ಶಿಕ್ಷಣ ನೀತಿಯನ್ನು ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ.ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಕಾರ್ಯಪಡೆಯು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ತನ್ನ ವರದಿಯನ್ನು ಮುಖ್ಯಮಂತ್ರಿಗೆ ಒಪ್ಪಿಸಿತು. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಡಾ| ಕೆ.ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರಚಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕರ್ನಾಟಕ ಛಾಪು ಹೆಚ್ಚಿದೆ. ಕೇಂದ್ರ ಸರಕಾರ ಈ ನೀತಿ ಕುರಿತಂತೆ ರಾಜ್ಯಗಳೊಂದಿಗೆ ಸಂಪರ್ಕದಲ್ಲಿದ್ದು, ಜಾರಿ ಕುರಿತಂತೆ ಮೇಲುಸ್ತುವಾರಿ ನಡೆಸುತ್ತಿದೆ. ನೀತಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಒಂದು ಹೊಸ ರೂಪ ಪಡೆದುಕೊಳ್ಳಲಿದ್ದು, ನಾಡಿನ ಎಲ್ಲ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದರು. ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಮೂಲಕ ಕರ್ನಾಟಕ ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ. ಈ ಶತಮಾನದ ಮೊದಲ ಶಿಕ್ಷಣ ನೀತಿ ಇದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದು ಆಂದೋಲನದ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರಕಾರ ಮುಂದಾಗಿದೆ ಎಂದರು. ಕಾರ್ಯಪಡೆ ಅಧ್ಯಕ್ಷ ಎಸ್.ವಿ.ರಂಗನಾಥ್, ಸದಸ್ಯರಾದ ಪ್ರೊ| ಬಿ.ತಿಮ್ಮೇಗೌಡ, ಡಾ| ಎಂ.ಕೆ. ಶ್ರೀಧರ್, ಅರುಣ್ ಶಹಾಪುರ, ಡಾ| ಅನುರಾಗ್ ಬೆಹರ್ ಉಪಸ್ಥಿತರಿದ್ದರು.
Related Articles
ಡಿಜಿಟಲ್ ಕಲಿಕೆಗೆ ಎಲ್ಲೆಡೆ ಹೆಚ್ಚು ಒತ್ತು ಸಿಗುತ್ತಿದೆ. ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಅವರ ಕಲಿಕೆಯ ಮಟ್ಟವನ್ನು ಈ ಹೊಸ ಪದ್ಧತಿ ಸುಧಾರಿಸಲಿದೆ. ಎಲ್‌ಎಂಎಸ್ ಆಧಾರಿತ ಡಿಜಿಟಲ್ ಕಲಿಕೆ ಪದ್ಧತಿಯು ವಿಷಯ ಸಂವಹನ, ವಿಷಯ ಲಭ್ಯತೆ ಮತ್ತು ಮೌಲ್ಯಮಾಪನದಲ್ಲಿ ಗುರುತರ, ಮಹತ್ವದ ಬದಲಾವಣೆಗಳನ್ನು ತರುತ್ತದೆ.
Advertisement
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕರು, ವಿವಿಧ ಭಾಷೆಗಳಲ್ಲಿ 14 ಸಂಯೋಜಿತ ವಿವಿಗಳ ಪಠ್ಯಕ್ಕೆ ಪೂರಕವಾಗಿ ಸ್ವ-ಕಲಿಕೆ ಮತ್ತು ಬೋಧನೆಗೆ ಸೂಕ್ತವಾದ ಇ-ಕಂಟೆಂಟ್, ಪಿಪಿಟಿ, ವೀಡಿಯೋ, ಅಸೈನ್ಮೆಂಟ್, ಇ-ಅಧ್ಯಯನ ಮಾಹಿತಿ, ಪ್ರಶ್ನೋತ್ತರ ವಿವರ, ಕ್ವಿಜ್ ರೂಪದಲ್ಲಿ ಅಭಿವೃದ್ಧಿ ಗೊಳಿಸಿದ್ದು, ವಿಶ್ವವಿದ್ಯಾಲಯದ ಕೇಂದ್ರಿಕೃತ ಪಠ್ಯಕ್ರಮವೂ ಬೋಧಕರಿಗೆ ಲಭ್ಯವಾಗಲಿದೆ.