Advertisement

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

12:00 AM Dec 18, 2024 | Team Udayavani |

ಬೆಳಗಾವಿ: ನೇರಳೆ ವಲಯ (ಕೈಗಾರಿಕಾ) ಎಂದು ವರ್ಗೀಕರಿಸಿರುವ ಪ್ರದೇಶದಲ್ಲಿರುವ 2 ಎಕರೆ ಒಳಗಿನ ಜಮೀನನ್ನು ಭೂ ಪರಿವರ್ತಿಸದೆ ಕೈಗಾರಿಕೆ ಉದ್ದೇಶಕ್ಕೆ ಬಳಸಲು ಅವಕಾಶ ಮಾಡಿಕೊಡುವ 2024ನೇ ಸಾಲಿನ ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ) ಮಸೂದೆಯನ್ನು ವಿಧಾನ ಸಭೆ ಅಂಗೀಕರಿಸಿತು.

Advertisement

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆಯ ಅಧಿನಿಯಮ 1961ರಡಿ ಸ್ಥಳೀಯ ಯೋಜನಾ ಪ್ರಾಧಿಕಾರ ಗಳ ಮೂಲಕ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸ ಲಾಗಿದ್ದು ಇದರಲ್ಲಿ ಕೈಗಾರಿಕಾ ವಲಯದ ಜಮೀನಿನಲ್ಲಿ 2 ಎಕರೆ ವರೆಗೆ ಭೂ ಪರಿವರ್ತನೆ ಮಾಡದೆ ನೇರವಾಗಿ ಕೈಗಾರಿಕೆಗೆ ಬಳಸಿಕೊಳ್ಳಬಹುದು ಎಂದು ತಿದ್ದುಪಡಿಯಲ್ಲಿ ಉಲ್ಲೇಖಿಸಿದೆ.

ಮಸೂದೆ ಮಂಡಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೈಗಾರಿಕೆ ವಲಯದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಎರಡು ಎಕರೆವರೆಗಿನ ಭೂಮಿಗೆ ಭೂ ಪರಿವರ್ತನೆ ಮಾಡಬೇಕಾಗಿಲ್ಲ. ಆದರೆ ಇದು ವಸತಿ ಪ್ರದೇಶ, ಹಳದಿ ಮತ್ತು ಹಸುರು ವಲಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸರಕಾರಿ ಜಾಗವನ್ನು ಯಾರಾದರೂ ಒತ್ತುವರಿ ಮಾಡಿದ್ದರೆ ತೆರವುಗೊಳಿಸುವ ಅಧಿಕಾರವನ್ನು ತಹಶೀಲ್ದಾರ್‌ಗೆ ನೀಡುವ ಉದ್ದೇಶದಿಂದ ಇದೇ ಕಾಯ್ದೆಯ ಸೆಕ್ಷನ್‌ 67, 104 ಮತ್ತು 136ನ್ನು ಕೂಡಾ ತಿದ್ದುಪಡಿ ಮಾಡಲಾಗಿದೆ.

ಕಂದಾಯ ಪ್ರಕರಣಗಳ
ವಿಚಾರಣೆ ನಿಯಮ ತಿದ್ದುಪಡಿ
ಖಾಸಗಿಯವರು ಸರಕಾರಿ ಜಾಗ ಒತ್ತುವರಿ ಮಾಡಿಕೊಂಡ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಅದರ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರ ಈವರೆಗೆಇತ್ತು. ಇನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ದಲ್ಲಿನ ಆದೇಶದ ಮೇಲೆ ಹೈಕೋರ್ಟ್‌ಗೆ
ನೇರವಾಗಿ ಮೇಲ್ಮನವಿಗೆ ಹೋಗುವ ಬದಲು”ಕರ್ನಾಟಕ ಕಂದಾಯ ಮೇಲ್ಮನವಿ ನ್ಯಾಯ ಮಂಡಳಿ’ಗೆ ಸಲ್ಲಿಸುವಂತೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next