Advertisement

ಕೊರೊನಾ ಭಯ: ನೆಗಡಿ, ಕೆಮ್ಮು, ಜ್ವರಕ್ಕೆ ತಪಾಸಣೆ ಕಡ್ಡಾಯ ಎಂದ ಆರೋಗ್ಯ ಸಚಿವ ರಾಮುಲು

09:59 AM Mar 16, 2020 | keerthan |

ಕಲಬುರಗಿ: ಕೊರೊನಾ ಸೋಂಕಿನ ಕುರಿತ ವದಂತಿಗಳಿಗೆ ಜನತೆ ಕಿವಿಗೊಡಬಾರದು. ಒಂದು ವೇಳೆ ಯಾರು ತಪಾಸಣೆಗೆ ಒಳಗಾಗುವುದಿಲ್ಲವೋ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.‌ ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಲೇಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಬಂದ ತಕ್ಷಣ ಜನ ಸಾಯುವುದಿಲ್ಲ.‌ ಯಾರೂ ಹೆದರಬಾರದು. ಚಿಕಿತ್ಸೆಗೆ ಬೇಕಾದಂತಹ ಎಲ್ಲ ವ್ಯವಸ್ಥೆ ಆರೋಗ್ಯ ಇಲಾಖೆ ಮಾಡಿಕೊಂಡಿದೆ ಎಂದರು.

ಕೊರೊನಾ ಸೋಂಕಿಗೆ ಕಲಬುರಗಿಯ ವೃದ್ಧ ಸಾವನ್ನಪ್ಪಿದ ಬಳಿಕ ಆತನ ಮನೆ ಸುತ್ತ-ಮುತ್ತ ಐದು ಕೀ.ಮೀ. ಬಫರ್ ಝೋನ್ ಎಂದು ಗುರುತಿಸಲಾಗಿದೆ. ಆ ಪ್ರದೇಶದಿಂದ ಜನರನ್ನು ಹೊರಬಾರದಂತೆ ಸೂಚನೆ ನೀಡಲಾಗಿದೆ.  ಅವರ ಮನೆಗಳಿಗೆ ಆಹಾರದ ಕಿಟ್ ಸೇರಿದಂತೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು.

ವೈದ್ಯರಿಗೂ ಚಿಕಿತ್ಸೆ: ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದೇನೆ.‌ ಜನರ ಆತಂಕ ಕಡಿಮೆ ಮಾಡಲು ಹಾಗೂ ತಕ್ಷಣವೇ ಸೋಂಕು ಪತ್ತೆಗೆ ಮೂರು ದಿನದಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಆರಂಭಿಸಲಾಗುತ್ತದೆ ಎಂದರು.

ವೃದ್ದನ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಇಲ್ಲ ಎಂದು ದೃಢಪಟ್ಟಿದೆ. ‌ಇನ್ನೂ ಒಬ್ಬರ ವರದಿ ಬರಬೇಕಾಗಿದೆ.‌ ಅದು ಪಾಸಿಟಿವ್ ಬರಲಿ ಅಥವಾ ನೆಗೆಟಿವ್ ಬರಲಿ ಜಿಲ್ಲೆಯ ಜನರು ಹೆದರಬೇಕಾಗಿಲ್ಲ.‌ ವರದಿ ಯಾವುದೇ ರೀತಿಯಾಗಿ ಬಂದರು ಕೂಡ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದರು.

Advertisement

ವಿವಿಧ ದೇಶಗಳಿಂದ ಕಲಬುರಗಿಗೆ 16 ಜನ ಬಂದಿದ್ದಾರೆ.‌ ಅವರಿಗೂ ಕೂಡ ಮನೆಯಲ್ಲೇ ಇಟ್ಟು ಹೋಂ ಐಸೋಲೇಟೆಡ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಇಎಸ್ಐ, ಜಿಮ್ಸ್ ಗೆ ಭೇಟಿ: ನಗರದ ಜಿಮ್ಸ್ ಹಾಗೂ ಇಎಸ್ಐ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ಶ್ರೀರಾಮುಲು‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯೊಳಗಡೆ ಹೋಗುವ ಮುನ್ನ ಸಚಿವರು ಸ್ಯಾನಿಟೈಸರ್ ಬಳಕೆ ಮಾಡಿ ಮುಖಕ್ಕೆ ಎನ್- 95 ಮಾಸ್ಕ್ ಧರಿಸಿದರು‌.‌ ಶ್ರೀರಾಮುಲು ಅವರಿಗೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಮತ್ತು  ಅವಿನಾಶ್ ಜಾಧವ್ ಸಾಥ್ ನೀಡಿದರು.

ನಂತರ ಇಎಸ್ ಐ ಆಸ್ಪತ್ರೆಗೂ ಸಚಿವ ಶ್ರಿರಾಮುಲು ಭೇಟಿ ನೀಡಿ, ಇಲ್ಲಿ ಸುರಕ್ಷತಾ ಕಿಟ್ ಧರಿಸಿ 200 ಬೆಡ್ ನ ಐಸೋಲೇಟೆಡ್ ವಾರ್ಡ್ ಪರಿಶೀಲಿಸಿದರು. ಅಲ್ಲದೇ, ಇಎಸ್ಐ ಹಾಗೂ ಜಿಮ್ಸ್ ಆಸ್ಪತ್ರೆಯ ವೈದ್ಯರ ಜೊತೆ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next