Advertisement
ಈ ಕಬಳಿಕೆಯ ಕಾರ್ಯದಲ್ಲಿ ಬಿಲ್ಡರ್‌ಗಳು, ಶಾಸಕರು, ರಿಯಲ್ ಎಸ್ಟೇಟ್ ಏಜೆಂಟರು, ಕಾರ್ಪೊರೇಟಿನ/ಕಂಪೆನಿಗಳ ಸದಸ್ಯರು, ಕಾಫಿ ಪ್ಲಾಂಟರ್‌ಗಳು ಎಲ್ಲರೂ ತೊಡಗಿದ್ದಾರೆ.
Related Articles
ಈ ಕೆಲಸ ಇದುವರೆಗೂ ಆಗಿಲ್ಲ.
Advertisement
ವಿಶೇಷ ನ್ಯಾಯಾಲಯ ಸರಕಾರದ ಈ ಅಧಿಕಾರಿಗಳ ಅಸಹಕಾರಕ್ಕೆ ರೋಸಿ ತಾನೇ ಕೆಲವು ಮುಖ್ಯವಾದ ಪ್ರಕರಣಗಳನ್ನು ಕೈಗೆತ್ತಿಧಿಕೊಂಡು, ಆ ಪ್ರಕರಣಗಳ ವಿಚಾಧಿರಣೆಗೆ ತೊಡಗಿದೆ. ಉದಾಹರಣೆಗೆಶ್ರೀರಂಗಧಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲ ಯಕ್ಕೆ ದಾನಿಗಳು 50-60 ವರ್ಷಗಳ ಹಿಂದೆ ದಾನವಾಗಿ ಕೊಟ್ಟ 270 ಎಕರೆ ಜಮೀನನನ್ನು ಉತುಬಿತ್ತಿ ಮಾಡುತ್ತಿದ್ದ ರೈತರು ಮಾರಿ ಹಾಕಿರುವುದಲ್ಲದೆ ಆ ಜಮೀಧಿನುಗಳು 3-4 ಸಾರಿ ಬೇರೆ ಬೇರೆಯವರಿಗೆ ಹಸ್ತಾಂತರವಾಗಿದೆ. ಅವುಗಳಲ್ಲಿ ಕೆಲವು ಎಕರೆಗಳಷ್ಟು ಜಮೀನು 10-20 ವರ್ಷ ಗಳಲ್ಲಿ ನಿವೇಶನಗಳಾಗಿ ಪರಿವರ್ತಿತವಾಗಿ ಮಾರಾಟ ಕೂಡ ಆಗಿದೆ.
ದೇವಾಲಯದ ಜಮೀನು ಒಂದೇ ಕಡೆ ಇಲ್ಲ ಎರಡು ಮೂರು ಬೇರೆ ಬೇರೆ ಹೋಬಳಿಗಳಲ್ಲಿವೆ. ಪತ್ರಿಕಾ ವರದಿಗಳ ಪ್ರಕಾರ ಈ ಜಮೀನಿಗೆ ಸಂಬಂಧಪಟ್ಟಂತೆ ಶಾಸಕರೊಬ್ಬರು ಸೇರಿದಂತೆ 52 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಂಗೇರಿ ಹೋಬಳಿಯ ವೆಂಕಟಾಪುರ ಗ್ರಾಮ ಒಂದು ಇನಾಂಗ್ರಾಮ. ಇನಾಂ ರದ್ದತಿಯಾದ ಮೇಲೆ ಆ ಜಮೀನು ಸರ್ಕಾರಕ್ಕೆ ಸೇರಬೇಕು. ಆದರೆ ಅದು ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗಿ ಈಗ ಅದು ಒಂದು ಬಿಲ್ಡರ್ಸ್‌ನವರಲ್ಲಿದೆ. ಬಸವನಗುಡಿಯಲ್ಲಿ 6000 ಮನೆಗಳ ಒಂದು ಫ್ಲಾಟ್ ಕಟ್ಟಿ ಈಗಾಗಲೇ ಕೊಳ್ಳುವವರಿಂದ ಮುಂಗಡವಾಗಿ ತಲಾ 2- 3 ಲಕ್ಷ ಪಡೆದಿದ್ದಾರೆ ಬಿಲ್ಡರ್ಸ್‌ಗಳು. ಈ ಮಾರಾಟಕ್ಕೆ ತಡೆ ಹಾಕಲು ಇಷ್ಟರಲ್ಲೇ ವಿಶೇಷ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ಆನೇಕಲ್ ತಾಲೂಕು ಸರ್ಜಾಪುರ ಹೋಬಳಿಯ ಅಡಿಗಾರ ಕಲ್ಲಹಳ್ಳಿಯಲ್ಲಿ ಸರ್ವೆ ನಂ. 147ರ 103 ಎಕರೆ 33 ಗುಂಟೆ ಗೋಮಾಳದಲ್ಲಿನ ವಸತಿ ನಿರ್ಮಾಣ ಪ್ರಕರಣದಲ್ಲಿ ಶಾಸಕರೊಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಂದೂರಿನ ಸ.ನಂ. 156ರಲ್ಲಿ 15 ಎಕರೆ ಸರ್ಕಾರಿ ಭೂಮಿ ಬಳಕೆ ಆಗಿರುವ ಪ್ರಕರಣದಲ್ಲಿ ಸಚಿವರೊಬ್ಬರ ಮೇಲೂ ಕೇಸ್ ದಾಖಲಾಗಿದೆ. ಅವರಿಗೂ, ಅವರ ಮಕ್ಕಳಿಗೂ ನೋಟೀಸ್ ನೀಡಲಾಗಿದೆ.
ಈವರೆಗೆ ಭೂಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ 348 ಭೂಕಬಳಿಕೆ ಪ್ರಕರಣಗಳು ದಾಖಲಾಗಿವೆ. ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ದಾಖಲಿಸಿರುವ ಭೂಕಬಳಿಕೆ ಪ್ರಕರಣಗಳು 243. ಖಾಸಗಿ ದೂರಿನ ಮೇಲೆ ದಾಖಲಾಗಿರುವ ಪ್ರಕರಣಗಳು 92. ವಿವಿಧ ಸರ್ಕಾರಿ ಇಲಾಖೆಗಳಿಂದ ವರ್ಗಾವಣೆಯಾಗಿರುವ ಪ್ರಕರಣಗಳ ಸಂಖ್ಯೆ 8. ಈ ಪೈಕಿ 13 ಪ್ರಕರಣಗಳು ಈವರೆಗೆ ಇತ್ಯರ್ಥಗೊಂಡಿವೆ. 5 ಪ್ರಕರಣಗಳು ಬೇರೆ ನ್ಯಾಯಾಲಯಗಳಿಗೆ ವರ್ಗಾವಣೆಯಾಗಿವೆ. ಬೆಂಗಳೂರು ನಗರ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿಗಳ ಕಡೆ 4000 ಭೂಗಳ್ಳರ ಪ್ರಕರಣಗಳಿವೆ. ಜಿಲ್ಲಾಧಿಕಾರಿಗಳು ಮತ್ತು ಎಸಿಗಳ ನ್ಯಾಯಾಲಯಗಳಲ್ಲೂ 3000 ಪ್ರಕರಣಗಳಿವೆ. ಇವುಗಳನ್ನು ಈ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಎಂದೋ ವರ್ಗಾಯಿಸಬೇಕಿತ್ತು.
ಇಂದಿಗೂ ಅವರು ಈ ಕೆಲಸ ಮಾಡಿಲ್ಲ. ಬೆಂಗಳೂರು ನಗರ ಜಿಲ್ಲೆಯ ತಹಸೀಲ್ದಾರರು ಕಾಟಾಚಾರಕ್ಕೆ 500 ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟರು. ಆ ಕಡತದಲ್ಲಿ ಗ್ರಾಮದ ಹೆಸರು ಸನಂ. ಕಬಳಿಸಿದ ಜಮೀನಿನ ವಿಸ್ತೀರ್ಣ ಇಷ್ಟನ್ನು ಪಟ್ಟಿ ಮಾಡಿ ಕಳಿಸಿದ್ದರು. ಕಬಳಿಕೆ ಮಾಡಿದವನ ಹೆಸರು, ವಿಳಾಸ ಇಲ್ಲ, ರೆಕಾರ್ಡ್ ತಿದ್ದಿದ ಅಧಿಕಾರಿಯ ಹೆಸರಿಲ್ಲ. ಹೀಗಾಗಿ ವಿಶೇಷ ನ್ಯಾಯಾಲಯ ಆ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಹಿಂದಿರುಗಿಸಿ 4 ತಿಂಗಳೇ ಆದರೂ ಇನ್ನೂ ಈ ತಹಸೀಲ್ದಾರರು ಭೂಗಳ್ಳರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿಲ್ಲ. ಈ ಬಗ್ಗೆ ಬೇಜವಾಬ್ದಾರಿತನ ನಮ್ಮ ಜಿಲ್ಲಾಧಿಕಾರಿಗಳದು ಮತ್ತು ತಹಸೀಲ್ದಾರರದು.
ವಿಶೇಷ ನ್ಯಾಯಾಲಯ ನೋಟೀಸ್ ನೀಡಿದ್ದರೂ ಸ್ಪಂದಿಸಲಿಲ್ಲವಾದ್ದರಿಂದ ವಿಶೇಷ ನ್ಯಾಯಾಲಯ ಉಪ ವಿಭಾಗಾಧಿಕಾರಿಗಳಿಗೆ ಹಾಗೂ ತಹಸೀಲ್ದಾರಿಗೆ ವಾರೆಂಟ್ ಜಾರಿ ಮಾಡಿ ಅವರನ್ನು ಕರೆಸಿಕೊಂಡು ಮಾಹಿತಿ ಪಡೆಯಬೇಕಾಯಿತು. ಸರ್ಕಾರ ಭೂಗಳ್ಳರಿಗೆ ರಕ್ಷಣೆ ನೀಡುವ ಇಲಾಖಾಧಿಕಾರಿಗಳಿಗೆ ರಕ್ಷಣೆ ನೀಡುತ್ತಿದೆ. ಸರ್ಕಾರಕ್ಕೆ ಭೂಗಳ್ಳರನ್ನು ಹಿಡಿದು ಶಿಕ್ಷಿಸುವ ಮನಸ್ಸಿಲ್ಲದಿದ್ದ ಮೇಲೆ ಈ ವಿಶೇಷ ನ್ಯಾಯಾಲಯ ಆರಂಭಿಸುವ ನಾಟಕವನ್ನು ಏಕೆ ಮಾಡಬೇಕಿತ್ತು? ಜನರನ್ನು ದಿಕ್ಕು ತಪ್ಪಿಸುವ ಹುನ್ನಾರ ಇದಲ್ಲವೇ?
– ಎಚ್.ಎಸ್. ದೊರೆಸ್ವಾಮಿ