Advertisement

“ವಿಶ್ವಾಸ” ಕಳೆದುಕೊಂಡ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಪತನ

09:15 AM Jul 24, 2019 | Nagendra Trasi |

ಬೆಂಗಳೂರು:ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವ ಕಸರತ್ತಿಗೆ ಮಂಗಳವಾರ ತೆರೆಬಿದ್ದಿದ್ದು, ಕೊನೆಗೂ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗುವ ಮೂಲಕ 14 ತಿಂಗಳ ಕಾಲ ಅಧಿಕಾರ ನಡೆಸಿದ್ದ ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡಂತಾಗಿದೆ.

Advertisement

7-10ನಿಮಿಷದವರೆಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾಪದ ಮೇಲೆ ಚರ್ಚೆ ನಡೆಸಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರ ಸೂಚನೆ ಮೇರೆಗೆ ಸದಸ್ಯರ ತಲೆ ಎಣಿಕೆ ನಡೆಸುವ ಮೂಲಕ ಸದನದಲ್ಲಿ ವಿಶ್ವಾಸಮತ ಯಾಚನೆ ನಡೆಯಿತು.

ನಿರ್ಣಯದ ಪರ ಎದ್ದು ನಿಂತ ಆಡಳಿತ ಪಕ್ಷದ ಶಾಸಕರು, ನಿರ್ಣಯದ ಪರ ಎದ್ದು ನಿಂತ ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ, ಎದ್ದು ನಿಂತವರನ್ನು ವಿಧಾನಸಭಾ ಸಚಿವಾಲಯದ ಸಿಬ್ಬಂದಿಗಳು ತಲೆ ಎಣಿಕೆ ಮೂಲಕ ಎಣಿಕೆ ಕಾರ್ಯ ನಡೆಸಿದ್ದರು.ಈ ಮೂಲಕ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವ ಹಾದಿ ಸುಗಮಗೊಂಡಂತಾಗಿದೆ.

ನಿರ್ಣಯದ ವಿರುದ್ಧ ವಿಪಕ್ಷ ಶಾಸಕರು ಎದ್ದು ನಿಂತಿದ್ದರು. ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೆ ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಬಹುಮತದ ಸಂಖ್ಯೆಯನ್ನು ಘೋಷಿಸಲಾಯಿತು.

ಸದನದ ಒಟ್ಟು ಬಲ 208: ಮ್ಯಾಜಿಕ್ ನಂಬರ್ 103, ಬಿಜೆಪಿ-105, ಕಾಂಗ್ರೆಸ್, ಜೆಡಿಎಸ್-99

Advertisement

ವಿಧಾನಸಭೆಯ ಒಟ್ಟು ಸದಸ್ಯ ಬಲ 225: 37ರಲ್ಲಿ 3 ಜೆಡಿಎಸ್ ಶಾಸಕರ ರಾಜೀನಾಮೆ, ಬಿಜೆಪಿ ಶಾಸಕರ ಸಂಖ್ಯೆ 105, ಬಿಜೆಪಿ ಪಕ್ಷೇತರ ಶಾಸಕರಿಬ್ಬರ ಬೆಂಬಲ, ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯಾ ಬಲ(ಒಟ್ಟು ಬಲ 79) 67, ಶಾಸಕರ ರಾಜೀನಾಮೆ ಬಳಿಕ ದೋಸ್ತಿ ಸಂಖ್ಯೆ 99, ಬಿಎಸ್ಪಿ ಶಾಸಕ ಮಹೇಶ್ ತಟಸ್ಥ, ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 12, ರಾಜೀನಾಮೆ ನೀಡದೆ ಗೈರು ಹಾಜರಾದ ಶಾಸಕರ ಸಂಖ್ಯೆ-02,

ವಿಶ್ವಾಸಮತ ಯಾಚನೆ ಪ್ರಹಸನ ಕಳೆದ ಕೆಲವು ದಿನಗಳಿಂದ ವಿಧಾನಸಭೆ ಕಲಾಪದಲ್ಲಿ ನಡೆಯುತ್ತಿತ್ತು. ಸೋಮವಾರವೂ ಕೂಡಾ ತಡರಾತ್ರಿ 12ಗಂಟೆವರೆಗೆ ಕಲಾಪ ನಡೆದಿತ್ತು. ಆಡಳಿತ, ವಿಪಕ್ಷ ಸದಸ್ಯರ ನಡುವೆ ವಾಗ್ವಾದ, ಗದ್ದಲ, ಕೋಲಾಹಲ ನಡೆದಿತ್ತು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಮನವಿಯಂತೆ ಮಂಗಳವಾರ ಆರು ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಲು ಅಂತಿಮ ಗಡುವು ನೀಡಿದ್ದ ಸ್ಪೀಕರ್ ಕಲಾಪವನ್ನು ಮಂಗಳವಾರ ಬೆಳಗ್ಗೆ 10ಗಂಟೆಗೆ ಮುಂದೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next