Advertisement

Karnataka Exit Polls; ಅತಂತ್ರ!!!,ಬಹುಮತವೋ? ; ಸಮೀಕ್ಷೆಗಳು ಹೀಗಿವೆ

06:57 PM May 10, 2023 | Team Udayavani |

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಮತದಾನ ಬುಧವಾರ ಮುಕ್ತಾಯವಾಗಿದ್ದು,  ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಕೆಲವು ಚುನಾವಣೋತ್ತರ ಸಮೀಕ್ಷೆಗಳು ವರದಿ ನೀಡಿವೆ. ಮೂರು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್‌ಗೆ ಮುನ್ನಡೆ ನೀಡಿದರೆ, 2 ಬಿಜೆಪಿ ಪರವಾಗಿವೆ.

Advertisement

ಪಿ-ಮಾರ್ಕ್ ಸಮೀಕ್ಷೆಯು ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಹೇಳಿದೆ. ಕಾಂಗ್ರೆಸ್ 94-108 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಹಂಗ್ ಅಸೆಂಬ್ಲಿ ಭವಿಷ್ಯ ನುಡಿದಿದೆ.

TV 9 ಭಾರತವರ್ಷ ಸಮೀಕ್ಷೆ ಅತಂತ್ರ ಭವಿಷ್ಯ ನುಡಿದಿದ್ದು ಬಿಜೆಪಿ 88-98, ಕಾಂಗ್ರೆಸ್ 99-109, ಜೆಡಿಎಸ್ 21-26 ಮತ್ತು ಇತರರು 0-4 ಸ್ಥಾನ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ.

ಝೀ ನ್ಯೂಸ್ ಮ್ಯಾಟ್ರಿಜ್ ಏಜೆನ್ಸಿ ಬಿಜೆಪಿ 79-94, ಕಾಂಗ್ರೆಸ್ 103-118, ಜೆಡಿಎಸ್ 25-33 ಮತ್ತು ಇತರರು 2-5 ಸ್ಥಾನ ಗೆಲ್ಲಲಿವೆ ಎಂದು ಭವಿಷ್ಯ ನುಡಿದಿದೆ.

99-109 ಸ್ಥಾನಗಳನ್ನು ಗೆಲ್ಲುವ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷ ಎಂದು ಪೋಲ್‌ಸ್ಟ್ರಾಟ್ ಸಮೀಕ್ಷೆ ಹೇಳಿದೆ.  ಬಿಜೆಪಿ 88-99 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಎರಡೂ ಪಕ್ಷಗಳು ಅರ್ಧದಷ್ಟು ಬಹುಮತದ ಸ್ಥಾನಗಳನ್ನು  ಕಳೆದುಕೊಂಡಿರುವುದು ಕಂಡುಬಂದಿದೆ.

Advertisement

ಬಿಜೆಪಿ 114 ಸ್ಥಾನಗಳಲ್ಲಿ ಗೆದ್ದು 224 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತ ಗಳಿಸಲಿದೆ ಎಂದು ಸಿಜಿಎಸ್ ಸಮೀಕ್ಷೆ ಹೇಳಿದೆ. ಕಾಂಗ್ರೆಸ್ 90-100 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದಿದೆ.

ಬಿಜೆಪಿ 94-117 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಜನ್ ಕಿ ಬಾತ್ ಸಮೀಕ್ಷೆ ಹೇಳಿದೆ. ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಬಿಜೆಪಿ 94-117 ಸ್ಥಾನ, ಕಾಂಗ್ರೆಸ್ 99-109 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಆದರೆ, ಜೆಡಿಎಸ್ 21-26 ಸ್ಥಾನಗಳನ್ನು ಗೆಲ್ಲಬಹುದು ಎಂದು ಅದು ಹೇಳಿದೆ.

ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಮುಂದಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆ ಹೇಳಿದೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಕರಾವಳಿ ಕರ್ನಾಟಕದ 19 ಸ್ಥಾನಗಳ ಪೈಕಿ ಬಿಜೆಪಿ 16 ಸ್ಥಾನಗಳಲ್ಲಿ ಮುಂದಿದೆ, ಆದರೆ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next