ಮಂಗಳೂರು: ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಚುನಾವಣ ಅಕ್ರಮಗಳನ್ನು ತಡೆಯುವ ಹಾಗೂ ಕಾನೂನು ಬಾಹಿರ ವಸ್ತುಗಳ ಸಾಗಟವನ್ನು ತಡೆಯುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೇರಳ ಗಡಿ ಭಾಗದಲ್ಲಿರುವ ರಾಜ್ಯ ಪ್ರವೇಶಿಸಬಹುದಾದ 14 ಕಡೆಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಫೋರಸ್ ಪಾಯಿಂಟ್ಸ್ ಗಳಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬಂದಿಗಳನ್ನು ನಿಯೋಜಿಸಲಾಗಿದ್ದು 8 ಅಂತರ್ ರಾಜ್ಯ ಚೆಕ್ ಪೋಸ್ಟ್ ಗಳಲ್ಲಿ ಕೇರಳ ರಾಜ್ಯ ಪೊಲೀಸ್ ಸಹಯೋಗದಲ್ಲಿ ಕೇರಳ ಪೊಲೀಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ.
ಗಡಿಪ್ರದೇಶ ಹಾಗೂ ಚೆಕ್ ಪೋಸ್ಟ್ ಪ್ರದೇಶಗಳಲ್ಲಿ ಕೇರಳ ರಾಜ್ಯ ಪೊಲೀಸ್ ಹಾಗೂ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ಸಿಬಂದಿಗಳು ಸೇರಿ ಜಂಟಿ ಪೆಟ್ರೋಲಿಂಗ್ ನಡೆಸುವ ಮೂಲಕ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದ್ದು ಹೆಚ್ಚಿನ ತಪಾಸಣೆ ಕೈಗೊಳ್ಳಲಾಗುತ್ತಿದೆ.