Advertisement

Karnataka Election ಲಿಂಗಾಯತ ಡ್ಯಾಮ್ ಗೋಡೆ ಎತ್ತರಿಸಿದ್ದೇವೆ: ಸಿ.ಟಿ.ರವಿ

06:07 PM Apr 24, 2023 | Team Udayavani |

ಮೈಸೂರು: ನಾವು ಲಿಂಗಾಯತ ಡ್ಯಾಮ್ ಗೋಡೆ ಎತ್ತರಿಸಿದ್ದೇವೆ. ಜೊತೆಗೆ ಎಲ್ಲಾ ವರ್ಗಗಳ ಅಭಿವದ್ಧಿಗೆ ಮೀಸಲಾತಿ ಹೆಚ್ಚಿಸಿ ಹಿಂದುತ್ವದ ಡ್ಯಾಮ್ ಗಟ್ಟಿ ಮಾಡಿದ್ದೇವೆ. ಕಾಂಗ್ರೆಸ್ ಮುಳುಗುವುದು ನಿಶ್ಚಿತ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ.

Advertisement

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ.ರವಿ, ”ಲಿಂಗಾಯತ ಡ್ಯಾಂ ಒಡೆದಿದ್ದೇವೆ” ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿ, ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಸಮಾಜ ಸೇರಿದಂತೆ ಸಮುದಾಯಗಳನ್ನು ಒಡೆಯುತ್ತಾ ಬಂದಿದೆ.ಈ ಹಿಂದೆಯೂ ಲಿಂಗಾಯತ ಧರ್ಮ ಒಡೆಯುವ ಯತ್ನ ಮಾಡಿದರು. ಈಗಲೂ ಅ ಪಯತ್ನ ಮಾಡುತ್ತಿದ್ದಾರೆ, ಅದು ಸಫಲವಾಗಲ್ಲ ಎಂದರು.

ಸದೃಢ ಸರ್ಕಾರಕ್ಕಾಗಿ ಸ್ಪಷ್ಟ ಬಹುಮತ ನೀಡಿ ಎಂಬುದು ನಮ್ಮ ಬೇಡಿಕೆ.ಕಾರ್ಯಕರ್ತರೇ ಕಟ್ಟಿ ಬೆಳೆಸಿರುವ ಪಕ್ಷ ಬಿಜೆಪಿ.ಅಭ್ಯರ್ಥಿಗಳ ಆಯ್ಕೆಯಲ್ಲಿ ನಾವು 3 ಹಂತದ ಪರೀಕ್ಷೆ ನಡೆಸಿದ್ದೆವು. ನಾವು ದೇಶದ ಪ್ರಜಾಪ್ರಭುತ್ವವನ್ನ ಗೌರವಿಸುತ್ತೇವೆ. ಗೌರವಿಸುವುದರ ನಾವು ಅದನ್ನ ಅಳವಡಿಸಿಕೊಳ್ಳುತ್ತೇವೆ.ನಾವು ಹಿರಿಯರಿಗೂ ಪ್ರಾತಿನಿಧ್ಯ ಕೊಟ್ಟಿದ್ದೇವೆ. ಜೊತೆ ಜೊತೆಗೆ ಹೊಸ ಮುಖಗಳಿಗೂ ಅವಕಾಶ ಕೊಟ್ಟಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್,ಮೈ ವಿ ರವಿಶಂಕರ್,ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಸೇರಿದಂತೆ ಇತರರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next