Advertisement

ಪುತ್ತೂರಿನಲ್ಲಿ ರೈ- ಪುತ್ತಿಲ ಫೈಟ್; ಕರಾವಳಿಯ ಯಾವ ಕ್ಷೇತ್ರದಲ್ಲಿ ಯಾರು ಮುನ್ನಡೆ?

11:16 AM May 13, 2023 | Team Udayavani |

ಮಂಗಳೂರು/ಉಡುಪಿ: ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವು ಆರಂಭಿಕ ಮುನ್ನಡೆ ಪಡೆದಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಸುರತ್ಕಲ್ ನ ಎನ್ ಐಟಿಕೆಯಲ್ಲಿ ನಡೆಯುತ್ತಿದ್ದರೆ, ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಮತ ಎಣಿಕೆಯು ಉಡುಪಿಯ ಸೈಂಟ್ ಸಿಸಿಲಿಯಲ್ಲಿ ನಡೆಯುತ್ತಿದೆ.

ದಕ್ಷಿಣ ಕನ್ನಡ

ಬಂಟ್ವಾಳ ಐದನೇ ಸುತ್ತಿನ ಮತ ಎಣಿಕೆಯ ಬಳಿಕ ಬಂಟ್ವಾಳ ಬಿಜೆಪಿ ರಾಜೇಶ್ 5198 ನಾಯಕ್ ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ರಾಜೇಶ್ ನಾಯಕ್ ಗೆ 27778 ಮತಗಳು ಲಭಿಸಿದ್ದರೆ, ಕಾಂಗ್ರೆಸ್ ನ ರಮಾನಾಥ್ ರೈಗೆ 22580 ಮತಗಳು ಸಿಕ್ಕಿದೆ.

ಮಂಗಳೂರು ದಕ್ಷಿಣ ದ 9ನೇ ಸುತ್ತಿನ ಮತ ಎಣಿಕೆಯ ಬಳಿಕ ಬಿಜೆಪಿಯ ವೇದವ್ಯಾಸ ಕಾಮತ್ 53474 ಮತಗಳ ಮುನ್ನಡೆ ಸಾಧಿಸಿದ್ದಾರೆ. ವೇದವ್ಯಾಸ ಕಾಮತ್ ಗೆ 44736 ಮತಗಳು ಸಿಕ್ಕಿದ್ದರೆ, ಕಾಂಗ್ರೆಸ್ ನ ಜೆ.ಆರ್ ಲೋಬೋ ಗೆ 31294 ಮತಗಳು ಲಭ್ಯವಾಗಿದೆ.

Advertisement

ರಾಜ್ಯದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಸಾಧಿಸಿದ್ದಾರೆ. ಅಶೋಕ್ ಕುಮಾರ್ ರೈ 27421 ಮತ ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ 27512 ಮತ ಪಡೆದಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಗೌಡ 17644 ಮತ ಪಡೆದಿದ್ದಾರೆ.

ಮಂಗಳೂರು ಕ್ಷೇತ್ರ ದ ಐದನೇ ಸುತ್ತಿನ ಮತ ಎಣಿಕೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ನ ಯುಟಿ ಖಾದರ್ ಗೆ 24637 ಮತಗಳು ಸಿಕ್ಕಿದ್ದರೆ, ಬಿಜೆಪಿಯ ಸತೀಶ್ ಕುಂಪಲ ಗೆ 13593 ಮತಗಳು ಲಭ್ಯವಾಗಿದೆ.

ಮಂಗಳೂರು ಉತ್ತರದ ನಾಲ್ಕನೇ ಸುತ್ತಿನ ಮತ ಎಣಿಕೆಯ ಬಳಿಕ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿಗೆ 6810 ಮತಗಳ ಮುನ್ನಡೆ ಸಿಕ್ಕಿದೆ. ಭರತ್ ಶೆಟ್ಟಿ‌ 23381 ಮತಗಳು ಪಡೆದಿದ್ದರೆ, ಕಾಂಗ್ರೆಸ್ ನ ಇನಾಯತ್ ಆಲಿ 16571 ಮತ ಪಡೆದಿದ್ದಾರೆ.

ಮೂಡಬಿದಿರೆ ನಾಲ್ಕನೇ ಸುತ್ತಿನ ಮತ ಎಣಿಕೆಯ ಬಳಿಕ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ 6523 ಮತಗಳ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ನ ಮಿಥುನ್ ರೈಗೆ ಹಿನ್ನಡೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಐದನೇ ಸುತ್ತಿನ ಮತ ಎಣಿಕೆಯ ಬಳಿಕ ಹರೀಶ್ ಪೂಂಜಾ 4971 ಮತಗಳ ಮುನ್ನಡೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಗೆ 30183 ಮತಗಳು ಲಭ್ಯವಾಗಿದ್ದರೆ, ಕಾಂಗ್ರೆಸ್ ನ ರಕ್ಷಿತ್ ಶಿವರಾಂಗೆ 25212 ಮತಗಳು ಸಿಕ್ಕಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಐದನೇ ಸುತ್ತು ಮತ ಎಣಿಕೆಯ ಬಳಿಕ ಬಿಜೆಪಿಯ ಭಾಗೀರಥಿ ಮುರುಳ್ಯ 5847 ಮತಗಳ ಮುನ್ನಡೆಯಲ್ಲಿದ್ದಾರೆ.

ಉಡುಪಿ

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕಾರ್ಕಳ ಕ್ಷೇತ್ರದಲ್ಲಿ ಸಚಿವ ಸುನೀಲ್ ಕುಮಾರ್ ಸತತ ಮುನ್ನಡೆ ಸಾಧಿಸಿದ್ದಾರೆ. ಎಂಟು ಸುತ್ತಿನ ನಂತರ ಬಿಜೆಪಿಯ ಸುನೀಲ್ 39886 ಮತ ಪಡೆದಿದ್ದರೆ, ಕಾಂಗ್ರೆಸ್ ನ ಉದಯ್ ಶೆಟ್ಟಿ 37895 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ 2432 ವೋಟ್ ಪಡೆದಿದ್ದಾರೆ.

ಕುಂದಾಪುರ ಕ್ಷೇತ್ರದಲ್ಲಿ 6 ಸುತ್ತಿನ ಬಳಿಕ ಬಿಜೆಪಿಯ ಕಿರಣ್ ಕೊಡ್ಗಿ 38897 ಮತ ಪಡೆದಿದ್ದರೆ, ಕಾಂಗ್ರೆಸ್ ನ ದಿನೇಶ್ ಹೆಗ್ಡೆ 21347 ಮತ ಪಡೆದು ಹಿನ್ನಡೆಯಲ್ಲಿದ್ದಾರೆ.

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ 24974 ಮತ ಪಡೆದು ಮುನ್ನಡೆ ಸಾಧಿಸಿದ್ದು, ಗುರುರಾಜ ಗಂಟಿಹೊಳಿ ಅವರು 24588 ಮತ ಪಡೆದಿದ್ದಾರೆ.

ಉಡುಪಿ ಕ್ಷೇತ್ರದಲ್ಲಿ ಬಿಜೆಪಿ ಯಶಪಾಲ್ ಸುವರ್ಣ 32710 ಮತ ಪಡೆದು ಮುನ್ನಡೆ ಸಾಧಿಸಿದ್ದರೆ, ಪ್ರಸಾದ್ ರಾಜ್ ಕಾಂಚನ್ 25717 ಮತ ಪಡೆದಿದ್ದಾರೆ.

ಕಾಪು ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್ ಗುರ್ಮೆ 34711 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದರೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ 27426 ಮತ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next