Advertisement

Karnataka Election 2023; ಕಾರ್ಟೂನ್‌ ಹೋರ್ಡಿಂಗ್ಸ್‌ಗಳಲ್ಲಿ ಮತ ಜಾಗೃತಿ!

12:11 PM Apr 20, 2023 | Team Udayavani |

ಮಂಗಳೂರು: ನಗರದ ಯುವ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ಯತ್ನವಾಗಿ ವಿನೂತನ ಪ್ರಯೋಗಗಳನ್ನು ನಡೆಸುತ್ತಿರುವ ಸ್ವೀಪ್‌ ಜಿಲ್ಲಾ ಸಮಿತಿ ಈಗ ರ್ಟೂ ಹೋರ್ಡಿಂಗ್‌ ಮೂಲಕ ಮತಜಾಗೃತಿಯನ್ನು ಹಮ್ಮಿಕೊಂಡಿದೆ.

Advertisement

ನಗರದ ಪ್ರಮುಖ ಸ್ಥಳಗಳಲ್ಲಿ ತುಳುನಾಡಿನ ಹಾಸ್ಯ ಕಲಾವಿದರಾದ ಅರವಿಂದ ಬೋಳಾರ್‌, ನವೀನ್‌ ಡಿ. ಪಡೀಲ್‌ ಅವರ ಮತದಾನ ಜಾಗೃತಿಯ ಹಾಸ್ಯಮಯ ಕಾಟೂìನ್‌ ಹೋರ್ಡಿಂಗ್‌ಗಳು ಗಮನ ಸೆಳೆಯುತ್ತಿವೆ. ನಗರದ ಸ್ಟೇಟ್‌ಬ್ಯಾಂಕ್‌, ಏರ್‌ಪೋರ್ಟ್‌ ರಸ್ತೆ, ಹಂಪನಕಟ್ಟೆ ರಸ್ತೆಗಳಲ್ಲಿ ಈ ಹೋರ್ಡಿಂಗ್‌ಗಳನ್ನು ಹಾಕಲಾಗಿದ್ದು, ದ.ಕ. ಜಿಲ್ಲಾ ಸ್ವೀಪ್‌ ಐಕಾನ್‌ಗಳಲ್ಲಿ ಒಬ್ಬರಾಗಿರುವ ಒಂದು ಮೊಟ್ಟೆಯ ಕತೆ ಖ್ಯಾತಿಯ ರಾಜ್‌ ಬಿ. ಶೆಟ್ಟಿ ಅವರ ರ್ಟೂ ಕೂಡ ಹೋರ್ಡಿಂಗ್‌ ಆಗಿ ಪ್ರಮುಖ ಸ್ಥಳದಲ್ಲಿ ರಾರಾಜಿಸಲು ಸಿದ್ಧವಾಗಿದೆ.

ಮತದಾನ ಜಾಗೃತಿ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವೀಪ್‌ನ ದ.ಕ. ಜಿಲ್ಲಾ ಸಮಿತಿ ಜತೆ ಕೈ ಜೋಡಿಸಿರುವ ಜಾನ್‌ ಚಂದ್ರನ್‌ ಅವರ ನೇತೃತ್ವದಲ್ಲಿ ಕರಾವಳಿಯ ಇತರ 18 ಕಾರ್ಟೂನಿಸ್ಟ್‌ಗಳ ಸಹಕಾರದಲ್ಲಿ ಸ್ವೀಪ್‌ನಿಂದ ಜಾಗೃತಿ ಅಭಿಯಾನದಡಿ ಈಗಾಗಲೇ ನಗರದ ಸಂತ ಅಲೋಶಿಯಸ್‌, ಸಂತ ಆ್ಯಗ್ನೆಸ್‌, ಬಲ್ಮಠದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ವಿದ್ಯಾರ್ಥಿಗಳನ್ನು
ಕೇಂದ್ರೀಕರಿಸಿಕೊಂಡು ಕಾರ್ಟೂನ್‌ ಪ್ರದರ್ಶನಗಳನ್ನು ನಡೆಸಲಾಗಿದೆ.

ಸ್ವೀಪ್‌ ನೇತೃತ್ವದಲ್ಲಿ ಕಾಲೇಜುಗಳಲ್ಲದೆ, ಈ ಅಭಿಯಾನ ಅಪಾರ್ಟ್‌ ಮೆಂಟ್‌ಗಳಲ್ಲಿಯೂ ನಡೆಯುತ್ತಿದ್ದು, ಕರಾವಳಿಯ ಹಲವಾರು ಕಾರ್ಟೂನಿಸ್ಟ್‌ ಗಳು ಸಹಕರಿಸುತ್ತಿದ್ದಾರೆ. ಇದಲ್ಲದೆ ನನ್ನ ಕೆಲವು ಆಯ್ದ ಕಾರ್ಟೂನ್‌ ಗಳನ್ನು ನಗರದ ಪ್ರಮುಖ ಸ್ಥಳಗಳಲ್ಲಿ ಹೋರ್ಡಿಂಗ್‌ ಆಗಿ ಬಳಸಲಾಗಿದೆ.

ಯುವ ಮತದಾರರನ್ನು ಆಕರ್ಷಿಸುವ ಸಲುವಾಗಿ ತುಳುನಾಡಿನ ಹಾಸ್ಯ ಕಲಾವಿದರನ್ನು ಕಾಟೂìನ್‌ಗಳಲ್ಲಿ ಬಳಸಲಾಗಿದೆ. ಇದಲ್ಲದೆ, ಹೊರ ರಾಜ್ಯ, ಜಿಲ್ಲೆ, ದೇಶಗಳಲ್ಲಿರುವ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯವೂ ಕಾರ್ಟೂನ್‌ ಮೂಲಕ ನಡೆಸಲಾಗುತ್ತಿದೆ ಎನ್ನುತ್ತಾರೆ ಜಾನ್‌ಚಂದ್ರನ್‌, ಕಾರ್ಟೂನಿಸ್ಟ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next