Advertisement

Karnataka Election 2023: ವೋಟರ್‌ ಐಡಿ ಇಲ್ಲದೆಯೂ ಮತ ಹಾಕಬಹುದು..ಈ ದಾಖಲೆಗಳಿದ್ದರೂ ಸಾಕು…

12:48 PM May 10, 2023 | Team Udayavani |

ಉಡುಪಿ: ರಾಜ್ಯಾದ್ಯಂತ ಬಿರುಸಿನಿಂದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಹಲವೆಡೆ ಇವಿಎಂ ದೋಷದಿಂದಾಗಿ ಮತದಾನ ವಿಳಂಬವಾಗಿದೆ. ಮತ್ತೊಂದೆಡೆ ಮತದಾನ ಮಾಡುವ ಸಂದರ್ಭದಲ್ಲಿ ವೋಟರ್‌ (Voter ID) ಐಡಿ ಮುಖ್ಯವಾಗಿದೆ. ಆದರೆ ವೋಟರ್‌ ಐಡಿ ಇಲ್ಲದಿದ್ದರೆ ಅದಕ್ಕಾಗಿ ಗಾಬರಿಪಡಬೇಕಾಗಿಲ್ಲ. ಯಾಕೆಂದರೆ ಇನ್ನುಳಿದ 11 ದಾಖಲೆಗಳಲ್ಲಿ ಯಾವುದಾದರು ಒಂದನ್ನು ಬಳಸಿ ಮತದಾನ ಮಾಡಬಹುದಾಗಿದೆ.

Advertisement

ಯಾವುದು ಆ ದಾಖಲೆಗಳು?
* ಡ್ರೈವಿಂಗ್‌ ಲೈಸೆನ್ಸ್‌

*ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು ತಮ್ಮ ಐಡಿ ಕಾರ್ಡ್‌ ತೋರಿಸಿ ಮತ ಚಲಾಯಿಸಬಹುದು.

*ಪಾಸ್‌ ಪೋರ್ಟ್‌

*ಪೋಸ್ಟ್‌ ಆಫೀಸ್‌ ಅಥವಾ ಬ್ಯಾಂಕ್‌ ಗಳಲ್ಲಿ ಕೊಡುವ ಫೋಟೋ ಸಹಿತ ಪಾಸ್‌ ಬುಕ್‌

Advertisement

*ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್

*ಎನ್‌ ಪಿಆರ್‌ ಅಡಿ ವಿತರಣೆ ಮಾಡುವ ಸ್ಮಾರ್ಟ್‌ ಕಾರ್ಡ್‌

*ನರೇಗಾ ಜಾಬ್‌ ಕಾರ್ಡ್‌

*ಕಾರ್ಮಿಕ ಇಲಾಖೆ ನೀಡುವ ಆರೋಗ್ಯ ವಿಮೆ ಸ್ಮಾರ್ಟ್‌ ಕಾರ್ಡ್‌

*ಪೋಟೊ ಸಹಿತ ಪಿಂಚಣಿ ದಾಖಲಾತಿ

ಇನ್ನು ಶಾಸಕರು ಹಾಗೂ ಸಂಸದರು ತಮಗೆ ನೀಡಿರುವ ಅಧಿಕೃತ ಐಡಿ ಕಾರ್ಡ್‌ ಬಳಸಿ ಮತದಾನ ಮಾಡಬಹುದಾಗಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಲೇ ಬೇಕು. ಮತದಾರರ ಪಟ್ಟಿಯಲ್ಲಿ ಇರುವ ಹೆಸರು ಹಾಗೂ ವೋಟರ್‌ ಐಡಿ ಕಾರ್ಡ್‌ ನಲ್ಲಿ ಇರುವ ಮಾಹಿತಿಗೂ ಹೋಲಿಕೆ ಆಗಬೇಕು. ವೋಟರ್‌ ಐಡಿ ಕಾರ್ಡ್‌ ಇದ್ದು, ವೋಟರ್‌ ಲಿಸ್ಟ್‌ ನಲ್ಲಿ ಹೆಸರು ಇಲ್ಲದಿದ್ದರೆ ಮತದಾನ ಮಾಡಲು ಅವಕಾಶ ಇಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next