Advertisement

ಅಪಾರ್ಟ್‌ಮೆಂಟ್‌ ಗಳ ಸ್ಟಾಂಪ್ ಡ್ಯೂಟಿ ಸುಂಕ 5% ರಿಂದ 3% ಗೆ ಇಳಿಕೆ ..!

11:15 AM Mar 09, 2021 | Team Udayavani |

ಬೆಂಗಳೂರು :  ಕರ್ನಾಟಕ ಸರ್ಕಾರ ಆಸ್ತಿಯ ಮೇಲಿನ ಸ್ಟಾಂಪ್ ಸುಂಕವನ್ನು ಕಡಿತಗೊಳಿಸಿದೆ. 2021-22ರ ಬಜೆಟ್ ಮಂಡಿಸಿದ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 35-45 ಲಕ್ಷದ ನಡುವಿನ ಅಪಾರ್ಟ್‌ಮೆಂಟ್‌ ಗಳ ಸ್ಟಾಂಪ್ ಡ್ಯೂಟಿ 5% ರಿಂದ 3% ಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ಹಣಕಾಸು ಖಾತೆಯ ಜವಾಬ್ದಾರಿಯನ್ನೂ ಕೂಡ ಹೊಂದಿರುವ ಕರ್ನಾಟಕ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ತಮ್ಮ ಎಂಟನೆಯ ರಾಜ್ಯ ಬಜೆಟ್ ನನ್ನು 2021-22ರ ಆರ್ಥಿಕ ವರ್ಷಕ್ಕೆ ವಿಧಾನಸಭೆಯಲ್ಲಿ ಮಂಡಿಸಿದರು.

ಓದಿ :  ಕಾಂಗ್ರೆಸ್ ನಿಂದ ಮುಂದುವರಿದ ಬಹಿಷ್ಕಾರ: ಸಿಎಂ ಬಂದು ಕಾದರು ಸಭೆಗೆ ಬಾರದ ಸಿದ್ದರಾಮಯ್ಯ!

“ಅಫರ್ಡೇಬಲ್ ಹೌಸಿಂಗ್ ಗಳನ್ನು ಉತ್ತೇಜಿಸಲು 35 ರಿಂದ  45 ಲಕ್ಷ ಮೌಲ್ಯದ ಅಪಾರ್ಟ್‌ಮೆಂಟ್‌ ಗಳ ಮೊದಲ ನೋಂದಣಿಗೆ ಸ್ಟ್ಯಾಂಪ್ ಡ್ಯೂಟಿ ಸುಂಕವನ್ನು 5% ರಿಂದ 3% ಗೆ ಇಳಿಸಲು ಉದ್ದೇಶಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಹಣಕಾಸು ಖಾತೆಯನ್ನು ಹೊಂದಿರುವ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರು 2021-22ರ ಆರ್ಥಿಕ ವರ್ಷದ ರಾಜ್ಯ ಬಜೆಟ್ ಅನ್ನು ಸೋಮವಾರ(ಮಾ. 8) ವಿಧಾನಸಭೆಯಲ್ಲಿ ಮಂಡಿಸಿದ್ದರು.

Advertisement

ಓದಿ : ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಎರಡು ವಾಹನದಲ್ಲಿ ಭಾರಿ ಪ್ರಮಾಣದ ಸ್ಪೋಟಕ ಪತ್ತೆ!

Advertisement

Udayavani is now on Telegram. Click here to join our channel and stay updated with the latest news.

Next