Advertisement
ರಾಷ್ಟ್ರೀಯ ಆರೋಗ್ಯ ಅಭಿಯಾನದ ಪಿಎಂ – ಅಭಿಮ್ ಯೋಜನೆಯನ್ವಯ ಈ ಕಾಮಗಾರಿ ನಡೆಸಲಾಗುತ್ತದೆ ಎಂದು ಸಚಿವ ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಸಮಗ್ರ ವಿಮಾ ಭದ್ರತೆ ಒದಗಿಸಲು ಆಲೀಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ, ಮೇಘಸ್ಫೋಟ ಮತ್ತು ಗುಡುಗು ಮಿಂಚಿನಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ನಷ್ಟ ಸಂಭವಿಸಿದ್ದಲ್ಲಿ ಕ್ಷೇತ್ರಾಧಾರಿತವಾಗಿ ಬೆಳೆ ನಷ್ಟ ಪರಿಹಾರವನ್ನು ಸಂಪುಟದಲ್ಲಿ ಇತ್ಯರ್ಥಗೊಳಿಸಲಾಗಿದೆ.
Related Articles
Advertisement
ಸಾವಯವ ಮತ್ತುಸಿರಿಧಾನ್ಯ ಹಬ್ರಾಜ್ಯದ ಸಾವಯವ ಮತ್ತು ಸಿರಿಧಾನ್ಯ ಉತ್ಪಾದಕರಿಗೆ, ಮಾರುಕಟ್ಟೆ ದಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ಮಾರುಕಟ್ಟೆ ಸಂಪರ್ಕವನ್ನು ವಿಸ್ತರಿಸಲು ಹೆಬ್ಟಾಳದಲ್ಲಿ ಸಿರಿಧಾನ್ಯ ಹಬ್ ಅನ್ನು 200 ಕೋಟಿ ರೂ. ಅನುದಾನದಲ್ಲಿ ಅನುಷ್ಠಾನಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ. ಎಐ ಉತ್ಕೃಷ್ಟತಾ ಕೇಂದ್ರ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಲ್ಲಿ ಉತ್ಕೃಷ್ಟತಾ ಕೇಂದ್ರವನ್ನು 28 ಕೋಟಿ ರೂ. ಅಂದಾಜು ಮೊತ್ತದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದರ ಜತೆಗೆ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಕಾರ್ಯಸ್ಥಾನ ಸ್ಥಾಪಿಸಲು ಕರ್ನಾಟಕವನ್ನು ಆದ್ಯತೆಯ ತಾಣವಾಗಿ ಬಳಕೆ ಮಾಡುವ ಗುರಿ ಹೊಂದಿರುವ ಜಾಗತಿಕ ಸಾಮರ್ಥ್ಯಗಳ ಕೇಂದ್ರಗಳ (ಜಿಸಿಸಿ) ಸಮಗ್ರ ನೀತಿಗೂ ಒಪ್ಪಿಗೆ ದೊರೆತಿದೆ. ಸಂಪುಟದ ಇತರ ನಿರ್ಣಯಗಳು
ರಾಜ್ಯ ಲೋಕಸೇವಾ ಆಯೋಗದ 2023-24ನೇ ಸಾಲಿನ ವಾರ್ಷಿಕ ಈ ವರದಿಯನ್ನು ವಿಧಾನಮಂಡಲದ ಮುಂದೆ ಮಂಡಿಸಲು ಒಪ್ಪಿಗೆ.
ವಿಧಾನ ಪರಿಷತ್ತಿನ 2 ಸ್ಥಾನಗಳಿಗೆ ಇಬ್ಬರು ಸದಸ್ಯರನ್ನು ರಾಜ್ಯಪಾಲ ರಿಂದ ನಾಮನಿರ್ದೇಶನ ಮಾಡಲು ಸಿಎಂಗೆ ಅಧಿಕಾರ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 69,919 ಅಂಗನವಾಡಿ ಗಳಿಗೆ 3,000 ರೂ. ಘಟಕ ವೆಚ್ಚದಂತೆ 2024-25ನೇ ಸಾಲಿನಲ್ಲಿ ಶಾಲಾ ಪೂರ್ವ ಶಿಕ್ಷಣ ಕಿಟ್ 20.98 ಕೋಟಿ ರೂ. ಮೊತ್ತದಲ್ಲಿ ಖರೀದಿ.
ಅಂಗನವಾಡಿಗಳಿಗೆ ಎಲ…ಇಡಿ ಮತ್ತು ಮತ್ತು ಇತರ ಸೌಲಭ್ಯಗಳನ್ನು 174.75 ಕೋಟಿ ರೂ.ಗಳಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ.
ರಾಮನಗರ ಜಿÇÉೆಯ ಚನ್ನಪಟ್ಟಣ ಸರಕಾರಿ ರೇಷ್ಮೆ ತರಬೇತಿ ಸಂಸ್ಥೆಯ ಆವರಣದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣ ಹಂತ-2ರ ಕಾಮಗಾರಿಯನ್ನು 125 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಡಾ| ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣದ 13.94 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಘಟನೋತ್ತರ ಆಡಳಿತಾತ್ಮಕ ಅನುಮೋದನೆ.
ಸನ್ನಡತೆ ಆಧಾರದಲ್ಲಿ ಬೆಂಗಳೂರು ಕಾರಾಗೃಹದ 19, ಮೈಸೂರು-4, ಬೆಳಗಾವಿ-9, ಕಲಬುರಗಿ-7, ವಿಜಯಪುರ-4, ಬಳ್ಳಾರಿ-9 ಮತ್ತು ಧಾರವಾಡ ಕಾರಾಗೃಹದಲ್ಲಿರುವ 3 ಕೈದಿಗಳಿಗೆ ಬಿಡುಗಡೆ ಭಾಗ್ಯ.
2006 ಎಪ್ರಿಲ್ 1ರ ಪೂರ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ರಾಜ್ಯ ವಿಮಾ ಇಲಾಖೆ ಸೇವೆಗೆ ಸೇರಿದ ಮತ್ತು ನಂತರದಲ್ಲಿ ನಿಯಮಾನುಸಾರ ಸರಕಾರದ ಆದೇಶದಂತೆ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಿಗೆ ಬೋಧಕ ಹುದ್ದೆಗಳಿಗೆ ವಿಲೀನಗೊಂಡ ಅರ್ಹ 161 ವೈದ್ಯರ ಸೇವೆಯನ್ನು ಪಿಂಚಣಿ ಉದ್ದೇಶಕ್ಕಾಗಿ ಸಂರಕ್ಷಿಸಿ ಆದೇಶ ಹೊರಡಿಸಲು ನಿರ್ಣಯ.