Advertisement

ಪೋಟೋ ಬಳಕೆ: ಕಾಂಗ್ರೆಸ್‌ ವಿರುದ್ಧ ಬಹುಭಾಷಾ ನಟ ಅಖೀಲ್‌ ಅಯ್ಯರ್‌ ಗರಂ

09:06 PM Sep 23, 2022 | Team Udayavani |

ನವದೆಹಲಿ: ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಕೈಗೊಂಡಿರುವ ಶೇ.40 ಸರ್ಕಾರ ಎಂಬ ಅಭಿಯಾನದಲ್ಲಿ ಅನುಮತಿ ಇಲ್ಲದೆ ಫೋಟೋ ಬಳಕೆ ಮಾಡಿದ್ದಕ್ಕೆ ಬಹುಭಾಷಾ ನಟ, ಕರ್ನಾಟಕ ಮೂಲದ ಅಖೀಲ್‌ ಅಯ್ಯರ್‌ ಕ್ರುದ್ಧಗೊಂಡಿದ್ದಾರೆ. ಜತೆಗೆ ಅದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

“ನನ್ನ ಅನುಮತಿ ಇಲ್ಲದೇ ಕಾನೂನಬಾಹಿರವಾಗಿ ಕಾಂಗ್ರೆಸ್‌ ನನ್ನ ಪೋಟೋ ಬಳಸಿದೆ. ಇದರ ವಿರುದ್ಧ ಕಾನೂನಿನನ್ವಯ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಚಿಂತನೆ ನಡೆಸಿದ್ದೇನೆ’ ಎಂದು ನಟ ಅಖೀಲ್‌ ಅಯ್ಯರ್‌ ಟ್ವೀಟ್‌ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆಗೊಳಿಸಿದ್ದು, ಅದರಲ್ಲಿ ನಟ ಅಖೀಲ್‌ ಅಯ್ಯರ್‌ ಚಿತ್ರ ಬಳಸಲಾಗಿದೆ.


ಅದರಲ್ಲಿ “40 ಪರ್ಸೆಂಟ್‌ ಸರ್ಕಾರದ ಹೊಟ್ಟೆಬಾಕತನವು 54,000 ಯುವಕರ ವೃತ್ತಿ ಜೀವನವನ್ನು ಕಸಿದುಕೊಂಡಿದೆ. 40 ಪರ್ಸೆಂಟ್‌ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಲು ನಮ್ಮೊಂದಿಗೆ ಕೈಜೋಡಿಸಿ. ಕರೆ ಮಾಡಿ ಭ್ರಷ್ಟಾಚಾರದ ಬಗ್ಗೆ ದೂರು ನೀಡಿ.

ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ದೂರನ್ನು ದಾಖಲಿಸಿ. 2023ರಲ್ಲಿ ಕಾಂಗ್ರೆಸ್‌ ಸರ್ಕಾರ ಈ ದೂರಿನ ಕುರಿತು ಕ್ರಮ ಕೈಗೊಳ್ಳಲಿದೆ’ ಎಂದು ಮುದ್ರಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next