Advertisement

ಕಾಂಗ್ರೆಸ್ ನಿಂದ ತಿಂಗಳಿಗೊಂದು ಹೋರಾಟ? ಚುನಾವಣಾ ವಸ್ತುವಿಗೆ ಇನ್ನೂ ಹುಡುಕಾಟ

10:56 AM Aug 16, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಚುನಾವಣಾ “ನೆರೇಟಿವ್ ಸೆಟ್” ಮಾಡುವಲ್ಲಿ ಇನ್ನು ಸಫಲವಾಗದೇ ಇರುವ ಕಾಂಗ್ರೆಸ್ ಈಗ ತಿಂಗಳಿಗೊಂದು ರಾಜ್ಯ ಮಟ್ಟದ ಹೋರಾಟ ನಡೆಸುವುದಕ್ಕೆ ಚಿಂತನೆ ನಡೆಸಿದೆ.

Advertisement

ಸಿದ್ದರಾಮೋತ್ಸವ, ಸ್ವಾತಂತ್ರ್ಯ ದಿನಾಚರಣೆಯ ಫ್ರೀಡಂ ಮಾರ್ಚ್ ಕಾಂಗ್ರೆಸ್ ಗೆ ತಕ್ಕಮಟ್ಟಿಗಿನ ಯಶಸ್ಸು ನೀಡಿದೆ. ಆದರೆ ಚುನಾವಣಾ ನೆರೇಟಿವ್ ಸೆಟ್ ಮಾಡುವುದಕ್ಕೆ ಇನ್ಬೂ ಸಾಧ್ಯವಾಗಿಲ್ಲ. 2013 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿಕ್ಕಂತ ಅಕ್ರಮ ಗಣಿಗಾರಿಕೆ ಹಾಗೂ ದುರಾಡಳಿತದ ಅಸ್ತ್ರ ಕಾಂಗ್ರೆಸ್ ಗೆ ಲಭಿಸಿಲ್ಲ. ಹೀಗಾಗಿ ಚುನಾವಣಾ ವಸ್ತುವಿನ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರು ಮುಳುಗಿದ್ದಾರೆ.

ಇದನ್ನೂ ಓದಿ:ಅತಿಯಾದ ಹಸ್ತಕ್ಷೇಪ: ಭಾರತೀಯ ಫುಟ್ ಬಾಲ್ ಸಂಸ್ಥೆಯನ್ನು ಅಮಾನತು ಮಾಡಿದ ಫಿಫಾ

ಆಗಸ್ಟ್ ತಿಂಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಪ್ರದರ್ಶನ ಕಾರ್ಯಕ್ರಮಗಳು ಮುಕ್ತಾಯಗೊಂಡಿದೆ. ಹೀಗಾಗಿ ಮುಂದಿನ ನಡೆ ಏನು ಎಂಬ ಪ್ರಶ್ನೆ ಸಹಜವಾಗಿಯೇ ಕೈ ಪಾಳಯವನ್ನು ಕಾಡುತ್ತಿದೆ. ಸೆಪ್ಟೆಂಬರ್ ನಲ್ಲಿ ಕಾಂಗ್ರೆಸ್‍ನಿಂದ ಮತ್ತೊಂದು ಹೋರಾಟಕ್ಕೆ ಸಿದ್ಧತೆ ಆರಂಭವಾಗಿದೆ. ತಿಂಗಳಿಗೊಂದು ಜನರ ಮನಸ್ಸನ್ನು ಸೆಳೆಯುವ ಹೋರಾಟ ರೂಪಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next