Advertisement

ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾ? ನೀವೇ ಯೋಚಿಸಿ: ಸಿಎಂ

03:17 PM Apr 02, 2024 | Team Udayavani |

ಮೈಸೂರು: ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದೆ ಇರುವ ದೇಶದ ಪ್ರಧಾನಿ ಮತ್ತೆ ಅಧಿಕಾರಕ್ಕೆ ಬರಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಜನತೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

Advertisement

ಚಾಮರಾಜ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಿ ಮೈಸೂರಿನ ಅಭಿಷೇಕ್ ವೃತದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದ ಸಮಸ್ಯೆಗಳಿಗೆ ಪರಿಹಾರ ಕೊಡುವ ಪ್ರಯತ್ನ ಮಾಡಿದ್ದಾರಾ ? ನನ್ನ ಪ್ರಕಾರ 10 ವರ್ಷಗಳಲ್ಲಿ ಬರೀ ಸುಳ್ಳು ಹೇಳುವುದನ್ನ ಬಿಟ್ರೆ ಬೇರೆ ಏನ್ನನ್ನು ಮಾಡಿಲ್ಲ. ಬಡವರ, ಕಾರ್ಮಿಕರ ಹಾಗೂ ರೈತರ ಸಮಸ್ಯೆ ಬಗೆ ಹರಿಸಿಲ್ಲ ಎಂದು ಕಿಡಿಕಾರಿದ್ದಾರೆ.

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ದೇಶ ಕಂಡ ಅತ್ಯಂತ ಪ್ರಮಾಣಿಕ ವ್ಯಕ್ತಿ ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ರು. ಆದರೆ ಜನ ಬದಲಾವಣೆ ಬಯಸಿ ನ್ಯಾಷನಲ್ ಡೆಮೋಕ್ರಟಿಕ್ ಅಲೆಯನ್ಸ್ ಗೆ ಅಧಿಕಾರ ಕೊಟ್ಟಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿ ಆದ್ರು ಆದರೆ ಈಗ ಮತ್ತೆ ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಆದರೆ ಬಿಜೆಪಿ ಈ ಬಾರಿ 400 ಸೀಟ್ ಗೆಲ್ತೇವೆ ಮತ್ತೆ ಅಧಿಕಾರ ಕೊಡಿ ಅಂತಿದ್ದಾರೇ. ನೀವೇ ವಿಚಾರ ಮಾಡಿ ಬಿಜೆಪಿಗೆ ಅಧಿಕಾರ ಕೊಡಬೇಕಾ? 2014ರಲ್ಲಿ ಏನೇನು ಮಾಡುತ್ತೇವೆ ಎಂದು ಹೇಳಿದ್ದಾರೆ 2024 ರಲ್ಲಿ ಏನು ಮಾಡಿದ್ದಾರೆ ಎಂಬುದನ್ನು ನೀವೇ ಯೋಚನೆ ಮಾಡಿ. ಇದುವರೆಗೂ ರಾಜ್ಯದ ಯಾವುದೇ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಅಚ್ಚೇ ದಿನ್ ಆಯೇಗಾ ಅಂದ್ರು. ಅಚ್ಚೇ ದಿನ ಬಂತಾ, ಒಳ್ಳೆ ದಿನಗಳು ಬರಲೇ ಇಲ್ಲ. ಪೆಟ್ರೋಲ್ ಡೀಸೆಲ್, ಗ್ಯಾಸ್ ಬೆಲೆ ನಮ್ಮ ಸರ್ಕಾರದಲ್ಲಿ ಕಡಿಮೆ ಇತ್ತು. ಆದರೆ ಇವಾಗ ದುಬಾರಿಯಾಗಿದೆ. ಸದ್ಯ ಚುನಾವಣೆ ಬಂದಿದೆ ಅಂತಾ ಬೆಲೆ ಕಡಿಮೆ ಮಾಡಿದ್ದಾರೆ. ನರೇಂದ್ರ ಮೋದಿ ಒಳ್ಳೆ ದಿನ ಎಲ್ಲಾಪ್ಪ ಬಂತು. ನರೇಂದ್ರ ಮೋದಿ ಕರ್ನಾಟಕಕ್ಕೆ ಯಾವಗಲಾದರೂ ಸಮಸ್ಯೆ ಕೇಳಲು ಬಂದಿದ್ದಾರಾ? ಅವರು ಬರುವುದು ಚುನಾವಣೆ ಸಂಧರ್ಭದಲ್ಲಿ ಮಾತ್ರ. ಬರಗಾಲದಲ್ಲಿ, ಪ್ರವಾಹ ಸಮಯದಲ್ಲಿ ಬಂದಿದ್ದಾರ ಎಂದು ಕಿಡಿಕಾರಿದರು.

ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಪ್ರವಾಹ ಬಂತು. ಇವತ್ತು ನಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಬರಗಾಲ ಬಂದಿದೆ. ರಾಜ್ಯದ ಕಷ್ಟ ಸುಖ ಕೇಳಿದ್ದಾರಾ. ಪ್ರತಾಪ ಸಿಂಹ ನಮ್ಮ ಜಿಲ್ಲೆಯವರಲ್ಲ. ಅವರು ಹಾಸನ ಜಿಲ್ಲೆಯವರು. ಇಲ್ಲಿ ಬಂದು ಪ್ರಲಾಪ ಮಾಡಿದ್ರು. ಹೀಗಾಗಿ ಅವರಿಗೆ ಟಿಕೆಟ್ ಕೊಡಲಿಲ್ಲ. ಪ್ರತಾಪ ಸಿಂಗ ಒಕ್ಕಲಿಗ ಜಾತಿ. ಮೈಸೂರು ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರೇ ಹೆಚ್ಚಿರುವುದು‌ ಒಕ್ಕಲಿಗರಿಗೆ ಟಿಕೆಟ್ ತಪ್ಪಿಸಿ ಅರಸು ಮನೆತನಕ್ಕೆ ಕೊಟ್ಟಿದ್ದಾರೆ. ತುಳಿಸಿದಾಸಪ್ಪ ನಂತರ ಲಕ್ಷ್ಮಣ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಎಂ.ಲಕ್ಷ್ಮಣ್ ನೂರಕ್ಕೆ ನೂರು ಒಕ್ಕಲಿಗ ಎಂದು ಪ್ರತಿಪಾದಿಸಿದರು.

Advertisement

ರಾಜಕೀಯ ಜ್ಞಾನ ಇರುವವರು ಲೋಕಸಭೆಗೆ ಹೋಗಬೇಕು. ನರೇಂದ್ರ ಮೋದಿ ಅವರನ್ನ ಕಂಡರೇ ಗಡ ಗಡ ಅಂತ ಹೆದರಿಕೊಳ್ಳುತ್ತಾರೆ. ಇಂತಹವರನ್ನ ಲೋಕಸಭೆಗೆ ಕಳುಹಿಸಿದ್ರೆ ನಿಮ್ಮ ಪರವಾಗಿ ಕೆಲಸ ಮಾಡುತ್ತಾರಾ. ಲಕ್ಷ್ಮಣ್ ಧೈರ್ಯವಂತ, ಜನಪರವಾದ ಕಾಳಜಿ ಇರುವ ವ್ಯಕ್ತಿ ಎಂದು ಹೇಳಿದರು.

2018ರಲ್ಲಿ ಸಮಿಶ್ರ ಸರ್ಕಾರ ಜಾರಿಗೆ ಬಂತು ಕುಮಾರಸ್ವಾಮಿ ಸಿಎಂ ಆಗಿದ್ರು ಬಿಜೆಪಿಗೆ ಹೋಗಬಾರದು ಅಂಥ ಅವರನ್ನೇ ಸಿಎಂ ಮಾಡಲಾಗಿತ್ತು. ಇದಕ್ಕೆ ದೇವೇಗೌಡರು ಸಹ ಒಪ್ಪಿಕೊಂಡು ಬಿಜೆಪಿ ಜೊತೆ ಹೋಗಲ್ಲ ಅಂದ್ರು. ಒಂದು ವರ್ಷ ಎರೆಡು ತಿಂಗಳು ಚೆನ್ನಗಿತ್ತು ಆಮೇಲೆ ಏನಾಯಿತು ನಿಮಗೆ ಗೊತ್ತೇ ಇದೆ.

ನಾನು ದೇವೇಗೌಡರ ಜೊತೆ ಹಲವು ವರ್ಷಗಳ ಕಾಲ ಇದ್ದವನು. 2009ರಲ್ಲಿ ಜನತಾದಳ ವಿಭಜಯನೆಯಾತು. ಕೃಷ್ಣ ಬೈರೇಗೌಡರು, ಬೊಮ್ಮಾಯಿ ಎಲ್ಲಾ ಜೆ.ಎಚ್.ಪಟೇಲ್ ಜೊತೆ ಹೊದ್ರು ಆದರೆ ನಾವು ಹೋಗಲಿಲ್ಲ. ನಾನು ದೇವೇಗೌಡರು ಎಲ್ಲಾ ಸೇರಿ ಜೆಡಿಎಸ್ ಕಟ್ಟಿದೆವು ಅಲ್ಲದೆ ನಾನು ಜೆಡಿಎಸ್ ನ ಫೌಂಡರ್ ಪ್ರೆಸೆಡಿಂಟ್ ಆಗಿದ್ದೆ ದೇವೇಗೌಡರು ನ್ಯಾಷನಲ್ ಪ್ರೆಸಿಡೆಂಟ್ ಆಗಿದ್ರು, ನಾನು ಆರು ವರ್ಷ ಪಕ್ಷ ಕಟ್ಟಿದ್ದೇನೆ ಆದರೆ ಕೊನೆಗೆ ಜೆಡಿಎಸ್ ಪಕ್ಷದಿಂದ ನನ್ನನ್ನೇ ಹೊರ ಹಾಕಿದ್ರು.

ದೇವೇಗೌಡರ ಪಾರ್ಟಿಗೆ ಓಟ್ ಹಾಕ್ಬೇಕಾ? ದೇವೇಗೌಡರು ಬಿಜೆಪಿ ಜೊತೆ ಹೋಗಿದ್ದಾರೆ, ಜೆಡಿಎಸ್ ಬಿಜೆಪಿ ಮೈತ್ರಿ ಅಪವಿತ್ರ ಮೈತ್ರಿ. 2006ರ ಉಪಚುನಾವಣೆಯಲ್ಲಿ ನನ್ನನ್ನ ಸೋಲಿಸಲು ಕುಮಾರಸ್ವಾಮಿ, ದೇವೇಗೌಡರು ಯಡಿಯುರಪ್ಪ ಎಲ್ಲಾ ಸೇರಿ ಪ್ರಯತ್ನ ಮಾಡಿದ್ರು ಆದ್ರೆ ನೀವು ಕೈ ಹಿಡಿದಿದ್ದಕ್ಕೆ ನಾನು ಎರೆಡು ಬಾರಿ ಸಿಎಂ ಆದೆ.

ನನಗೆ ಇರುವ ಮಾಹಿತಿ ಪ್ರಕಾರ ಈ ಬಾರಿ ದೇವೇಗೌಡ ಅವರ ಕುಟುಂಬದ ಯಾರು ಸಹ ಗೆಲಲ್ಲ. ಮಂಡ್ಯ, ಹಾಸನ, ಕೋಲಾರ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಸೋಲುತ್ತಾರೆ‌ ಅವರ ಅಳಿಯ ಮಂಜುನಾಥ್ ಸಹ ಸೋಲುತ್ತಾರೆ. ದೇವೇಗೌಡರೇ ಬಂದು ಕಣ್ಣೀರು ಹಾಕಬಹುದು ಎಂದು ಹೇಳಿದರು.

ಕೊಟ್ಟ ಮಾತನ್ನು ಹಿಂದೆ ಪಡೆಯಲ್ಲ :
ಚುನಾವಣೆ ನಂತರ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಅಂತ ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ ಆದ್ರೆ‌ ನಾವು ಬಿಜೆಪಿಯವರ ರೀತಿಯಲ್ಲ ನಾವು ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇವೆ. ಬಿಜೆಪಿಯವರಿಗೆ ಸುಳ್ಳೆ ಮನೆ ದೇವರು‌, ನಾವು ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಇದನ್ನೂ ಓದಿ: LS polls: ಚುನಾವಣಾ ಫಲಿತಾಂಶ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ; ಭಗವಂತ‌‌ ಖೂಬಾ

Advertisement

Udayavani is now on Telegram. Click here to join our channel and stay updated with the latest news.

Next