Advertisement
ಚಾಮರಾಜ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಿ ಮೈಸೂರಿನ ಅಭಿಷೇಕ್ ವೃತದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದ ಸಮಸ್ಯೆಗಳಿಗೆ ಪರಿಹಾರ ಕೊಡುವ ಪ್ರಯತ್ನ ಮಾಡಿದ್ದಾರಾ ? ನನ್ನ ಪ್ರಕಾರ 10 ವರ್ಷಗಳಲ್ಲಿ ಬರೀ ಸುಳ್ಳು ಹೇಳುವುದನ್ನ ಬಿಟ್ರೆ ಬೇರೆ ಏನ್ನನ್ನು ಮಾಡಿಲ್ಲ. ಬಡವರ, ಕಾರ್ಮಿಕರ ಹಾಗೂ ರೈತರ ಸಮಸ್ಯೆ ಬಗೆ ಹರಿಸಿಲ್ಲ ಎಂದು ಕಿಡಿಕಾರಿದ್ದಾರೆ.
Related Articles
Advertisement
ರಾಜಕೀಯ ಜ್ಞಾನ ಇರುವವರು ಲೋಕಸಭೆಗೆ ಹೋಗಬೇಕು. ನರೇಂದ್ರ ಮೋದಿ ಅವರನ್ನ ಕಂಡರೇ ಗಡ ಗಡ ಅಂತ ಹೆದರಿಕೊಳ್ಳುತ್ತಾರೆ. ಇಂತಹವರನ್ನ ಲೋಕಸಭೆಗೆ ಕಳುಹಿಸಿದ್ರೆ ನಿಮ್ಮ ಪರವಾಗಿ ಕೆಲಸ ಮಾಡುತ್ತಾರಾ. ಲಕ್ಷ್ಮಣ್ ಧೈರ್ಯವಂತ, ಜನಪರವಾದ ಕಾಳಜಿ ಇರುವ ವ್ಯಕ್ತಿ ಎಂದು ಹೇಳಿದರು.
2018ರಲ್ಲಿ ಸಮಿಶ್ರ ಸರ್ಕಾರ ಜಾರಿಗೆ ಬಂತು ಕುಮಾರಸ್ವಾಮಿ ಸಿಎಂ ಆಗಿದ್ರು ಬಿಜೆಪಿಗೆ ಹೋಗಬಾರದು ಅಂಥ ಅವರನ್ನೇ ಸಿಎಂ ಮಾಡಲಾಗಿತ್ತು. ಇದಕ್ಕೆ ದೇವೇಗೌಡರು ಸಹ ಒಪ್ಪಿಕೊಂಡು ಬಿಜೆಪಿ ಜೊತೆ ಹೋಗಲ್ಲ ಅಂದ್ರು. ಒಂದು ವರ್ಷ ಎರೆಡು ತಿಂಗಳು ಚೆನ್ನಗಿತ್ತು ಆಮೇಲೆ ಏನಾಯಿತು ನಿಮಗೆ ಗೊತ್ತೇ ಇದೆ.
ನಾನು ದೇವೇಗೌಡರ ಜೊತೆ ಹಲವು ವರ್ಷಗಳ ಕಾಲ ಇದ್ದವನು. 2009ರಲ್ಲಿ ಜನತಾದಳ ವಿಭಜಯನೆಯಾತು. ಕೃಷ್ಣ ಬೈರೇಗೌಡರು, ಬೊಮ್ಮಾಯಿ ಎಲ್ಲಾ ಜೆ.ಎಚ್.ಪಟೇಲ್ ಜೊತೆ ಹೊದ್ರು ಆದರೆ ನಾವು ಹೋಗಲಿಲ್ಲ. ನಾನು ದೇವೇಗೌಡರು ಎಲ್ಲಾ ಸೇರಿ ಜೆಡಿಎಸ್ ಕಟ್ಟಿದೆವು ಅಲ್ಲದೆ ನಾನು ಜೆಡಿಎಸ್ ನ ಫೌಂಡರ್ ಪ್ರೆಸೆಡಿಂಟ್ ಆಗಿದ್ದೆ ದೇವೇಗೌಡರು ನ್ಯಾಷನಲ್ ಪ್ರೆಸಿಡೆಂಟ್ ಆಗಿದ್ರು, ನಾನು ಆರು ವರ್ಷ ಪಕ್ಷ ಕಟ್ಟಿದ್ದೇನೆ ಆದರೆ ಕೊನೆಗೆ ಜೆಡಿಎಸ್ ಪಕ್ಷದಿಂದ ನನ್ನನ್ನೇ ಹೊರ ಹಾಕಿದ್ರು.
ದೇವೇಗೌಡರ ಪಾರ್ಟಿಗೆ ಓಟ್ ಹಾಕ್ಬೇಕಾ? ದೇವೇಗೌಡರು ಬಿಜೆಪಿ ಜೊತೆ ಹೋಗಿದ್ದಾರೆ, ಜೆಡಿಎಸ್ ಬಿಜೆಪಿ ಮೈತ್ರಿ ಅಪವಿತ್ರ ಮೈತ್ರಿ. 2006ರ ಉಪಚುನಾವಣೆಯಲ್ಲಿ ನನ್ನನ್ನ ಸೋಲಿಸಲು ಕುಮಾರಸ್ವಾಮಿ, ದೇವೇಗೌಡರು ಯಡಿಯುರಪ್ಪ ಎಲ್ಲಾ ಸೇರಿ ಪ್ರಯತ್ನ ಮಾಡಿದ್ರು ಆದ್ರೆ ನೀವು ಕೈ ಹಿಡಿದಿದ್ದಕ್ಕೆ ನಾನು ಎರೆಡು ಬಾರಿ ಸಿಎಂ ಆದೆ.
ನನಗೆ ಇರುವ ಮಾಹಿತಿ ಪ್ರಕಾರ ಈ ಬಾರಿ ದೇವೇಗೌಡ ಅವರ ಕುಟುಂಬದ ಯಾರು ಸಹ ಗೆಲಲ್ಲ. ಮಂಡ್ಯ, ಹಾಸನ, ಕೋಲಾರ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಸೋಲುತ್ತಾರೆ ಅವರ ಅಳಿಯ ಮಂಜುನಾಥ್ ಸಹ ಸೋಲುತ್ತಾರೆ. ದೇವೇಗೌಡರೇ ಬಂದು ಕಣ್ಣೀರು ಹಾಕಬಹುದು ಎಂದು ಹೇಳಿದರು.
ಕೊಟ್ಟ ಮಾತನ್ನು ಹಿಂದೆ ಪಡೆಯಲ್ಲ :ಚುನಾವಣೆ ನಂತರ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಅಂತ ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ ಆದ್ರೆ ನಾವು ಬಿಜೆಪಿಯವರ ರೀತಿಯಲ್ಲ ನಾವು ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇವೆ. ಬಿಜೆಪಿಯವರಿಗೆ ಸುಳ್ಳೆ ಮನೆ ದೇವರು, ನಾವು ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇದನ್ನೂ ಓದಿ: LS polls: ಚುನಾವಣಾ ಫಲಿತಾಂಶ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ; ಭಗವಂತ ಖೂಬಾ