ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾ ರಚನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನ ತಾಳಿರುವುದು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ.
ಮುಖ್ಯಮಂತ್ರಿ ಈ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೆ “ಬಹಿರಂಗವಾಗಿ ಚರ್ಚಿಸುವುದಿಲ್ಲ’ ಎನ್ನುತ್ತಿರುವುದು ಸಚಿವಾಕಾಂಕ್ಷಿಗಳ ಚಿಂತೆಗೆ ಕಾರಣವಾಗಿದೆ.
ಇದರ ನಡುವೆ ಬಿಜೆಪಿ ಶಾಸಕರಲ್ಲಿ ಎರಡು ಬಗೆಯ ಗೊಂದಲ ಆರಂಭ ವಾಗಿದೆ. ಕೆಲವರು ಒಮ್ಮೆಯಾದರೂ ಸಚಿವ ರಾಗೋಣ ಎನ್ನುವ ಲೆಕ್ಕಾಚಾರ ದಲ್ಲಿದ್ದರೆ, ಇನ್ನು ಕೆಲವರು ಇರುವ ಒಂದು ವರ್ಷದಲ್ಲಿ ಸಚಿವರಾಗಿ ಏನೂ ಮಾಡಲಾಗುವುದಿಲ್ಲ, ಕ್ಷೇತ್ರವನ್ನೂ ಉಳಿಸಿಕೊಳ್ಳುವುದು ಕಷ್ಟ ಎಂಬ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.
ಪಕ್ಷದ ವರಿಷ್ಠರು ಬಜೆಟ್ ಅಧಿ ವೇಶನ, ಪಂಚರಾಜ್ಯ ಚುನಾವಣೆ ಗೆಲ್ಲುವ ಕಡೆಗೆ ಹೆಚ್ಚು ಗಮನ ಹರಿಸಿ ದ್ದಾರೆ. ಹಾಗಾಗಿ ಸಿಎಂ ದಿಲ್ಲಿಗೆ ತೆರಳಿ ಸಂಪುಟ ಪುನಾರಚನೆ ಬಗ್ಗೆ ಮಾತುಕತೆ ನಡೆಸಿದರೂ ಮಾರ್ಚ್ ಅಂತ್ಯದವರೆಗೆ ವಿಸ್ತರಣೆ ಅಥವಾ ಪುನಾರಚನೆ ಅನುಮಾನ ಎಂಬ ಲೆಕ್ಕಾ ಚಾರ ಕೆಲವು ಶಾಸಕರದು.
ಮಾರ್ಚ್ ಬಳಿಕ ಸಚಿವರಾಗಿ ಅಧಿ ಕಾರ ವಹಿಸಿಕೊಳ್ಳುವಷ್ಟರಲ್ಲಿ ಜಿಲ್ಲಾ, ತಾ.ಪಂ. ಚುನಾವಣೆ ಎದು ರಾಗ ಲಿದೆ. ಅವುಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೆಗಲೇರುತ್ತದೆ. ಉಸ್ತುವಾರಿ ಜಿಲ್ಲೆಯ ಅಭ್ಯರ್ಥಿಗಳ ಖರ್ಚು ವೆಚ್ಚವನ್ನು ನೀವೇ ಹೊರಬೇಕು ಎಂದು ಪಕ್ಷ ಹೇಳುವ ಸಾಧ್ಯತೆ ಇದೆ. ಹೀಗಾಗಿ ಕೊನೆ ಗಳಿಗೆಯಲ್ಲಿ ಸಚಿವರಾಗಿ ಪ್ರಯೋಜನವಿಲ್ಲ ಎನ್ನುವುದು ಕೆಲವರ ವಾದ.
ಸಚಿವ ಆದರೆ ಸಾಕು:
ಕೆಲವು ಶಾಸಕರು ಇರುವ ಅವಧಿಗೆ ಸಚಿವ ಆದರೆ ಸಾಕು ಎಂದು ಸಂಪುಟ ಸೇರಲು ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ. ತಾವು ಮತ್ತೆ ಆಯ್ಕೆಯಾಗಿ ಬರುತ್ತೇವೋ ಇಲ್ಲವೋ ಎನ್ನುವ ಆತಂಕ ಕೆಲವರದು. ಆಯ್ಕೆಯಾದರೂ ರಾಜ್ಯದಲ್ಲಿ ಬಿಜೆಪಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆಯೋ ಇಲ್ಲವೋ ಎಂಬ ಅನುಮಾನವೂ ಇದೆ. ಹೀಗಾಗಿ ಕಿರು ಅವಧಿಯೇ ಆಗಲಿ, ಸಚಿವರಾಗುವ ಬಯಕೆಯಿಂದ ಕಸರತ್ತು ನಡೆಸಿದ್ದಾರೆ.
ಹಿರಿಯರ ಲೆಕ್ಕಾಚಾರ :
ಸಂಪುಟ ಪುನಾರಚನೆ ಆಗ ಬೇಕೆನ್ನು ವುದು ಬಹುತೇಕ ಶಾಸಕರ ಆಗ್ರಹ. ಆದರೆ ಚುನಾ ವಣೆ ವರ್ಷದಲ್ಲಿ ಸಿಎಂ ಹಿರಿಯ ರನ್ನು ಬದ ಲಾಯಿ ಸುವ ಕಸರತ್ತು ಮಾಡುವುದಿಲ್ಲ. ಖಾಲಿ ಇರುವ 4 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಬಹುದು ಎನ್ನುವ ಲೆಕ್ಕಾಚಾರ ದಲ್ಲಿ ಹಿರಿಯ ಸಚಿವರಿದ್ದಾರೆ.