Advertisement
ಜಿಲ್ಲೆಯಲ್ಲಿ ಜನ ಸಂಚಾರ ಎಂದಿನಂತೆ ಇದ್ದು, ಸರಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ಓಡಾಟ ನಡೆಸಿತ್ತು. ಶಾಲಾ-ಕಾಲೇಜುಗಳು ಕೂಡ ಯಥಾಸ್ಥಿತಿ ಕಾರ್ಯಾಚರಣೆ ನಡೆಸಿದವು. ಖಾಸಗಿ ಮತ್ತು ಸಿಟಿ ಬಸ್ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಲಿಲ್ಲ. ಅಂಗಡಿಗಳು, ಕಚೇರಿಗಳ ವ್ಯಾಪಾರ-ವಹಿವಾಟು ಎಂದಿನಂತೆ ಇತ್ತು. ದ.ಕ. ಜಿಲ್ಲಾ ಟ್ಯಾಕ್ಸಿಮನ್ಸ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಬಂದ್‌ಗೆ ನೈತಿಕ ಬೆಂಬಲ ನೀಡಿದ್ದರೇ ವಿನಾ ಟ್ಯಾಕ್ಸಿ ಸಂಚಾರ ಮೊಟಕುಗೊಳಿಸಲಿಲ್ಲ. ಉಡುಪಿ ಜಿಲ್ಲೆಯಲ್ಲಿ ಜನರಿಗೂ ಬಂದ್ ಕುರಿತು ಗೊತ್ತಿರಲಿಲ್ಲ.
ಬಂದ್‌ಗೆ ಕರೆ ಹಿನ್ನೆಲೆಯಲ್ಲಿ ಅರ್ಕುಳ-ವಳಚ್ಚಿಲ್ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲು ಹೊಡೆದ ಘಟನೆ ನಡೆದಿದ್ದು, ಯಾವುದೇ ಹಾನಿಯಾಗಿಲ್ಲ. ಕಲ್ಲು ಬಸ್ಸಿನ ತಗಡಿಗೆ ಬಿದ್ದಿದೆ. ಉಳಿದಂತೆ ಬಸ್ಸಿಗೆ ಯಾವುದೇ ಹಾನಿಯಾಗಿಲ. ಬಸ್‌ಗಳ ಸಂಚಾರಕ್ಕೂ ಯಾವುದೇ ತೊಂದರೆಯಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ. ಇದೇ ಪರಿಸರದಲ್ಲಿ ಆಂಧ್ರಪ್ರದೇಶ ನೋಂದಣಿಯ ಬಸ್ಸೊಂದಕ್ಕೂ ಕಲ್ಲೆಸೆಯಲಾಗಿದೆ ಎಂಬ ಮಾಹಿತಿಯಿದ್ದು ಪೊಲೀಸ್ ಪ್ರಕರಣ ದಾಖಲಾಗಿಲ್ಲ.