ಬೆಂಗಳೂರು : ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿದ್ದ ಅಹೋರಾತ್ರಿ ಧರಣಿಯ ಪರಿಣಾಮ ವಿಧಾನಸಭಾ ಕಲಾಪ ಮೊಟಕುಗೊಂಡಿದೆ. ಮಾರ್ಚ್ 4ಕ್ಕೆ ಕಲಾಪವನ್ನು ವಿಧಾನಸಭಾಧ್ಯಕ್ಷರು ಮುಂದೂಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ : ನಿಷೇಧಾಜ್ಞೆಯ ನಡುವೆಯೂ ಕಿಡಿಗೇಡಿಗಳಿಂದ ಮೂರು ವಾಹನಗಳಿಗೆ ಬೆಂಕಿ
ಗದ್ದಲದ ಮಧ್ಯೆ ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಸಿಎಂ ಬೊಮ್ಮಾಯಿ ಉತ್ತರ ನೀಡಿದರು. ಬಳಿಕ ಶಾಸಕರು, ಸಚಿವರು ಹಾಗೂ ಸಭಾಧ್ಯಕ್ಷರ ವೇತನ ಮತ್ತು ಭತ್ಯೆ ಪರಿಷ್ಕರಣೆ ವಿಧೇಯಕ ವನ್ನು ಅಂಗೀಕರಿಸಲಾಯಿತು.
ಕುತೂಹಲಕಾರು ಸಂಗತಿ ಎಂದರೆ ಅಹೋರಾತ್ರಿ ಧರಿಣಿಗೆ ಕರೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದನದಲ್ಲಿ ಉಪಸ್ಥಿತರಿರಲಿಲ್ಲ. ಐದು ದಿನಗಳ ಕಲಾಪ ಪ್ರತಿಭಟನೆಗೆ ಕಳೆದು ಹೋಗಿದೆ. ಇದು ಜನರ ಆಶೋತ್ತರಕ್ಕೆ ವಿರುದ್ಧವಾಗಿದೆ. ಈಗಲಾದರೂ ಪ್ರತಿಭಟನೆ ಕೈ ಬಿಡುವಂತೆ ಸ್ಪೀಕರ್ ಕಾಗೇರಿ ಮನವಿ ಮಾಡಿದರು. ಆದರೆ ಕಾಂಗ್ರೆಸ್ ಪ್ರತಿಭಟನೆ ಕೈ ಬಿಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಲಾಪವನ್ನು ಮುಂದೂಡಲಾಗಿದೆ.
ಈ ಮಧ್ಯೆ ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೀಡಿರುವ ಹೇಳಿಕೆಯನ್ನು ಕಾಂಗ್ರೆಸಿಗರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿ ರಾಜೀನಾಮೆಗೆ ಒತ್ತಾಯಿಸಿದರು.