Advertisement

Karnataka: ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

10:58 PM Feb 23, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿರುವ ಹಿನ್ನೆಲೆ ಹಾಗೂ ಹಲವು ಮಸೂದೆಗಳಿಗೆ ಅನುಮೋದನೆ ದೊರೆಯಬೇಕಿರುವುದರಿಂದ ಶುಕ್ರವಾರ ಕೊನೆಗೊಳ್ಳಬೇಕಿದ್ದ ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ.

Advertisement

10 ದಿನಗಳಿಂದ ನಡೆಯುತ್ತಿದ್ದ ವಿಧಾನಮಂಡಲ ಅಧಿವೇಶನವು ಶುಕ್ರವಾರದಂದು ಸರಕಾರದ ಉತ್ತರ ಹಾಗೂ ಧನವಿನಿಯೋಗ ಮಸೂದೆಗೆ ಅನುಮೋದನೆ ಮೂಲಕ ಕೊನೆಗೊಳ್ಳಬೇಕಿತ್ತು. ಆದರೆ ಗುರುವಾರ ಕೇಂದ್ರ ಸರಕಾರದ ವಿರುದ್ಧ ರಾಜ್ಯ ಸರಕಾರ ಕೈಗೊಂಡ ನಿರ್ಣಯದ ವಿರುದ್ಧ ವಿಧಾನಸಭೆಯಲ್ಲಿ ಧರಣಿ ಆರಂಭವಾಗಿದ್ದು, ಇತ್ತ ವಿಧಾನಪರಿಷತ್ತಿನಲ್ಲಿ ಹಲವಾರು ಮಸೂದೆಗಳಿಗೆ ಅನುಮೋದನೆ ದೊರೆಯಬೇಕಿದೆ. ಬಜೆಟ್‌ ಮೇಲಿನ ಚರ್ಚೆಗೆ ಸಿಎಂ ಉತ್ತರ ಕೊಡಬೇಕಿದೆ.

ಇಷ್ಟೆಲ್ಲ ಪ್ರಕ್ರಿಯೆಗಳು ಬಾಕಿ ಇರುವುದರಿಂದ ಶುಕ್ರವಾರ ಕೊನೆಗೊಳ್ಳಬೇಕಿದ್ದ ಕಲಾಪವನ್ನು ಸೋಮವಾರಕ್ಕೆ ವಿಸ್ತರಿಸಲು ಕಲಾಪ ಸಲಹಾ ಸಮಿತಿ ನಿರ್ಣಯಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next