Advertisement
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥರ್ವ ತನ್ನ 7ನೇ ವರ್ಷದಲ್ಲೇ ಈ ಹವ್ಯಾಸ ರೂಢಿಸಿಕೊಂಡಿದ್ದಾನೆ. ಆರಂಭದಲ್ಲಿ ಕುಟುಂಬ ಸದಸ್ಯರು, ನೆರೆಹೊರೆಯ ಮಕ್ಕಳು, ವೃದ್ಧರ ಜನ್ಮದಿನಾಂಕವನ್ನು ತಿಳಿದುಕೊಂಡು ನೆನಪಿಟ್ಟುಕೊಳ್ಳುತ್ತಿದ್ದ. ಆಯಾ ದಿನಾಂಕದಂದು ಅವರಿಗೆ ಜನ್ಮದಿನದ ಶುಭ ಕೋರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ. ಆನಂತರ ದಿನಕಳೆದಂತೆ ಅಂರ್ಜಾಲದಲ್ಲಿ ಮಾಹಿತಿ ಕಲೆಹಾಕಿ, ಸಿನಿಮಾ ಮತ್ತು ಕ್ರಿಕೆಟ್ ತಾರೆಯರು, ಸ್ವಾತಂತ್ರ್ಯ ಯೋಧರು, ರಾಷ್ಟ್ರಪತಿಗಳು, ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಪ್ರಖ್ಯಾತರ ಜನ್ಮದಿನ, ವಿವಾಹ, ಮರಣ ದಿನಾಂಕ, ಅವರ ವಂಶವೃಕ್ಷವನ್ನು ಹೇಳಬಲ್ಲ. ಅರ್ಥವ ಅವರ ಈ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಿಂದ ಮೆಡಲ್ ಹಾಗೂ ಪ್ರಮಾಣ ನೀಡಿ ಗೌರವಿಸಿದೆ. ಸದ್ಯ ಈತ ನಗರದ ಕೆಎಲ್‌ಇ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಮುಂದೆ ಇಂಡಿಯಾ ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌ಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಬಾಲಚಂದ್ರ ಕಟವಟೆ, ಮಿನಿತಾ ಲಕ್ಷ್ಮೀಕಾಂತ ಕಟವಟೆ ಇದ್ದರು.
Advertisement
9 ವರ್ಷದ ಬಾಲಕ ಅಥರ್ವಗೆ ಕರ್ನಾಟಕ ಅಚೀವರ್ಸ್ ಬುಕ್ ರೆಕಾರ್ಡ್ ಪದಕ
02:25 PM Oct 04, 2020 | sudhir |
Advertisement
Udayavani is now on Telegram. Click here to join our channel and stay updated with the latest news.