ಕಾರ್ಕಳ: ವಲಸೆ ಕಾರ್ಮಿಕರ ಪುತ್ರಿ, ಕಾರ್ಕಳ ತಾಲೂಕಿನ ತೆಳ್ಳಾರು ಸುಂದರ ಪುರಾಣಿಕ ಸ್ಮಾರಕ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ವೀಣಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 612 ಅಂಕ ಪಡೆದು ಸಾಧನೆ ಮೆರೆದಿದ್ದಾರೆ.
ಈಕೆ ಮುಂಡಗೋಡು ಮೂಲದ ಲಿಂಗರಾಜ-ಲಕ್ಷ್ಮೀ ದಂಪತಿಯ ಪುತ್ರಿ. ಬಡ ದಂಪತಿ ಕೂಲಿ ಅರಸುತ್ತ ಕಾರ್ಕಳಕ್ಕೆ ಬಂದಿದ್ದರು. ಗಾರೆ ವೃತ್ತಿಯ ದಂಪತಿಗೆ ಇಬ್ಬರು ಪುತ್ರಿಯರು. ಕಿರಿಯವಳೇ ವೀಣಾ. ಹಿರಿಯ ಪುತ್ರಿ ವಿದ್ಯಾ ಭುವನೇಂದ್ರ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದಾರೆ. ಮಕ್ಕಳು ನಮ್ಮಂತೆ ಗಾರೆ ಕೆಲಸ ಮಾಡಬಾರದು ಎನ್ನುವ ಮಹದಾಸೆ ಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಪಣ ತೊಟ್ಟಿದ್ದಾರೆ.
ಶಿಕ್ಷಕರ ಪ್ರೋತ್ಸಾಹ, ಹೆತ್ತವರ
ಬೆಂಬಲದಿಂದ ಎಸೆಸೆಲ್ಸಿ ಯಲ್ಲಿ ಉತ್ತಮ ಅಂಕ ದಾಖ ಲಿಸಲು ಸಾಧ್ಯವಾಯಿತು ಎನ್ನುತ್ತಾರೆ ವೀಣಾ. ತನ್ನ ಶಿಕ್ಷಣಕ್ಕೆ ಮಣಿಪಾಲ ಫೌಂಡೇಶನ್ ಕೂಡ ನೆರವು ನೀಡಿದನ್ನು ಸ್ಮರಿಸುತ್ತಾರೆ ಆಕೆ. ಮುಂದೆ ಎಂಜಿನಿಯರ್ ಆಗಬೇಕೆನ್ನುವ ಬಯಕೆ ಆಕೆಯದು.