Advertisement

Karkala: ಬಸ್‌ ನಿಲ್ದಾಣದಲ್ಲಿ ಲಘು ವಾಹನ!ಬಸ್‌ ನಿಲ್ದಾಣದ ಬಗ್ಗೆ ಪುರಸಭೆ ದಿವ್ಯ ನಿರ್ಲಕ್ಷ್ಯ

05:00 PM Sep 29, 2024 | Team Udayavani |

ಕಾರ್ಕಳ: ನಗರ ಬಸ್‌ ನಿಲ್ದಾಣದ ಒಳಗೆ ಬಸ್‌ಗಳಿಗಿಂತ ಖಾಸಗಿ ವಾಹನಗಳದ್ದೇ ದರ್ಬಾರು! ಬಸ್‌ ನಿಲ್ದಾಣದೊಳಗೆ ಖಾಸಗಿ ವಾಹನ ಪ್ರವೇಶ ನಿರ್ಬಂಧದ ಬಗ್ಗೆ ಪುರಸಭೆಯ ದಿವ್ಯ ನಿರ್ಲಕ್ಷ್ಯ ಮುಂದುವರಿದಿದೆ. ಬಸ್‌ ನಿಲ್ದಾಣದಲ್ಲಿ ಖಾಸಗಿ, ಸರಕಾರಿ ಬಸ್‌ ನಿಲ್ಲಲು ಅವಕಾಶವಿದೆ. ಆದರೆ, ದ್ವಿಚಕ್ರ ವಾಹನ, ಲಘು ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಇದರಿಂದ ಬಸ್‌ಗಳಿಗೆ ಮಾತ್ರವಲ್ಲ, ಪ್ರಯಾಣಿಕರಿಗೂ ಬಸ್‌ ಹತ್ತುವ ಇಳಿಯುವ ವೇಳೆ ಸಮಸ್ಯೆಯಾಗುತ್ತಿದೆ.

Advertisement

ಕಾರ್ಕಳ ಬಸ್‌ನಿಲ್ದಾಣ ವಿಶಾಲ ಜಾಗ ಹೊಂದಿದೆ. ಖಾಸಗಿಯವರು ದಾನ ಪತ್ರದ ಮೂಲಕ ಕೊಟ್ಟ ಜಾಗ ಇದು. ಸೂಕ್ತ ಕಾನೂನು ಪರಿಪಾಲನೆ ಇಲ್ಲದೆ ಇಡೀ ಪರಿಸರ ಅವ್ಯವಸ್ಥಿತವಾಗಿದೆ.

ಸ್ಥಳಾಂತರ ಪ್ರಸ್ತಾವ ಜೀವಂತ
ಕಾರ್ಕಳ ಬಸ್‌ ನಿಲ್ದಾಣ ಬಹುಕಾಲದಿಂದ ವಿವಾದದ ಕೇಂದ್ರಬಿಂದುವಾಗಿದೆ. ಇದನ್ನು ಬಂಡಿಮಠಕ್ಕೆ ಸ್ಥಳಾಂತರ ಮಾಡಬೇಕು ಎಂಬ ಪ್ರಸ್ತಾವ‌ ಜೀವಂತವಾಗಿಯೇ ಇದೆ. ಸುಮಾರು ಎರಡು ಎಕರೆ ಜಾಗದಲ್ಲಿ ಅಂಡಿಮಠ ಬಸ್‌ ನಿಲ್ದಾಣ ಅಭಿವೃದ್ಧಿಗೊಳಿಸಿದ್ದರೂ ಸ್ಥಳಾಂತರವಾಗದೆ ಈ ಹಳೆ ಬಸ್‌ನಿಲ್ದಾಣವೇ ಈಗ ಪ್ರಮುಖ ನಗರ ಬಸ್‌ ನಿಲ್ದಾಣವಾಗಿ ಬಳಕೆಯಾಗುತ್ತಿದೆ.

ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಜತೆ ಸರಕಾರಿ ಬಸ್‌ಗಳೂ ನಿಲ್ಲುತ್ತವೆ. ಸರಕಾರಿ, ಖಾಸಗಿ ಬಸ್‌ ಚಾಲಕರ ನಡುವೆ ಆಗಾಗ್ಗೆ ಘರ್ಷಣೆ ನಡೆಯುತ್ತಿದೆ. ಇಲ್ಲಿ ಇತರ ವಾಹನಗಳು ನಿಲುಗಡೆಗೊಳಿಸುತ್ತಿರುವುದರಿಂದ ಬಸ್‌ಗಳು ತಿರುಗುವ ವೇಳೆ ಸಮಸ್ಯೆಗಳಾಗುತ್ತವೆ.

ಏನೇನು ಮಾಡಬಹುದು?

  • ಖಾಸಗಿ ಮತ್ತು ಸರಕಾರಿ ಬಸ್‌ಗಳಿಗೆ ನಿಲ್ದಾಣದಲ್ಲಿ ಪ್ರತ್ಯೇಕ ಸ್ಥಳ ಗುರುತಿಸುವುದು
  • ಬಸ್‌ ನಿಲ್ದಾಣದೊಳಗೆ ಲಘು, ದ್ವಿಚಕ್ರ ವಾಹನಗಳಿಗೆ ಪ್ರವೇಶ ನಿಷೇಧಿಸುವುದು
  • ಬಸ್‌ ನಿಲ್ದಾಣದಲ್ಲಿ ಸೂಕ್ತ ನಾಮಪಲಕ ಅಳವಡಿಸುವುದು.
  • ಖಾಸಗಿ ಲಘು, ದ್ವಿಚಕ್ರ ವಾಹನದವರಿಗೆ ದಂಡ ವಿಧಿಸುವುದು.
Advertisement
Advertisement

Udayavani is now on Telegram. Click here to join our channel and stay updated with the latest news.

Next