Advertisement
ಅಡಿಕೆ ಬೆಳೆಗಾರರಿಗೆ ಕೊಯ್ಲೋತ್ತರ ನಷ್ಟ ಸಂಭವಿಸುತ್ತಿದೆ. ಮಳೆಯಿಂದಾಗಿ ಅಡಿಕೆ ಒಣಗಿಸಲು ಸಮಸ್ಯೆಯಾಗುತ್ತಿದೆ. ಭತ್ತ ಬೆಳೆಗಾರರು ಕಟಾವು ಪೂರ್ಣಗೊಳಿಸಿದ್ದ ಅನಂತರ ತೆಗೆದಿರಿಸಿದ ಬೈಹುಲ್ಲು ಮಳೆಗೆ ಒದ್ದೆಯಾಗಿ ಹಾನಿಯಾಗುತ್ತಿದೆ.
ಅಕಾಲಿಕ ಮಳೆಯಿಂದ ಆಗುವ ತೊಂದರೆಗಳ ಬಗ್ಗೆ ಸರಕಾರ ವಿಶೇಷ ಗಮನಹರಿಸಬೇಕು. ಇಲಾಖೆ ಮೂಲಕ ಪ್ರತೀ ಗ್ರಾಮಗಳಲ್ಲಿ ರೈತರಿಗೆ ಪ್ರಾಕೃತಿಕವಾಗಿ ಸಂಭವಿಸಿದ ನಷ್ಟದ ಬಗ್ಗೆ ವರದಿ ರೂಪಿಸಿ ಸೂಕ್ತ ಪರಿಹಾರ ನೀಡಬೇಕು ಎನ್ನುತ್ತಾರೆ ಸ್ಥಳೀಯ ಕೃಷಿಕರೂ ಆದ, ಜಿಲ್ಲಾ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ.
Related Articles
ಕಾರ್ಕಳ ತಾಲೂಕಿನಾದ್ಯಂತ 20 ಸಾವಿರಕ್ಕೂ ಅಧಿಕ ಸಣ್ಣ, ದೊಡ್ಡ ರೈತರು ಅಡಿಕೆ ಕೃಷಿಯನ್ನು ಅವಲಂಬಿಸಿದ್ದಾರೆ. 8, 500 ಹೆಕ್ಟೇರ್ ಜಾಗದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಇಲ್ಲಿ ಕೊಯ್ಲು ಮಾಡಿದ ಅಡಕೆಯನ್ನು ಒಣಗಿಸಲು ಸಮಸ್ಯೆಯಾಗುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಮಳೆಯಿಂದಾಗಿ ಹಿಂಗಾರಕ್ಕೆ ಸಮಸ್ಯೆಯಾಗುವ ಆತಂಕ ಎದುರಾಗಿದೆ. ಹಿಂಗಾರದಲ್ಲಿ ನೀರು ನಿಂತರೆ ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮ ಬೀರಲಿದೆ. ಜತೆಗೆ ಎಲೆ ಚುಕ್ಕಿ ರೋಗದ ಭೀತಿಯೂ ಎದುರಾಗಿದೆ.
Advertisement
ಹಾನಿಯಾದಲ್ಲಿ ಸೂಕ್ತ ಪರಿಹಾರಅಕಾಲಿಕ ಮಳೆ ವಾತಾವರಣ ಕೆಲವು ದಿನಗಳು ಹೀಗೇ ಮುಂದುವರಿದಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಬೆಳೆಗಾರರು ಸೂಕ್ತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ತೋಟಗಾರಿಕೆ ಇಲಾಖೆಯಿಂದ ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಅಕಾಲಿಕ ಮಳೆ ಸಂದರ್ಭ ಬೆಳೆಗಳಿಗೆ ಹಾನಿಯಾದಲ್ಲಿ ಸೂಕ್ತ ಪರಿಹಾರವನ್ನು ಪಡೆಯಬಹುದು.
-ಶ್ರೀನಿವಾಸ್, ಸಹಾಯಕ ನಿರ್ದೇಶಕರು, ಕಾರ್ಕಳ ತೋಟಗಾರಿಕೆ ಇಲಾಖೆ. -ಅವಿನ್ ಶೆಟ್ಟಿ