Advertisement

ಕಾರ್ಕಳದಲ್ಲಿ ಸುಂಟರಗಾಳಿ ಅಬ್ಬರ: ಅಪಾರ ಹಾನಿ

11:43 PM Aug 01, 2019 | Team Udayavani |

ಕಾರ್ಕಳ: ಗುರುವಾರ ಬೆಳಗ್ಗೆ 9ರ ವೇಳೆಗೆ ಎಂದಿನಂತೆ ಜನತೆ ತಮ್ಮ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು. ಈ ವೇಳೆ ದಿಢೀರಾಗಿ ಸುಂಟರಗಾಳಿಯೊಂದು ಅಪ್ಪಳಿಸಿ ಕಾರ್ಕಳ ಪುರಸಭೆ ವ್ಯಾಪ್ತಿಯ ಪೆರುವಾಜೆಯನ್ನು ತಲ್ಲಣಗೊಳಿಸಿತು.

Advertisement

ನೋಡನೋಡುತ್ತಿದ್ದಂತೆ ಬಿರುಗಾಳಿ ಅಪ್ಪಳಿಸುತ್ತಿರುವುದನ್ನು ಕಂಡು ಜನ ಭಯಭೀತರಾದರು. ಮರಗಿಡಗಳು ಧರೆಗುರುಳಿದವು. ಮನೆಯ ಹಂಚುಗಳು ಹಾರಿಬಿದ್ದವು. ವಿದ್ಯುತ್‌ ಕಂಬ ನೆಲಕ್ಕಪ್ಪಳಿಸಿತು. ಬದುಕುಳಿಯುವ ಸಾಧ್ಯತೆಯೇ ಇಲ್ಲ ಎಂದುಕೊಳ್ಳುತ್ತಿದ್ದಂತೆ ಎಲ್ಲವೂ ಶಾಂತವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. ಸುಮಾರು 7 ನಿಮಿಷ ಸಮಯ ಬೀಸಿದ ಬಿರುಗಾಳಿಗೆ ಪೆರುವಾಜೆ ಅಕ್ಷರಶಃ ಹಾನಿಗೀಡಾಯಿತು.

Advertisement

Udayavani is now on Telegram. Click here to join our channel and stay updated with the latest news.

Next