Advertisement

ಬೆಳ್ಮಣ್‌: ತಮ್ಮನ ಮನೆಗೆ ಬೆಂಕಿ ಇಟ್ಟು ಕಾರಿನೊಳಗೆ ಸಜೀವ ದಹನನಾದ ಅಣ್ಣ

08:18 AM Jan 26, 2023 | Team Udayavani |

ಬೆಳ್ಮಣ್‌ : ತಮ್ಮನ ಮನೆಗೆ ಕೊಳ್ಳಿಯಿಟ್ಟು ತಾನೂ ಭಸ್ಮವಾದ ಘಟನೆ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ಜ. 25 ರ ಬುಧವಾರ ತಡರಾತ್ರಿ ನಡೆದಿದೆ.

Advertisement

ಸಚ್ಚೇರಿಪೇಟೆಯ ಕೃಷ್ಣ ಸಪಳಿಗ ಬರ್ಬರ ಕೃತ್ಯ ಎಸಗಿದ ವ್ಯಕ್ತಿ.

ಕೃಷ್ಣ ಸಪಳಿಗ ಎಂಬಾತ ತನ್ನ ತಮ್ಮ ಶೇಖರ ಸಪಳಿಗ ಎಂಬವರ ಮನೆಗೆ ತಡರಾತ್ರಿ 3 ಗಂಟೆಗೆ ಬೆಂಕಿಯಿಟ್ಟು ತಾನು ತನ್ನ ಓಮಿನಿಯಲ್ಲಿ ಕುಳಿತು ಅದಕ್ಕೂ ಬೆಂಕಿ ಹಾಕಿ ತಾನೂ ಸುಟ್ಟು ಭಸ್ಮವಾಗಿದ್ದಾನೆ.

ಶೇಖರನ ಮನೆಯಲ್ಲಿ ಕೃಷ್ಣ ಹಾಗೂ ಶೇಖರನ ಮಗಳ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು ಮೂರು ಗಂಟೆಗೆ ಕೃಷ್ಣ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದ್ದು, ಜಮೀನು ವಿವಾದ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಅಗ್ನಿಶಾಮಕ ದಳದವರ ಸಹಿತ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Advertisement

ಕೃತ್ಯಕ್ಕೆ ಮುನ್ನ ಕೃಷ್ಣ ಡೆತ್ ನೋಟ್ ಬರೆದು ಕಾಂಪೌಂಡ್ ಗೋಡೆಗೆ ಅಂಟಿಸಿದ್ದು, ಹಲವರ ಹೆಸರು ಉಲ್ಲೇಖಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next