Advertisement

ಕಾರ್ಕಳ: ಆಸ್ತಿಯಲ್ಲಿ ಪಾಲು; ಮೊದಲ ಪತ್ನಿ ಮಗನಿಂದ ಹಲ್ಲೆ, ಬೆದರಿಕೆ

05:43 PM Feb 02, 2023 | Team Udayavani |

ಕಾರ್ಕಳ: ಆಸ್ತಿಯಲ್ಲಿ ಪಾಲು ನೀಡುವ ವಿಚಾರದಲ್ಲಿ ತನ್ನ ಗಂಡನ ಮೊದಲ ಪತ್ನಿಯ ಮಗ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದಾಗಿ ಮಿಯ್ಯಾರಿನ ಮಂಗಲಪಾದೆ ನಿವಾಸಿ ಶಕುಂತಲಾ ಎಂಬವರು ದೂರು ನೀಡಿದ ಹಿನ್ನಲೆಯಲ್ಲಿ ನಿತೇಶಕುಮಾರ್‌, ದೀಪಾ, ರೋಶನ್‌ ಎಂಬವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಶಕುಂತಲಾ ಮಂಗಳಪಾದೆ ಎಂಬಲ್ಲಿ ಗಂಡ ಬಾಲಕೃಷ್ಣ ಪೂಜಾರಿ ಎಂಬವರೊಂದಿಗೆ ವಾಸವಾಗಿದ್ದರು. ಗಂಡನ ಮೊದಲ ಪತ್ನಿಯ ಮಗ ನಿತೇಶ್‌ ಕುಮಾರ್‌ ಆಗಾಗ ತನ್ನ ಹೆಂಡತಿಯೊಂದಿಗೆ ಬಂದು ಆಸ್ತಿಯಲ್ಲಿ ಪಾಲು ಕೊಡಬೇಕೆಂದು ತಕರಾರು ತೆಗೆಯುತ್ತಿದ್ದು, ಅದರಂತೆ ಫೆ. 1ರಂದು ರಾತ್ರಿ ನಿತೇಶ್‌ಕುಮಾರ್‌ ತನ್ನ ಹೆಂಡತಿ ದೀಪಾ ಮತ್ತು ರೋಶನ್‌ ಎಂಬವರೊಂದಿಗೆ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ,ನೀವು ಆಸ್ತಿಯನ್ನು ನಮಗೆ ಬಿಟ್ಟುಕೊಡದಿದ್ದರೆ ನಿಮ್ಮಿಬ್ಬರನ್ನು ಕೊಂದು ಹಾಕುತ್ತೇವೆ ಎಂದು ಬೆದರಿಕೆಯೊಡ್ಡಿ ಮೈಮೇಲೆ ಕೈಹಾಕಿ ಮಾನಭಂಗವುಂಟು ಮಾಡಿ, ಹಲ್ಲೆ ನಡೆಸಿದ್ದಾಗಿ ದೂರಿತ್ತ ಮೇರೆಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next