Advertisement

ಕಾರ್ಕಳ : ಅಳಿಯನಿಂದ ಮಾವನ ಮೇಲೆ ಹಲ್ಲೆ, ಜೀವ ಬೆದರಿಕೆ

12:04 AM Jul 27, 2022 | Team Udayavani |

ಕಾರ್ಕಳ : ಸ್ಕೂಟರಿನಿಂದ ಮಾವನನ್ನು ಅಳಿಯ ಎಳೆದು ಹಾಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಘಟನೆ ಬೈಲೂರಿನಲ್ಲಿ ನಡೆದಿದೆ.

Advertisement

ಮದರ್‌ ಹೌಸ್‌ ನಿವಾಸಿ ಮುಸ್ತಾಫಾ ಹಸನಬ್ಬ (65) ಹಲ್ಲೆಗೊಳಗಾದವರು. ಅವರ ಮಗಳ ಗಂಡ ಮಹಮ್ಮದ್‌ ಮುಸ್ತಕ್‌ ಸೇರಿ ಐವರು ಹಲ್ಲೆ ನಡೆಸಿದ್ದಾರೆ. ಮುಸ್ತಾಫಾ ಹಜನಬ್ಬ ಅವರ ಪುತ್ರಿ ಖತೀಜಮ್ಮ ತೌಸಿಯಾ ಅವರನ್ನು ಮಂಗಳೂರು ಕುತ್ತಾರು ನಿವಾಸಿ ಮಹಮ್ಮದ್‌ ಮುಸ್ತಕ್‌ ಎಂಬಾತನಿಗೆ 2009ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. 5 ವರ್ಷಗಳ ಹಿಂದೆ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಆರೋಪಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ವಾಪಸು ಪಡೆಯಲು ಒತ್ತಡ ಹೇರುತ್ತಿದ್ದ. ಅದೇ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾನೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next