Advertisement

ಕಾರ್ಕಳ: ಮೃತ ವ್ಯಕ್ತಿಯ ಕೋಟ್ಯಂತರ ಬೆಲೆ ಬಾಳುವ ಆಸ್ತಿ ವಂಚನೆ, ದೂರು ದಾಖಲು

10:35 PM Feb 26, 2023 | Team Udayavani |

ಕಾರ್ಕಳ: ತಂದೆಯ ಮರಣಾನಂತರ ತಂದೆಯ ಹೆಸರಿನಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಸ್ವಿರಾಸ್ತಿ, ಷೇರು ಮತ್ತು ನಗದನ್ನು ದಿನೇಶ್‌ ಕೆ. ಹಾಗೂ ಪ್ರಸಾದ್‌ ಕೆ. ತಮ್ಮ ಹೆಸರಿಗೆ ಮೋಸದಿಂದ ವರ್ಗಾಯಿಸಿಕೊಂಡಿದ್ದಾಗಿ ಕಾರ್ಕಳದ ಪುನೀತ್‌ ರಾವ್‌ ಅವರು ನ್ಯಾಯಾಲಯದ ಮೂಲಕ ಖಾಸಗಿ ದೂರು ನೀಡಿದ್ದಕ್ಕೆ ಸಂಬಂಧಿಸಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪುನೀತ್‌ ರಾವ್‌ ಅವರ ತಂದೆ ದಿ| ಕಾರ್ಕಳ ಅಶೋಕ್‌ ರಾವ್‌ ಅವರ ಹೆಸರಿನಲ್ಲಿ ಕಾರ್ಕಳದ ವಿವಿಧೆಡೆ ಹಲವು ಎಕರೆ ಸ್ಥಿರಾಸ್ತಿಯನ್ನು, ಬ್ಯಾಂಕ್‌ ಖಾತೆ ಹಾಗೂ ವಿವಿಧ ಷೇರು ಹೊಂದಿದ್ದು ಅವರು ಕಾರ್ಕಳದಲ್ಲಿರುವ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. 2020ರ ಜು. 13ರಂದು ಅವರು ಮರಣಪತ್ರ ಬರೆಯದೇ ಮೃತಪಟ್ಟಿದ್ದರು.

ಮೃತಪಟ್ಟ ಮಾಹಿತಿಯನ್ನು ಆಪಾದಿತರಾದ ದಿನೇಶ್‌ ಕೆ. ಮತ್ತು ಅವರ ಪತ್ನಿ ಮಂಜುಳಾ ಪಿರ್ಯಾದುದಾರರ ಸಂಬಂಧಿಕರಾದ ಕೃಷ್ಣ ರಾವ್‌ ಅವರಿಗೆ ಮಾಹಿತಿ ನೀಡಿದ್ದರು. ಕೃಷ್ಣ ರಾವ್‌ ಮತ್ತು ಅವರ ಮಗ ಬಂದಾಗ ಮೃತದೇಹದ ಬಳಿ ಅಪಾದಿತರಿಬ್ಬರು ಇದ್ದು ಪಿರ್ಯಾದುದಾರರ ಸಂಬಂಧಿಕರಾದ ಶೈಲೇಂದ್ರ ರಾವ್‌ ಅವರು ಮರಣದ ಬಗ್ಗೆ ಪುನೀತ್‌ ರಾವ್‌ ಅವರಿಗೆ ಮಾಹಿತಿ ನೀಡಿದ್ದರು. ಆದರೆ ಅವರು ಮತ್ತು ತಾಯಿ ವಿದೇಶದಲ್ಲಿದ್ದ ಕಾರಣ ಮತ್ತು ಕೋವಿಡ್‌ನಿಂದಾಗಿ ಲಾಕ್‌ಡೌನ್‌ ಇದ್ದ ಕಾರಣ ಊರಿಗೆ ಬರಲು ಸಾಧ್ಯವಾಗಿರಲಿಲ್ಲ.

ಪುನೀತ್‌ ರಾವ್‌ರವರ ತಂದೆ ಮೃತಪಟ್ಟ ಮರುದಿನ ತಂದೆಯ ಹೆಸರಿನಲ್ಲಿರುವ 4,24,90,548.90 ರೂ. ಮೌಲ್ಯದ ಷೇರು ಮತ್ತು ಅವರ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳನ್ನು, 2,20,76,238.81 ರೂ. ಬ್ಯಾಂಕ್‌ ಡೆಪೋಸಿಟ್‌ಗಳನ್ನು ಆಪಾದಿತ ಆರೋಪಿಗಳಿಬ್ಬರು ಮೋಸದಿಂದ ತಮ್ಮ ಹೆಸರಿಗೆ ವರ್ಗಾವಣೆ ಮಾಡಿ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ವನಿತಾ ಟಿ 20 ವಿಶ್ವಕಪ್ : 6 ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡ ಆಸ್ಟ್ರೇಲಿಯ

Advertisement
Advertisement

Udayavani is now on Telegram. Click here to join our channel and stay updated with the latest news.

Next