ಹೆಬ್ರಿ: 8ನೇ ತರಗತಿಯ ವಿದ್ಯಾರ್ಥಿ ಮನೆಯ ಸ್ನಾನಗೃಹದಲ್ಲಿ ನೇಣಿಗೆ ಶರಣಾದ ಘಟನೆ ಜ.16ರಂದು ನಡೆದಿದೆ.
Advertisement
ಕೆರೆಬೆಟ್ಟು ಗ್ರಾಮದ ಮಾವಿ ನಕಟ್ಟೆಮನೆ ನಿವಾಸಿ ಮಮತಾ ಶೆಟ್ಟಿ ಹಾಗೂ ಸತೀಶ್ ಅವರ ಪುತ್ರ ಅನ್ವಿತ್ (14) ಆತ್ಮಹತ್ಯೆ ಮಾಡಿಕೊಂಡವ.
ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆ ಯ ವಿದ್ಯಾರ್ಥಿ ಯಾಗಿದ್ದ ಅನ್ವಿತ್ ಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಹಿನ್ನಲೆಯಲ್ಲಿ ಸರಿಯಾಗಿ ಕಲಿಯುವಂತೆ ತಾಯಿ ಬುದ್ಧಿಮಾತು ಹೇಳುತ್ತಿದ್ದರು. ಇದೇ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.