Advertisement
ಸ್ಥಳೀಯರಾದ ಗೌಸ್ ಸಾಹೇಬ್, ಸಯ್ಯದ್ ಜಲೀಲ್, ಮನ್ಸೂರ್ ಸಾಹೇಬ್, ಸಲೀಂ ಅಹ್ಮದ್, ಮೊಹಮ್ಮದ್ ಸಾಹೇಬ್, ಇಸ್ಮಾಯಿಲ್ ಸಾಹೇಬ್ ಅವರ ಮನೆಗಳಿಗೆ ಹಾನಿ ಸಂಭವಿಸಿದೆ.
ಶುಕ್ರವಾರ ಸಂಜೆ 3 ಗಂಟೆ ಯಿಂದ ತಾಲೂಕಿನೆಲ್ಲೆಡೆ ಮಳೆ ಸುರಿಯಲಾರಂಭಿಸಿತ್ತು. ಸಿಡಿಲು ಕೂಡ ಶುರುವಾಗಿತ್ತು. ಆದರೆ ಮಳೆ, ಸಿಡಿಲಿಗಿಂತಲೂ ಗಾಳಿ ಪ್ರಭಾವ ಜಾಸ್ತಿಯಾಗಿತ್ತು. ಇದೇ ಸಮಯ ಕಾಡಂಚಿನ ಗ್ರಾಮವಾದ ದುರ್ಗದಲ್ಲಿ ಭಾರೀ ಗಾಳಿ ಬೀಸಿದೆ. ಗಾಳಿಗೆ ಉರುಳಿದ
ಮದುವೆ ಮನೆ ಚಪ್ಪರ
ಸ್ಥಳೀಯರೊಬ್ಬರ ಮನೆಯಲ್ಲಿ ಇದೇ ಎ. 16ರಂದು ವಿವಾಹ ಕಾರ್ಯ ಏರ್ಪಡಲಿದ್ದು, ಮನೆಗೆ ಚಪ್ಪರ ಹಾಕಲಾಗಿತ್ತು.ಪ್ರಬಲವಾಗಿ ಬೀಸಿದ ಗಾಳಿಗೆ ಚಪ್ಪರ ಹಾರಿ ಹೋಗಿದೆ.ಅಲ್ಲದೇ ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ವಿದ್ಯುತ್ ಪೂರೈಕ ಸ್ಥಗಿತಗೊಂಡಿದೆ.