ಬ್ರಹ್ಮಾವರ: ಕರ್ಜೆ ತಡಾಲಿನ ಪ್ರಕಾಶ (23) ಸರಕಾರಿ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಕೊರೊನಾ ಅನಂತರ ಊರಿನಲ್ಲಿ ತೋಟದ ಕೆಲಸ ಹಾಗೂ ಗಾರೆ ಕೆಲಸ ಮಾಡಿಕೊಂಡಿದ್ದರು.
ಸುಮಾರು 5 ತಿಂಗಳ ಹಿಂದೆ ಸಾಲ ಮಾಡಿ ಹೊಸ ರಿಕ್ಷಾ ಖರೀದಿಸಿದ್ದು, ಆ ಸಮಯ ಬೈಕ್‌ನಿಂದ ಬಿದ್ದು ಗಾಯಗೊಂಡು ಒಂದು ತಿಂಗಳು ವಿಶ್ರಾಂತಿಯಲ್ಲಿದ್ದರು. ಇದರಿಂದ ಬೇಸರಗೊಂಡು ರಿಕ್ಷಾ ಮಾರಾಟ ಮಾಡಿದ್ದರು.
ಇತ್ತೀಚೆಗೆ ಸಾಲ ಮರುಪಾವತಿ ಬಗ್ಗೆ ಸೊಸೈಟಿಯಿಂದ ನೋಟಿಸ್ ಬಂದಿದ್ದು, ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು. ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.