Advertisement
ಕಾರಿಂಜ ಕ್ಷೇತ್ರ ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿಗೂ ಮಿಕ್ಕಿ ಎತ್ತರದಲ್ಲಿದ್ದು, ಬೃಹತ್ ಬಂಡೆಯ ಮೇಲಿರುವ ದೇವಸ್ಥಾನದಲ್ಲಿ ಶಿವ, ಪಾರ್ವತಿಯರ ಆರಾಧನ ಕ್ಷೇತ್ರವಾಗಿದೆ. ಇಲ್ಲಿಗೆ ಭಕ್ತರಲ್ಲದೆ ಪ್ರವಾಸಿಗರು ಪ್ರಕೃತಿ ವೀಕ್ಷಿಸಲು ಬರುತ್ತಾರೆ.
Related Articles
Advertisement
ಜೋತಾಡುವ ತಂತಿವಿದ್ಯುತ್ ಕಂಬಗಳಂತೆ ವಿದ್ಯುತ್ ತಂತಿಗಳೂ ಹಳೆಯದಾಗಿದೆ. ಅದರ ನಿರ್ವಹಣೆ ಮಾಡದಿರುವ ಕಾರಣ ತಂತಿಗಳು ಜೋತಾಡುತ್ತಿವೆ. ಮೂಲ ಸೌಕರ್ಯಗಳಲ್ಲೊಂದಾದ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಿದರೆ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆ ಗಮನ ಹರಿಸಬೇಕೆಂಬುದು ಭಕ್ತರ ಆಗ್ರಹವಾಗಿದೆ. ಕಾರಿಂಜ ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿ ವಿದ್ಯುತ್ ಕಂಬಗಳು ಅಪಾಯದ ಸ್ಥಿತಿಯಲ್ಲಿದೆ. ಈ ಬಗ್ಗೆ ಕ್ಷೇತ್ರದಿಂದ ಮೆಸ್ಕಾಂಗೆ ಪತ್ರ ಬರೆದಿದ್ದು, ದುರಸ್ತಿಯಾಗಿಲ್ಲ. ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ತಿಳಿಸಿ, ಮುಂದಿನ ಶಿವರಾತ್ರಿ ಜಾತ್ರೆ ವೇಳೆಗೆ ದುರಸ್ತಿಗೊಳಿಸಲು ಪ್ರಯತ್ನಿಸಲಾಗುವುದು.
– ಸಚಿನ್ ಕುಮಾರ್, ಆಡಳಿತಾಧಿಕಾರಿ, ಶ್ರೀ ಕಾರಿಂಜೇಶ್ವರ ಕ್ಷೇತ್ರ, ಕಾರಿಂಜ ವಿದ್ಯುತ್ ಕಂಬಗಳ ಅಪಾಯದ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ಮನವಿ ನೀಡಿದರೂ ಭರವಸೆ ಮಾತ್ರ ನೀಡಿರುತ್ತಾರೆ.ಜಾತ್ರಾ ಸಮಯದಲ್ಲಿ ಲಕ್ಷಗಟ್ಟಲೆ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ.ಆದಷ್ಟು ಬೇಗ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಾಯಿಸಿ,ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ, ನಗರದಲ್ಲಿರುವಂತೆ ಹೆಚ್ಚು ಬೆಳಕಿರುವ ವಿದ್ಯುತ್ ದೀಪಗಳ ಅಳವಡಿಕೆಯಾಗಬೇಕು.
– ಚಂದ್ರಶೇಖರ ಶೆಟ್ಟಿ ಪುಳಿಮಜಲು, ಮಾಜಿ ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ