Advertisement
ವಿಜಯೋತ್ಸವಹೊಸದಿಲ್ಲಿಯಿಂದ ಹೊರಟ ಕಾರ್ಗಿಲ್ ಜ್ಯೋತಿ ದ್ರಾಸ್ ತಲುಪುತ್ತದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂರೂ ಸೇನೆಗಳ ಮುಖ್ಯಸ್ಥರಿಂದ ಜ್ಯೋತಿ ಸ್ವೀಕಾರ
ವಿಜಯ್ ದಿವಸ್
Related Articles
Advertisement
ವಾರದ ಕಾರ್ಯಕ್ರಮಬಿಎಸ್ಎಫ್ ವಾರ ಕಾಲ ಕಾರ್ಯಕ್ರಮ ಆಯೋಜಿಸುತ್ತಿದೆ. ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳಿಗೆ ಗಡಿ ಪ್ರದೇಶಗಳಿಗೆ ಪ್ರವಾಸ. ಅದರ ಮೂಲಕ ನಿಮ್ಮ ಸೇನಾ ಪಡೆ ಅರಿಯಿರಿ ಎಂಬ ಕಾರ್ಯಕ್ರಮ.
ಗಡಿ ಪ್ರದೇಶದ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮ
ಫೋಟೋಗಳ ಮತ್ತು ವಿಶೇಷ ಸಿನಿಮಾಗಳ ಪ್ರದರ್ಶನ. ಇನ್ನೊಮ್ಮೆ ದುಸ್ಸಾಹಸ ಬೇಡ: ಪಾಕಿಸ್ಥಾನಕ್ಕೆ ರಾವತ್ ಎಚ್ಚರಿಕೆ
ಪಾಕಿಸ್ಥಾನ ಸೇನೆ 1999ರಲ್ಲಿ ನಡೆಸಿದಂಥ ದುಸ್ಸಾಹಸವನ್ನು ಮತ್ತೆ ಮಾಡಬಾರದು; ಹಾಗೆ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಭೂಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ. ದ್ರಾಸ್‌ನಲ್ಲಿ ಮಾತನಾಡಿದ ಅವರು, ದೇಶದ ರಾಜಕೀಯ ಮತ್ತು ಸೇನಾ ವ್ಯವಸ್ಥೆ ದಿಟ್ಟ ನಿರ್ಧಾರ ಕೈಗೊಂಡಿದ್ದರಿಂದ ಆಗ ಪಾಕ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದವು. ಪಾಕ್ ಸೇನೆ ಎಷ್ಟೇ ಎತ್ತರದ ಪ್ರದೇಶಕ್ಕೆ ಬಂದು ಅತಿಕ್ರಮಣ ಮಾಡಿ ದರೂ ಅವರನ್ನು ಹೊಡೆ ದಟ್ಟುವುದು ಖಾತರಿ ಎಂದು ಹೇಳಿದ್ದಾರೆ. ಜುಲೈ 26, 1999 ಪಾಕ್‌ನ ವಿದ್ರೋಹಿಗಳನ್ನು ಹಿಮ್ಮೆಟ್ಟಿಸಿ ವಿಜಯ ಘೋಷಿಸಿದ ದಿನ
ಕದನ ನಡೆದ ಕಾಲ 2 ತಿಂಗಳು 3 ವಾರ 2 ದಿನ
ಹುತಾತ್ಮರಾದ ಭಾರತೀಯ ಯೋಧರು 527
ಕರ್ನಾಟಕದ ಯೋಧರು 13 ದಯವಿಟ್ಟು ರಾಜ ಕೀಯವನ್ನು ಮರೆತು ಕಾರ್ಗಿಲ್ ವಿಜಯೋತ್ಸವ ದಲ್ಲಿ ಭಾಗವಹಿಸಿ. ಇದು ಬರೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಅಲ್ಲ. ಎಲ್ಲ ರಾಜ್ಯಗಳಲ್ಲೂ ನಡೆಯಬೇಕು.
– ರಾಜ್‌ನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ