Advertisement

ಲಯನ್ಸ್‌ ಸಂಸ್ಥೆಯಿಂದ ಕಾರ್ಗಿಲ್‌ ವಿಜಯೋತ್ಸವ

10:34 AM Jul 29, 2020 | Suhan S |

ರಾಮನಗರ: ದೇಶದ ರಕ್ಷಣೆ ಮಾಡುವಲ್ಲಿ ವೀರ ಯೋಧರ ಕೊಡುಗೆ ಅನನ್ಯ ಎಂದು ಲಯನ್ಸ್‌ ಸಂಸ್ಥೆ ಅಧ್ಯಕ್ಷೆ ಸುಧಾರಾಣಿ ಹೇಳಿದರು.

Advertisement

ನಗರದ ಚಾಮುಂಡೆಶ್ವರಿ ದೇವಾಲಯದ ಆವರಣದಲ್ಲಿ ಲಯನ್ಸ್‌ ರಾಮನಗರ ಸಿಲ್ಕ್ ಸಿಟಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್‌ ವಿಜಯೋತ್ಸವ ದಿನದ ಅಂಗವಾಗಿ ನಿವೃತ್ತ ಯೋಧ ರಾಜ್‌ಶೇಖರ್‌ ಅವರನ್ನು ಸನ್ಮಾನಿಸಿ ಮಾತನಾಡಿದರು. 21 ವರ್ಷ ಗಳ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್‌ ಯುದ್ಧದಲ್ಲಿ ದೇಶದ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ದೇಶ ಕಾಯುವ ಯೋಧರಿಗೆ ಎಲ್ಲರೂ ಗೌರವ ಕೊಡಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ರಾಜ್‌ ಶೇಖರ್‌, ಮೈ ಕೊರೆವ ಚಳಿಯಲ್ಲಿ, ರಕ್ತ ಹೆಪ್ಪುಗಟ್ಟಿಸುವ ಹಿಮ ರಾಶಿಯ ನಡುವೆ ನಮ್ಮ ಯೋಧರು ವೀರಾವೇಶದಿಂದ ಹೋರಾಡಿದ್ದಾರೆ. ದೇಶಕ್ಕಾಗಿ ಮಡಿದವರ ನೆನಪಿನಲ್ಲಿ ತುಂಬಿ ಬರುವ ಕಣ್ಣೀರಿನ ನಡುವೆ ಅವರ ತ್ಯಾಗ, ಧೈರ್ಯ, ಸಾಹಸ, ಬಲಿದಾನದ ಪ್ರತೀಕವೇ ಕಾರ್ಗಿಲ್‌ ವಿಜಯೋತ್ಸವ ಎಂದರು.

ಈ ಸಂದರ್ಭದಲ್ಲಿ ಗೈಡಿಂಗ್‌ ಲಯನ್‌ ಎಚ್‌. ವಿ. ಶೇಷಾದ್ರಿ ಅಯ್ಯರ್‌ ಮಾತನಾಡಿದರು. ದೀಪ ಬೆಳಗಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು. ಲಯನ್ಸ್‌ ಸಂಸ್ಥೆ ಕಾರ್ಯದರ್ಶಿ ಕೋಕಿಲಾ, ಉಪಾಧ್ಯಕ್ಷರಾದ ಎಂ.ಎಸ್‌.ಲಾವಣ್ಯ, ಖಜಾಂಚಿ ಸಂಧ್ಯಾ ಅಯ್ಯರ್‌, ವಿಜಯಲಕ್ಷ್ಮೀ, ಪದ್ಮಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next