Advertisement

ಸಡಗರದ ಕಲ್ಕೆರೆ ಕರಿಯಮ್ಮ ದೇವಿ ರಥೋತ್ಸವ

04:27 PM Feb 20, 2021 | Team Udayavani |

ಅಜ್ಜಂಪುರ: ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಕರಿಯಮ್ಮ ದೇವಿ ರಥೋತ್ಸವ ನೂರಾರು ಭಕ್ತರ ಭಕ್ತಿ-ಭಾವ, ಸಂಭ್ರಮ-ಸಡಗರದ ನಡುವೆ ಶುಕ್ರವಾರ ಜರುಗಿತು.

Advertisement

ರಥೋತ್ಸವದ ಅಂಗವಾಗಿ ಕರಿಯಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ಉತ್ಸವದಲ್ಲಿ ಡೊಳ್ಳು, ವೀರಗಾಸೆಯಂತಹ ಜಾನಪದ ಕಲಾತಂಡಗಳು ಪಾಲ್ಗೊಂಡು ಗಮನ ಸೆಳೆದವು.

ನಂತರ ದೇವಿಯನ್ನು ಅಲಂಕೃತಗೊಂಡ ರಥದಲ್ಲಿರಿಸಿ, ರಥೋತ್ಸವ ನಡೆಸಲಾಯಿತು. ಸೇರಿದ್ದ ಭಕ್ತರು ಬಾಳೆ ಹಣ್ಣು, ನಿಂಬೆ ಹಣ್ಣನ್ನು ರಥದ ಕಲಶದತ್ತ ತೂರಿ ಸಂಭ್ರಮಿಸಿದರು. ಹೂ-ಹಣ್ಣು ಅರ್ಪಿಸಿ, ಭಕ್ತಿ ಸಮರ್ಪಿಸಿದರು.

ರಥೋತ್ಸವದ ಅಂಗವಾಗಿ ಮಂಗಳವಾರ ಧ್ವಜಾರೋಹಣ, ದೇವಿಗೆ ಮಧುವಣಗಿತ್ತಿ ಸೇವೆ, ಬುಧವಾರ ಬೇವಿನ ಸೀರೆ, ಗುರುವಾರ ಸಿದ್ದಲಿಂಗಸ್ವಾಮಿ ನೇತೃತ್ವದಲ್ಲಿ ಸಹಸ್ರ ಕುಂಕುಮಾರ್ಚನೆ, ಪಾನಕದ ಬಂಡಿ ಸೇವೆ, ಕಳಸಾರೋಹಣ ಸೇವೆ ನಡೆದಿದ್ದವು. ಸೋಮವಾರ ಹಾಲು ಪಲ್ಲಕ್ಕಿ ಸೇವೆ, ಮಂಗಳವಾರ ಓಕಳಿ ಸೇವೆ, ಅಚ್ಚಂದ ಸೇವೆ ನಡೆಯುವ ಮೂಲಕ ವಾರ್ಷಿಕ ರಥೋತ್ಸವಕ್ಕೆ ತೆರೆ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next