Advertisement

ಊಗಿನಹಳ್ಳಿ ಕಾರೆಮೆಳೆ ಸಿಂಗಮ್ಮದೇವಿ ಅದ್ದೂರಿ ಜಾತ್ರೆ

03:28 PM Nov 22, 2022 | Team Udayavani |

ಕಿಕ್ಕೇರಿ: ಜಾನುವಾರುಗಳಿಗೆ ಬಿಡದೆ ಕಾಡುವ ರೋಗರು ಜಿನ ಗಳಿಂದ ಮುಕ್ತಿ ನೀಡುವ ಶಕ್ತಿ ದೇವಿ ಕಾರೆಮೆಳೆ ಸಿಂಗಮ್ಮ ದೇವಿ ಯನ್ನು ನಂಬಿದ್ದು ರೈತರು ನಿತ್ಯ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಹೋಬಳಿಯ ಊಗಿನಹಳ್ಳಿ ಹೊರವಲಯದ ಬೋರೆಯಲ್ಲಿರುವ ದೇವಿಗೆ ನಡೆಯುವ ವಾರ್ಷಿಕ ಪೂಜೆಗೆ ತಾಲೂಕು, ಜಿಲ್ಲೆ ಅಲ್ಲದೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದು ದೇವಿಯ ಮಹಿಮೆಗೆ ಸಾಕ್ಷಿ.

Advertisement

ಸ್ಥಳ ಪುರಾಣ: ಶಕ್ತಿ ದೇವರಾದ ಮಾರಮ್ಮ, ಸಿಂಗಮ್ಮ, ಕೆಂಕೇರಮ್ಮ ಸೇರಿ ಐವರು ಸಹೋದರಿಯರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ನೆಲೆಸಿದ್ದಾರೆ. ಹೋಬ ಳಿಯ ಗಡಿ ಕಾಯುವ ದೇವರಾಗಿ ದೇವಿ ನೆಲೆಸಿದ್ದು, ಜನ, ಜಾನು ವಾರು ರಕ್ಷಕಿಯಾಗಿ ನೆಲೆಸಿದ್ದಾಳೆ.

ಸಹೋದರಿಯರು ದೇಶ ಪರ್ಯಟನೆಯಾಗಿ ಸಾಗುವಾಗ ಕೆಂಕೇರಮ್ಮ ಮಾದಾಪುರ ಗ್ರಾಮಕ್ಕೆ ಸಾಗಿದಳು. ಸಿಂಗಮ್ಮ ದೇವಿ ಈ ಸ್ಥಳದಲ್ಲಿಯೇ ತಟಸ್ಥ ವಾದಳು ಎನ್ನುವ ಐತಿಹ್ಯವಿದೆ.

ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಊಗಿನಹಳ್ಳಿ ಕೊಪ್ಪಲು, ತುಸು ದೂರದ ಗೋವಿಂದನಹಳ್ಳಿ, ಗೋವಿಂದನಹಳ್ಳಿ ಕೊಪ್ಪಲು, ಜಯಪುರ ಮತ್ತಿತರ ಗ್ರಾಮಗಳಲ್ಲಿ ಅಧಿಕವಾಗಿ ಗೋವಿನ ಪಾಲಕರಿದ್ದು ದೇಶೀಯ ಗೋವು ಸಂರಕ್ಷಣೆ, ಜಾನುವಾರು ಸಾಕಾಣಿಕೆ ಬಲು ಹಿಂದೆ ಈ ಕೇಂದ್ರದಲ್ಲಿ ಪ್ರಮುಖ ಕಾಯಕವಾಗಿತ್ತು. ಸುತ್ತಮುತ್ತಲ ಗ್ರಾಮಗಳ ಗೋಪಾಲಕರು ಊಗಿನಹಳ್ಳಿ ಹೊರವಲಯದ ವಿಶಾಲವಾದ ಬೋರೆಯಲ್ಲಿ ದನ ಮೇಯಿಸುವ ಕಾಯಕಕ್ಕೆ ಬರುತ್ತಿದ್ದರು.

ಓರ್ವ ಗೋಪಾಲಕ ದನ ಕಾಯುವಾಗ ಗುಂಪಿನಲ್ಲಿದ್ದ ಒಂದು ದನ ಬೋರೆಯಲ್ಲಿದ್ದ ಬೃಹತ್‌ ಕಾರೆಮೆಳೆ ಒಳಗೆ ಹೋಗಿದೆ. ಸುಮಾರು ಹೊತ್ತು ಗೋಪಾಲಕ ಗೋವನ್ನು ಹುಡುಕಾಡಿದ್ದಾನೆ. ಅಂತಿಮವಾಗಿ ಗೋವು ತೆರಳಿದ್ದ ಮಾರ್ಗದ ಹೆಜ್ಜೆ ಜಾಡು ಹಿಡಿದು, ಗುರುತನ್ನು ಪತ್ತೆ ಹಚ್ಚಿಕೊಂಡು ಕಾರೆಮೆಳೆಗೆ ನುಗ್ಗಿದ್ದಾನೆ. ಗೋವಿನ ಕೊರಳಿನ ಸದ್ದು ಸ್ಥಳದಲ್ಲಿ ಕೇಳಿದರೂ ಗೋವು ಮಾತ್ರ ಅದೃಶ್ಯವಾಗಿರುವುದನ್ನು ಕಂಡು ದಿಗ್ಭ್ರಮೆಯಾಗುತ್ತಾನೆ.

Advertisement

ಘಟನಾ ಸ್ಥಳದಲ್ಲಿ ಬಂಡೆ, ಕುರುಚಲು ಗಿಡ ಮಾತ್ರ ಇರುವುದನ್ನು ಕಂಡು ಮತ್ತಷ್ಟು ಭಯಗೊಂಡು ಗ್ರಾಮಕ್ಕೆ ವಾಪಸ್ಸಾಗುತ್ತಾನೆ. ಗ್ರಾಮಕ್ಕೆ ತೆರಳಿ ನಡೆದ ಘಟನೆಯನ್ನು ಊರಿನ ಪ್ರಮುಖರಿಗೆ ತಿಳಿಸುತ್ತಾನೆ. ಗ್ರಾಮದ ಜನ ಒಟ್ಟಿಗೆ ಸೇರಿ ಕಾರೆಮೆಳೆ ಸ್ಥಳಕ್ಕೆ ಆಗಮಿಸುತ್ತಾರೆ. ಹುಲಿ, ಕಿರುಬ ತಿಂದಿರಬಹುದು ಎಂದು ಗೋಪಾಲಕನಿಗೆ ತಿಳಿಸಿ ಗ್ರಾಮಕ್ಕೆ ವಾಪಸ್ಸಾಗುತ್ತಾರೆ. ಗ್ರಾಮದ ಓರ್ವ ಹಿರಿಕರಿಗೆ ಕನಸಿನಲ್ಲಿ ದೇವಿ ಪ್ರತ್ಯಕ್ಷವಾಗಿ ನಡೆದ ಘಟನೆಯನ್ನು ತಿಳಿಸುತ್ತಾಳೆ. ಗೋವು ಅದೃಶ್ಯವಾದ ಸ್ಥಳದಲ್ಲಿ ತಾನು ಗುಮಚಿ ಆಕೃತಿಯಲ್ಲಿ(ಕಲ್ಲಿನ) ನೆಲೆಸಿರುವುದಾಗಿ ತಿಳಿಸಿ, ಸ್ಥಳದಲ್ಲಿ ಗುಡಿ ನಿರ್ಮಿಸಿ, ಪೂಜಿಸಿ. ಗ್ರಾಮದ, ಜಾನುವಾರುಗಳ ರಕ್ಷಕಿಯಾಗಿ ನೆಲೆಸುವುದಾಗಿ ನುಡಿಯುತ್ತಾಳೆ.

ಗ್ರಾಮದ ಹಿರಿಯರು ನಡೆದ ಘಟನೆ ಬಗ್ಗೆ ಚರ್ಚಿಸಿ, ಗ್ರಾಮದ ಬೋರೆ ಸ್ಥಳಕ್ಕೆ ತೆರಳಿ ದೇವಿ ತಿಳಿಸಿದ ಸ್ಥಳಕ್ಕೆ ಹುಡುಕಾಟ ನಡೆಸುತ್ತಾರೆ. ಬಂಡೆಯಂತಿರುವ ಜಾಗದಲ್ಲಿ ಗುಮಚಿ ಆಕಾರವಾಗಿ ಕಲ್ಲಿನಲ್ಲಿ ಮೂಡಿರುವುದನ್ನು ಕಂಡು ದೇವಿಯಲ್ಲಿ ಪ್ರಾರ್ಥಿಸಿಕೊಂಡು ಸ್ಥಳವನ್ನು ಖಚಿತಪಡಿಸಿಕೊಳ್ಳುತ್ತಾರೆ.

ದೇವಿ ತಿಳಿಸಿದಂತೆ ಕಲ್ಲಿನಲ್ಲಿ ಗುಡಿ ಕಟ್ಟಲು ಆರಂಭಿಸಿ ಪೂರ್ವಕ್ಕೆ ಬಾಗಿಲು ನಿರ್ಮಿಸಲು ಮುಂದಾಗುತ್ತಾರೆ. ವರ್ಷಕ್ಕೆ ಒಮ್ಮೆ ಗ್ರಾಮಸ್ಥರು ಸೇರಿ ದೇವಿಗೆ ಬಲಿ ಅರ್ಪಿಸಿ ಶಾಂತಿಗೊಳಿಸುವುದು. ಜಾನುವಾರು, ಕುರಿ ಮಂದೆಯನ್ನು ಶ್ರದ್ಧಾಭಕ್ತಿಯಿಂದ ತಂದು ಗುಡಿ ಸುತ್ತ ಪ್ರದಕ್ಷಿಣೆ ಹಾಕಿಸುವುದು, ದೇವಿ ಶಾಂತಿಗಾಗಿ ಹೋಮ ಹವನಾದಿ, ಪೂಜೆ, ನೈವೇದ್ಯ ಅರ್ಪಿಸುವುದಾಗಿ ಗುಡಿ ಬಳಿ ದೇವಿಗೆ ವಾಗ್ದಾನ ಮಾಡುತ್ತಾರೆ. ಅಂದಿನಿಂದ ಗ್ರಾಮದಲ್ಲಿ ಹಸು ಕರು ಹಾಕಿದಾಗ ಮೊದಲ ಹಾಲನ್ನು ಗಿಣ್ಣಿನಂತೆ ನೈವೇದ್ಯ ಮಾಡಿಕೊಂಡು ಗುಡಿಗೆ ರೈತರು ತಂದು, ಮೊಸರಿನ ತಳಿಗೆ ಮಾಡಿಕೊಂಡು ದೇವಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಇದರಿಂದ ಹಸು ಕರು ರೋಗರುಜಿನ ಬಾರದಂತೆ ಬದುಕಲಿವೆ ಎಂಬ ಮಹಿಮೆ ಇದೆ. ಕುರಿಗಾಹಿಗಳು ತಮ್ಮ ಕುರಿ, ರೈತರು ತಮ್ಮ ಜಾನುವಾರುಗಳಿಗೆ ಕೋಡಬಳೆ, ಚಕ್ಕುಲಿ ಹಾರ ಹಾಕಿಸಿಕೊಂಡು ದೇವಿ ಗುಡಿಗೆ ತಂದು ತೀರ್ಥ ಪ್ರೋಕ್ಷಣೆ ಮಾಡಿಸಿದರೆ ರೋಗ ತಗುಲಲಾರದು ಎಂಬ ನಂಬಿಕೆ ಇದೆ.

ಬಸ್‌ ಮಾರ್ಗಸೂಚಿ: ಕಿಕ್ಕೇರಿ ಹೋಬಳಿ ಗಡಿಯಂಚಿನ ಗ್ರಾಮಕ್ಕೆ ಖಾಸಗಿ ವಾಹನ ಸೌಲಭ್ಯವೂ ಉಂಟು. ಕಿಕ್ಕೇರಿ ಯಿಂದ ಚನ್ನರಾಯಪಟ್ಟಣ ಮಾರ್ಗ ಮಧ್ಯೆ ಮಾದಾ ಪುರ ತಿರುವು ಬಳಿ ಸಾಗಬೇಕು. ಕಿಕ್ಕೇರಿಗೆ 8 ಕಿ.ಮೀ. ಅಂತರವಿದೆ. ಶ್ರವಣಬೆಳಗೊಳ ಮಾರ್ಗವಾಗಿ ಕಾಂತರಾಜಪುರದ ಅಡ್ಡದಾರಿ ಯಿಂದ, ಹೊಳೆನರಸೀಪುರ ಮಾರ್ಗವಾಗಿ ಮಾದಾಪುರ ಗ್ರಾಮದಿಂದ ಬರಬಹುದಾಗಿದೆ.

ಪ್ರತಿ ವರ್ಷ ಜಾತ್ರೋತ್ಸವ: ವಿಜಯ ರಾಮೇಗೌಡ: ತಾಲೂಕಿನಲ್ಲಿನ ಗವಿರಂಗನಾಥನ ಗುಡಿಯಂತೆ ಇಲ್ಲಿರುವ ಸಿಂಗಮ್ಮ ದೇವಿ ಗುಡಿಗೆ ಇತಿಹಾಸವಿದೆ. ನಂಬಿ ಬಂದವರಿಗೆ ಶಕ್ತಿ, ನೆಮ್ಮದಿ ನೀಡುವ ದೇವಿಯಾಗಿದ್ದಾಳೆ. ನಮ್ಮ ಅಜ್ಜಂದಿರು, ಪೂರ್ವಿಕರೂ ಈ ಗುಡಿಗೆ ಹಸು ಕರು ಹಾಕಿದಾಗ ಮೊದಲ ಗಿಣ್ಣ ಹಾಲನ್ನು ಅರ್ಪಿಸುತ್ತಿದ್ದರು. ದೇವಿ ಮಹಿಮೆಯ ಸಾಕ್ಷಿಯಾಗಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೇ ಸೋಮವಾರದ ಮರುದಿನ ಮಂಗಳವಾರ ಅದ್ದೂರಿ ಜಾತ್ರೋತ್ಸವ ನಡೆಯಲಿದ್ದು ಸಾವಿರಾರು ಮಂದಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹಾಗೂ ಮಿತ್ರ ಫೌಂಡೇಷನ್‌ ಅಧ್ಯಕ್ಷರಾದ ಬೂಕನಕೆರೆ ವಿಜಯ ರಾಮೇಗೌಡ ತಿಳಿಸಿದರು.

ಇಂದು ವಾರ್ಷಿಕ ವಿಶೇಷ ಪೂಜೆ: ಗ್ರಾಮದಲ್ಲಿ ಮಗು ಜನನ, ಶುಭ ಕಾರ್ಯ ನಡೆಯಲು ಮೊದಲು ದೇವಿ ಗುಡಿಗೆ ಆಗಮಿಸಿ, ಪೂಜಿಸುವುದು. ಅಪ್ಪಣೆ ಪಡೆ ಯು ವುದು ಪ್ರತೀತಿ. ಗ್ರಾಮ- ಸುತ್ತಮುತ್ತಲಿನ ಜನತೆ ಹೊರ ಪಯಣ ಬೆಳೆಸುವಾಗ ತಪ್ಪದೇ ದೇವಿ ಗುಡಿಗೆ ತೆರಳಿ ಪೂಜಿಸು ವುದು ವಾಡಿಕೆ. ಅಲ್ಲದೇ, ತಮ್ಮ ಕಷ್ಟಕಾರ್ಪ ಣ್ಯಗಳಿದ್ದಲ್ಲಿ ದೇವಿಗೆ ಒಪ್ಪಿಸಿದರೆ ಯಶಸ್ಸು ಸಾಧ್ಯ ಎನ್ನುವುದು ದೇವಿಯ ಸ್ಥಳ ಪುರಾಣ ವಾಗಿದೆ. ಮಂಗಳವಾರ ವಾರ್ಷಿಕ ಪೂಜೆ ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು ಹತ್ತೂರ ಜನ ಭಾಗವಹಿಸಲಿದ್ದಾರೆ.

-ತ್ರಿವೇಣಿ

Advertisement

Udayavani is now on Telegram. Click here to join our channel and stay updated with the latest news.

Next