ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ 73ನೇ “ಮನ್ ಕಿ ಬಾತ್” ರೇಡಿಯೋ ಭಾಷಣದಲ್ಲಿ ರಾಷ್ಟ್ರವನ್ನು ಉದ್ದೇಶೀಸಿ ಹಲವು ವಿಚಾರಗಳ ಬಗ್ಗೆ ಭಾನುವಾರ (ಜ. 31) ದಂದು ಮಾತನಾಡಿದರು.
ಓದಿ : ವೃತ್ತಿಪರ ಗೇಮರ್ ಆಗಲು ಬಯಸುತ್ತಿದ್ದೀರಾ..? ಭಾರತದಲ್ಲಿ ಆರಂಭವಾಗಿದೆ ROG ಅಕಾಡೆಮಿ
ದೇಶದಲ್ಲಿನ ಪ್ರಸ್ತುತ ಬೆಳವಣಿಗೆಯನ್ನು ಉಲ್ಲೇಖಿಸುವುದರ ಜೊತೆಗೆ ದೇಶ, ವಿದೇಶಗಳಲ್ಲಿ ಭಾರತೀಯ ಮಹಿಳೆಯರ ಕೀರ್ತಿ ಉನ್ನತ ಮಟ್ಟಕ್ಕೇರುತ್ತಿರುವುದರ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಮೋದಿ ಹಂಚಿಕೊಂಡರು. ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಹಿಳೆಯರ ಭಾಗವಹಿಸುವಿಕೆಯನ್ನು ಮೋದಿ ಶ್ಲಾಘಿಸಿದ್ದರು.
ಈ ಬಗ್ಗೆ ಈಗ ಬಾಲಿವುಡ್ ನ ಖ್ಯಾತ ನಟಿಯರಾದ ಕರೀನಾ ಕಪೂರ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
Related Articles
ಓದಿ : ಕೋವಿಡ್ ಲಸಿಕೆ ಶೇ.46 ಸಾಧನೆ
ಮಹಾತ್ಮ ಗಾಂಧಿಯವರ “ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಿರಿ” ಎಂಬ ಶುಭನುಡಿಯ ಜೊತೆಗೆ ಪ್ರಪಂಚದ ಎಲ್ಲಾ ಮಹಿಳೆಯರ ಬದುಕಿನಲ್ಲಿ ಇದು ನಿಜವಾಗಲಾರದು ಎಂದು ದೀಪಿಕಾ ಪಡುಕೋಣೆ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಈ ವರ್ಷದ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಇಬ್ಬರು ಮಹಿಳಾ ಐಎಎಫ್ ಅಧಿಕಾರಿಗಳು ಇತಿಹಾಸವನ್ನು ಸೃಷ್ಟಿಸಿರುವುದನ್ನು ನೀವು ನೋಡಿದ್ದೀರಿ. ಯಾವುದೇ ಕ್ಷೇತ್ರವಾಗಲಿ, ರಾಷ್ಟ್ರದ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ” ಎಂದು ಮನ್ ಕಿ ಬಾತ್ ನಲ್ಲಿ ಮೋದಿ “ನಾರಿ ಶಕ್ತಿ”ಯನ್ನು ಹೊಗಳಿದ್ದರು.
ಓದಿ : ಜೆಡಿಎಸ್ ಅಲ್ಪಸಂಖ್ಯಾತ ಯುವ ಘಟಕಕ್ಕೆ ಶಹಬಾಜ್ ಅಧ್ಯಕ್ಷ