Advertisement

ಕಾರವಾರ: ಜಿಲ್ಲೆಯಲ್ಲಿ 15.21 ಲಕ್ಷ ರೂ. ಬೆಲೆಯ 75 ಕೆಜಿ ಗಾಂಜಾ ನಾಶ

09:07 PM Jun 26, 2022 | Team Udayavani |

ಕಾರವಾರ : ಕಾರವಾರ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 75 ಕೆಜಿ ಗಾಂಜಾವನ್ನು ರವಿವಾರ ನಾಶ ಮಾಡಲಾಯಿತು. ಇದರ ಬೆಲೆ 15.21 ಲಕ್ಷ ರೂ. ಮೊತ್ತದ್ದು ಎಂದು ಜಿಲ್ಲಾ ಪೊಲೀಸ್ ಜನಸಂಪರ್ಕಾಧಿಕಾರಿ ತಿಳಿಸಿದ್ದಾರೆ‌.

Advertisement

ಜಿಲ್ಲೆಯಲ್ಲಿ ಈ ಸಂಬಂಧ 64 ಪ್ರಕರಣ ದಾಖಲಾಗಿವೆ. ಚೆರಸ್ ಸಂಬಂಧ ಒಂದು ಪ್ರಕರಣ ದಾಖಲಾಗಿದೆ‌ .195 ಗ್ರಾಂ ಚರಸ್ ಸಿಕ್ಕಿದ್ದು ಅದನ್ನು ನಾಶ ಮಾಡಲಾಗಿದೆ. 61 ಗಾಂಜಾ ಪ್ಲಾಂಟ್ ನಾಶ ಮಾಡಲಾಗಿದೆ. ಈ ಸಂಬಂಧ 4 ಪ್ರಕರಣ ದಾಖಲಾಗಿವೆ‌ . ಇದರ ಮೊತ್ತ 15800 ರೂ‌ ಎಂದು ಅಂದಾಜಿಸಲಾಗಿದೆ. ಒಟ್ಟು 75 ಕೆಜಿ, 314 ಗ್ರಾಂ , 495 ಮಿಲಿಗ್ರಾಂ ಮಾದಕ ವಸ್ತು ನಾಶ ಮಾಡಲಾಗಿದೆ.

ಮಾದಕ ವಸ್ತು ವಿರೋಧಿ ದಿನವಾಗಿ ಮಾದಕ ವಸ್ತುಗಳನ್ನು ನಾಶ ಮಾಡಲಾಯಿತು. ವಶಪಡಿಸಿಕೊಂಡ ಮಾದಕ ದ್ರವ್ಯಗಳ ಬೆಲೆ 16,17, 460.00 ರೂ. ಎಂದು ಜಿಲ್ಲಾ ಪೊಲೀಸ್ ಇಲಾಖೆ ಹೇಳಿದೆ. ಮಾದಕ ವಸ್ತುಗಳನ್ನು ಅಂಕೋಲಾದ ಬೊಗ್ರಿಬೈಲ್ ನ ಕಾನ್ ಟ್ರೀಟ್ಮೆಂಟ್ ಫೆಸಲಿಟಿಯ ಘನತ್ಯಾಜ್ಯ ಘಟಕದಲ್ಲಿ ಸುಡಲಾಗಿದೆ ಎಂದು ಜಿಲ್ಲಾ ಪೋಲಿಸ್ ಇಲಾಖೆ ಹೇಳಿದೆ. ಜಿಲ್ಲೆಯಲ್ಲಿ ಈತನಕ ಒಟ್ಟು 69 ಮಾದಕ ದ್ರವ್ಯ ಸಾಗಾಟ, ಮಾರಾಟ , ಪೆಡ್ಲರ್ ಬಂಧನ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್ ಆದೇಶದಂತೆ ಕೋರ್ಟ್ ಸಮಿತಿ ಸಮ್ಮುಖದಲ್ಲಿ ಮಾದಕ ದ್ರವ್ಯ ನಾಶ ಮಾಡಲಾಗಿದೆ

ಇದನ್ನೂ ಓದಿ : ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ : ವಾಹನ ಸವಾರಿಗೆ ತೊಂದರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next