ಆಲ್ಬಂ ಇವೆಲ್ಲವೂ ಸಿನಿಮಾ ಎಂಟ್ರಿಗೆ ಮೊದಲ ಹೆಜ್ಜೆ ಇದ್ದಂತೆ. ಅನೇಕ ಹೊಸಬರು ಮೊದಲು ಈ ಪ್ರಯತ್ನದ ಮೂಲಕವೇ ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ. ಆದರೆ, ಇಲ್ಲೊಂದು ತಂಡ, ಅದಾಗಲೇ ಸಿನಿಮಾ ಮಾಡುತ್ತಿದ್ದರೂ, ಪ್ಯಾಷನ್‌ಗಾಗಿ ಹೀಗೊಂದು ವಿಡಿಯೋ ಸಾಂಗ್ ಆಲ್ಬಂ ಮಾಡಿದೆ. ಆ ಮೂಲಕ ಹೊಸತನ್ನು ಕೊಡಲು ಪ್ರಯತ್ನಿಸಿದೆ. ಆ ವಿಡಿಯೋ ಸಾಂಗ್ ಆಲ್ಬಂಗೆ “ಕರಣ್’ ಎಂದು ನಾಮಕರಣ ಮಾಡಲಾಗಿದೆ.
ಶೀರ್ಷಿಕೆಗೆ “ಎಬೋವ್ ಆಲ್’ ಎಂಬ ಅಡಿಬರಹವಿದೆ. ಅಂದಹಾಗೆ, ಈ ವಿಡಿಯೋ ಸಾಂಗ್‌ನ ರಚನೆ ಮತ್ತು ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರೋದು ಮಂಜು ನಂದನ್. ಈ ಹಿಂದೆ ಮಂಜು ನಂದನ್ ಅವರು “2000′ ಎಂಬ ಚಿತ್ರ ನಿರ್ದೇಶಿಸಿದ್ದರು. ಆ ಚಿತ್ರ ಇನ್ನೇನು,
ಒಂದಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದು, ಇನ್ನಷ್ಟೇ ಬಿಡುಗಡೆಗೆ ಸಜ್ಜಾಗಬೇಕಿದೆ. ಈ “ಕರಣ್’ ವಿಡಿಯೋ ಸಾಂಗ್ ಆಲ್ಬಂನಲ್ಲಿ ನಾಲ್ಕು ಹಾಡುಗಳಿವೆ. ಇದರ ವಿಶೇಷವೆಂದರೆ,
ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಹಾಡುಗಳಿವೆ.
ವಿಡಿಯೋ ಆಲ್ಬಂನಲ್ಲಿ ಡ್ರೀಮ್ ಸಾಂಗ್, ಪೋಷಕರಿಗೆ ಸಂದೇಶ ಸಾರುವ ಒಂದು ಹಾಡು, ಮಹಿಳಾ ಪ್ರಧಾನವಾಗಿರುವ ರ್ಯಾಪ್ ಸಾಂಗ್ ಮತ್ತು ಸಮಯಕ್ಕೆ ಆದ್ಯತೆ ಕೊಡಬೇಕು ಎಂಬ ಕುರಿತಂತೆ ಹಾಡುಗಳಿವೆ. ಈ ವಿಡಿಯೋ ಆಲ್ಬಂ ಸಾಂಗ್ ಕುರಿತು ಮಾತನಾಡುವ ನಿರ್ದೇಶಕ ಮಂಜು ನಂದನ್, “ಆಲ್ಬಂಬನಲ್ಲಿ ಕರಣ್ ಸಿಂಗ್ ಠಾಕೂರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಆಲ್ಬಂ ಹಾಡಿಗೆ ಗಾಯಕರೂ ಹೌದು. ಸಾತ್ವಿಕ ಅಪ್ಪಯ್ಯ ನಾಯಕಿಯಾಗಿದ್ದಾರೆ. ಇವರು ಈ ಹಿಂದೆ “ಸರ್ವಸ್ವ’ ಚಿತ್ರದ ನಾಯಕಿಯಾಗಿ ನಟಿಸಿದ್ದರು. ಉಳಿದಂತೆ ಇರುವ ಹಾಡುಗಳಲ್ಲಿ ಸಿದ್ಧಾಂತ್, ಸಿಸೋಡಿಯಾ, ದುರ್ಗಾಸಿಂಗ್ ಠಾಕೂರ್, ಬೇಬೀಶ್ರೀ ಕಾಣಿಸಿಕೊಂಡಿದ್ದಾರೆ.
ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿ ಸುತ್ತಮುತ್ತ ಎಂಟು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಭುಪಿಂದೆರ್ ಪಾಲ್ ಸಿಂಗ್ ರೈನ ಮತ್ತು ಪೌಲ್ ಛಾಯಾಗ್ರಹಣ ಮಾಡಿದ್ದಾರೆ. ಪ್ರವೀಣ್ ಪ್ರಾನ್ಸಿಸ್ ಸಂಗೀತವಿದೆ. ಮಂದಾರ್ ಪಾಠಕ್, ವಿನಯ್, ರಿಷಭ್, ಫಾತೀಮಾರಾಜ್ ಅವರ ಸಾಹಿತ್ಯವಿದೆ. ಇನ್ನು ಕಾಸ್ಟೂಮ್ ಡಿಸೈನರ್ ಆಗಿ ಪ್ರಿಯಾಂಕ ಪಾಲ್ಗೊಟ ಅವರು ಕೆಲಸ ಮಾಡಿದ್ದಾರೆ’ ಎಂದು ವಿವರ ಕೊಡುತ್ತಾರೆ ಮಂಜು ನಂದನ್.
ಈ ವಿಡಿಯೋ ಸಾಂಗ್ ಆಲ್ಬಂ ಜೂನ್ 5 ರಂದು ಬಿಡುಗಡೆಯಾಗಲಿದೆ. ಅಂದು ಧಾರವಾಡದಲ್ಲಿ
ಪೂರ್ವಭಾವಿ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂಬುದು ನಿರ್ದೇಶಕರ ಹೇಳಿಕೆ.