Advertisement

ಕಾರ ಹುಣ್ಣಿಮೆಯ ಕರಿ ಸ್ಪರ್ಧೆಯ ವೇಳೆ ದಿಕ್ಕೆಟ್ಟು ಓಡಿದ ಹೋರಿ : ಚಿಂತೆಯಲ್ಲಿ ರೈತ

08:43 PM Jun 14, 2022 | Team Udayavani |

ಕುಷ್ಟಗಿ: ತಾಲೂಕಿನ ಅಡವಿಬಾವಿ ಗ್ರಾಮದಲ್ಲಿ‌ ಸಾಂಪ್ರದಾಯಿಕ ಕಾರ ಹುಣ್ಣಿಮೆ ಕರಿ ಸ್ಪರ್ಧೆಯಲ್ಲಿ ಹೋರಿಯೊಂದು ಜನಸಂದಣಿ ಹೆದರಿ ದಿಕ್ಕೆಟ್ಟು ಓಡಿದ ಪ್ರಸಂಗ ನಡೆಯಿತು.

Advertisement

ಮಂಗಳವಾರ ಸಂಜೆ ಗ್ರಾಮದಲ್ಲಿ ಕಾರ ಹುಣ್ಣಿಮೆ ಕರಿ ಹರಿಯುವ ಸ್ಪರ್ಧೆಯಲ್ಲಿ ಗ್ರಾಮದ ಹನಮಪ್ಪ ಕುಮಟಗಿ ಅವರ ಹೋರಿ ಕೂಡಾ ಭಾಗವಹಿಸಿತ್ತು. ಇನ್ನೇನು ಸ್ಪರ್ಧೆ ಶುರುವಾಗಬೇಕು ಎನ್ನುವಷ್ಟರಲ್ಲಿ ಜನರ ಕೂಗಾಟಕ್ಕೆ ಬೆದರಿ ದಿಕ್ಕೆಟ್ಟು ಓಡತೊಡಗಿತು. ಶರವೇಗದಲ್ಲಿ ಅಡ್ಡದಾರಿ ಹಿಡಿದ ಹೋರಿಯನ್ನು ನಿಯಂತ್ರಿಸಲು ಯುವಕರು ಓಡಿದರೂ ಕೈಗೆ ಸಿಗಲಿಲ್ಲ. ಬಳಿಕ ಎತ್ತು ಓಡಿದ ದಿಕ್ಕಿನೆಡೆಗೆ ಐವತ್ತಕ್ಕು ಅಧಿಕ ಬೈಕ್ ಸವಾರರು ಹಿಂಬಾಲಿಸಿದರು.

ಅಡವಿಬಾವಿ ಸೀಮೆ ದಾಟಿ ಕಲಾಲಬಂಡಿ ತಲುಪಿದರು ಹೋರಿ ಮಾತ್ರ ಸಿಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಮಲ್ಲಿಕಾರ್ಜುನ ದೋಟಿಹಾಳ ತಿಳಿಸಿದ್ದಾರೆ.

ಕಾಕತಾಳಿಯ ಎನ್ನುವಂತೆ ಸಾಂಪ್ರದಾಯಿಕ ಕಾರ ಹುಣ್ಣಿಮೆಯ ಸ್ಪರ್ಧೆಯಿಂದ ಬೆಳೆಯನ್ನು ‌ನಿರ್ಧರಿಸುವ ಸಂದರ್ಭದಲ್ಲಿ ಹೋರಿ ದಿಕ್ಕೆಟ್ಟು ಓಡಿರುವುದು ಬೆಳೆದ ಬೆಳೆ ಕೈಗೆ ಬರುತ್ತದೋ ಇಲ್ಲವೋ ಎಂಬ ಚಿಂತೆ ವ್ಯಕ್ತವಾಗಿದೆ.

ಇದನ್ನೂ ಓದಿ : ರಾಷ್ಟ್ರಪತಿ ಚುನಾವಣೆ ದಿನದಿಂದ ಸಂಸತ್ತಿನ ಮುಂಗಾರು ಅಧಿವೇಶನ ಸಾಧ್ಯತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next