Advertisement

Mahalingpur ಕಾರಹುಣ್ಣಿಮೆ ಕರಿ ಆಚರಣೆ : ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ

11:00 PM Jun 23, 2024 | Team Udayavani |

ಮಹಾಲಿಂಗಪುರ: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕಾರಹುಣ್ಣಿಮೆ ಕರಿಯ ದಿನ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯು ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.

Advertisement

ಪದ್ದತಿಯಂತೆ ಗರಡಿ ಮನೆಯಲ್ಲಿನ ಸಂಗ್ರಾಮ ಕಲ್ಲು ಹಾಗೂ ಗುಂಡಕಲ್ಲುಗಳನ್ನು ಇಟ್ಟು ಪೂಜಿಸಲಾಗಿತ್ತು. ಸಂಗ್ರಾಮ ಕಲ್ಲುಗಳನ್ನು ಎತ್ತಲು ಕೇವಲ ಇಬ್ಬರು ಯುವಕರು ಹರಸಾಹಸ ಪಡುತ್ತಿದ್ದರೆ, ನೂರಾರು ಯುವಕರು ನೋಡಲು ಸಾಕಷ್ಟು ನೂಕು ನುಗ್ಗಲು ಮಾಡುತ್ತಿದ್ದರು. ನೆರೆದಿದ್ದ ಯುವಕರು ಶಿಳ್ಳೆ, ಚಪ್ಪಾಳೆ ತಟ್ಟಿ ಕಲ್ಲು ಎತ್ತುವ ಯುವಕರಿಗೆ ಹುರಿದುಂಬಿಸುತ್ತಿದ್ದರು.

ವ್ಯಾಯಾಮ ಶಾಲೆಯಲ್ಲಿ ಗುರುಗಳು ಕಲಿಸಿದಂತೆ ಸ್ವರ್ಧಾಳುಗಳು ಕಲ್ಲು ಎತ್ತುತ್ತಿದ್ದರು. ಗ್ರಾಮೀಣ ಭಾಗದ ಪ್ರತಿಯೊಂದು ಜಾತ್ರೆ ಉತ್ಸವಗಳಲ್ಲಿ ನಡೆಯುತ್ತಿದ್ದ ಈ ಸ್ಪರ್ಧೆಯು ವರ್ಷದಿಂದ ವರ್ಷಕ್ಕೆ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಇಂತಹ ಸ್ಪರ್ಧೆಯಲ್ಲಿ ಮೊದಲು ಹತ್ತಾರು ಯುವಕರು ಭಾಗವಹಿಸುತ್ತಿದ್ದರು. ಇಂದು ಕೇವಲ ಇಬ್ಬರು ಮಾತ್ರ ಭಾಗವಹಿಸಿದ್ದೆ ಇದಕ್ಕೆ ಸಾಕ್ಷಿಯಾಗಿತ್ತು.

ಹಿರಿಯರಾದ ಶಿವಲಿಂಗಯ್ಯಾ ಮಠಪತಿ ಅವರ ಮಾರ್ಗದಲ್ಲಿನಲ್ಲಿ ನಡೆದ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪ್ರಮೋದ ಮಹಾಲಿಂಗಯ್ಯ ಮಠಪತಿ 75 ಕೆಜಿ ವರೆಗಿನ ಕಲ್ಲು ಎತ್ತಿ ಪ್ರಥಮ, ಸಂಭ್ರಮ ಚನ್ನಪ್ಪ ಹೂಗಾರ 35 ಕೆಜಿವರೆಗಿನ ಕಲ್ಲುಗಳನ್ನು ಎತ್ತಿ ಸಾಹಸ ಮೆರೆದರು.

ಹಿರಿಯರಾದ ಯಲ್ಲನಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ವಿಜುಗೌಡ ಪಾಟೀಲ, ಹರೀಷ ನಾಯಕ, ಅಶೋಕ ಜ.ಅಂಗಡಿ, ಸುಭಾಸ ವಜ್ಜರಮಟ್ಟಿ, ಈಶ್ವರ ಮಠದ, ಶ್ರೀಶೈಲ ಮಠಪತಿ, ಸಂತೋಷ ಶಿರೋಳ, ರಾಘು ಕಪರಟ್ಟಿ, ರಾಘವೇಂದ್ರ ಶಿರೋಳ ಸೇರಿದಂತೆ ಹಲವರು ಇದ್ದರು.

Advertisement

ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು 
ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ಜಾತ್ರೆ, ಉತ್ಸವಗಳಲ್ಲಿ ಯುವಕರು ಸಂಗ್ರಾಮ ಕಲ್ಲು ಮತ್ತು ಗುಂಡಕಲ್ಲು ಎತ್ತುವ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ವರ್ಷವಿಡಿ ಗರಡಿ ಮನೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಇಂದಿನ ಯುವಜನತೆ ಕುಸ್ತಿಮನೆಯನ್ನು ಮರೆತು, ಚಿಕ್ಕವಯಸ್ಸಿನಲ್ಲೆ ದುಶ್ಚಟಗಳಿಗೆ ದಾಸರಾಗುತ್ತಿರುವುದು ಮತ್ತು ಇಂದಿನ ಆಹಾರದಲ್ಲಿ ಶಕ್ತಿ ಇಲ್ಲವಾದ್ದರಿಂದ ಕ್ರಮೇಣ ಗ್ರಾಮೀಣ ಭಾಗದ ಇಂತಹ ಸಾಹಸ ಕ್ರೀಡೆಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ.
-ನಿಂಗಪ್ಪ ಬಾಳಿಕಾಯಿ. ಅಧ್ಯಕ್ಷರು ಮಹಾಲಿಂಗೇಶ್ವರ ಜಾತ್ರೆಯ ಕುಸ್ತಿ ಕಮೀಟಿ.

Advertisement

Udayavani is now on Telegram. Click here to join our channel and stay updated with the latest news.

Next