Advertisement
ಪದ್ದತಿಯಂತೆ ಗರಡಿ ಮನೆಯಲ್ಲಿನ ಸಂಗ್ರಾಮ ಕಲ್ಲು ಹಾಗೂ ಗುಂಡಕಲ್ಲುಗಳನ್ನು ಇಟ್ಟು ಪೂಜಿಸಲಾಗಿತ್ತು. ಸಂಗ್ರಾಮ ಕಲ್ಲುಗಳನ್ನು ಎತ್ತಲು ಕೇವಲ ಇಬ್ಬರು ಯುವಕರು ಹರಸಾಹಸ ಪಡುತ್ತಿದ್ದರೆ, ನೂರಾರು ಯುವಕರು ನೋಡಲು ಸಾಕಷ್ಟು ನೂಕು ನುಗ್ಗಲು ಮಾಡುತ್ತಿದ್ದರು. ನೆರೆದಿದ್ದ ಯುವಕರು ಶಿಳ್ಳೆ, ಚಪ್ಪಾಳೆ ತಟ್ಟಿ ಕಲ್ಲು ಎತ್ತುವ ಯುವಕರಿಗೆ ಹುರಿದುಂಬಿಸುತ್ತಿದ್ದರು.
Related Articles
Advertisement
ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ಜಾತ್ರೆ, ಉತ್ಸವಗಳಲ್ಲಿ ಯುವಕರು ಸಂಗ್ರಾಮ ಕಲ್ಲು ಮತ್ತು ಗುಂಡಕಲ್ಲು ಎತ್ತುವ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ವರ್ಷವಿಡಿ ಗರಡಿ ಮನೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಇಂದಿನ ಯುವಜನತೆ ಕುಸ್ತಿಮನೆಯನ್ನು ಮರೆತು, ಚಿಕ್ಕವಯಸ್ಸಿನಲ್ಲೆ ದುಶ್ಚಟಗಳಿಗೆ ದಾಸರಾಗುತ್ತಿರುವುದು ಮತ್ತು ಇಂದಿನ ಆಹಾರದಲ್ಲಿ ಶಕ್ತಿ ಇಲ್ಲವಾದ್ದರಿಂದ ಕ್ರಮೇಣ ಗ್ರಾಮೀಣ ಭಾಗದ ಇಂತಹ ಸಾಹಸ ಕ್ರೀಡೆಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ.
-ನಿಂಗಪ್ಪ ಬಾಳಿಕಾಯಿ. ಅಧ್ಯಕ್ಷರು ಮಹಾಲಿಂಗೇಶ್ವರ ಜಾತ್ರೆಯ ಕುಸ್ತಿ ಕಮೀಟಿ.