Advertisement

ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಗಮನಸೆಳೆದ ಹೆದ್ದಾರಿ ದುರವಸ್ಥೆ, ಪಾರ್ಕಿಂಗ್ ಸಮಸ್ಯೆ

03:36 PM Mar 20, 2021 | Team Udayavani |

ಕಾಪು: ಹೆದ್ದಾರಿ ರಸ್ತೆಯ ದುರವಸ್ಥೆ, ಸರ್ವೀಸ್ ರಸ್ತೆ ಕೊರತೆ, ಪಾರ್ಕಿಂಗ್ ಸಮಸ್ಯೆ, ಹಕ್ಕು ಪತ್ರ ಸಮಸ್ಯೆ ಸಹಿತ ವಿವಿಧ ಸಮಸ್ಯೆಗಳ ಕುರಿತಾಗಿ ಶನಿವಾರ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಗಂಭೀರ ಚರ್ಚೆ ನಡೆಸಿದರು.

Advertisement

ಹೆದ್ದಾರಿ ಸಮಸ್ಯೆಯ ಬಗ್ಗೆ ಪುರಸಭೆ ಸದಸ್ಯರಾದ ಅರುಣ್ ಶೆಟ್ಟಿ, ಕಿರಣ್ ಆಳ್ವ, ಪ್ರದೀಪ್ ಯು., ಉಸ್ಮಾನ್, ಸುಲೋಚನಾ ಬಂಗೇರ, ಹಮೀದ್ ಮೂಳೂರು ಸಭೆಗೆ ಮಾಹಿತಿ ನೀಡಿದರು.

ಕಾಪು ಎಸ್ಸೈ ರಾಘವೇಂದ್ರ ಸಿ. ಅವರು ಸರ್ವೀಸ್ ರಸ್ತೆ ಕಾಮಗಾರಿಗಳ ಪೂರ್ಣಗೊಳಿಸುವಿಕೆ, ಸೋಲಾರ್ ಬ್ಲಿಂಕಿಂಗ್ ಲೈಟ್ಸ್, ಡೈವರ್ಷನ್ ಬಳಿ ಲೈಟ್, ಹೆದ್ದಾರಿ ಬದಿಯ ಬೀದಿ ದೀಪಗಳ ನಿರ್ವಹಣೆ, ಮೂಳೂರು ಮತ್ತು ಪೊಲಿಪುವಿನ ಅಪಘಾತ ವಲಯದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ, ಕಟಪಾಡಿ ಜಂಕ್ಷನ್ ಪೂರ್ವಭಾಗದಲ್ಲಿ ಬಸ್ ನಿಲ್ದಾಣ, ಕಾಪು ಮಾರಿಗುಡಿ ಬಳಿ ಬಸ್ ನಿಲ್ದಾಣ ರಚನೆ ಮಾಡಿಕೊಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ: ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ಸಚಿವ ಅಶೋಕ್ ಗ್ರಾಮ ವಾಸ್ತವ್ಯ: ಅದ್ದೂರಿ ಸ್ವಾಗತ

ಹೆದ್ದಾರಿ ಇಂಜಿನಿಯರ್ ಅಭಿಷೇಕ್ ಮಾತನಾಡಿ, ಸಮಸ್ಯೆಗಳ ಬಗ್ಗೆ ಪತ್ರ ಮಾಡಿ, ಅಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು. ನವಯುಗ್ ಟೋಲ್ ಪ್ರಬಂಧಕ ಶಿವಪ್ರಸಾದ್ ರೈ ಮಾತನಾಡಿ, ಈಗಾಗಲೇ ಮಂಜೂರಾಗಿರುವ ಯೋಜನೆಗಳ ಅನುಷ್ಟಾನ ಮತ್ತು ಅಗತ್ಯದ ಸಮಸ್ಯೆಗಳನ್ನು ಎಪ್ರಿಲ್ ತಿಂಗಳಾಂತ್ಯದೊಳಗೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ತೃಪ್ತರಾಗದ ಪುರಸಭಾಧ್ಯಕ್ಷ ಅನಿಲ್ ಕುಮಾರ್ ಮತ್ತು ಸದಸ್ಯರು ಶೀಘ್ರ ಯೋಜನಾ ನಿರ್ದೇಶಕರನ್ನೇ ಕರೆದು ಸಭೆ ನಡೆಸುವಂತೆ ಆಗ್ರಹಿಸಿದರು.

Advertisement

ವಿವಿಧ ವಾರ್ಡ್ ಗಳಲ್ಲಿ ಹಲವು ಕುಟುಂಬಗಳು ಹಕ್ಕು ಪತ್ರ ಇಲ್ಲದೇ ತೊಂದರೆಗೊಳಗಾಗಿವೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ಪುರಸಭೆಯ 23 ವಾರ್ಡ್ ಗಳಲ್ಲಿನ ಹಕ್ಕು ಪತ್ರ ರಹಿತರ ಪಟ್ಟಿ ಮಾಡಿ, ನಿರ್ಣಯ ಮಾಡಿ ಕಂದಾಯ ಇಲಾಖೆಗೆ ಸಲ್ಲಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಈ ಪತ್ರವನ್ನು ಇಟ್ಟುಕೊಂಡು ಕಂದಾಯ ಇಲಾಖೆಯ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಯದಾಗಿ ಉಪತಹಶೀಲ್ದಾರ್ ಅಶೋಕ್ ತಿಳಿಸಿದರು.

ಇದನ್ನೂ ಓದಿ: ಗ್ರಾಮ ವಾಸ್ತವ್ಯ ವರದಿಗೆ ತೆರಳಿದ ಪತ್ರಕರ್ತರಿಗೆ ಭಿಕ್ಷುಕರ ವಾಹನದಲ್ಲಿ ಪ್ರಯಾಣ!

ಕಾಪು ಪೇಟೆ ಪಾರ್ಕಿಂಗ್‌ ಸಮಸ್ಯೆಯ ಬಗ್ಗೆ ಎಸ್ಸೈ ರಾಘವೇಂದ್ರ ಸಿ. ವಿವರಿಸಿ, ಅದನ್ನು ಪರಿಹರಿಸಲು ತೆಗೆದುಕೊಳ್ಳಲಾಗುವ ಕ್ರಮಗಳನ್ನು ಸಭೆಗೆ ವಿವರಿಸಿದರು. ನಾಮ ನಿರ್ದೇಶಿತ ಸದಸ್ಯ ಪ್ರದೀಪ್ ಯು. ಕಾಪು ಪೇಟೆಯಲ್ಲಿ ಪಾರ್ಕಿಂಗ್ ಸಮಸ್ಯೆಯೇ ಬಲು ದೊಡ್ಡ ಸಮಸ್ಯೆಯಾಗಿದೆ ಎಂದರು. ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಸದಸ್ಯರಾದ ಕಿರಣ್ ಆಳ್ವ, ಅರುಣ್ ಶೆಟ್ಟಿ, ಎಚ್. ಉಸ್ಮಾನ್ ದನಿಗೂಡಿಸಿದರು. ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಡಿಜಿಟಲ್ ಸರ್ವೇ ನಡೆಸಿ, ಮತ್ತೆ ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಪುರಸಭೆಯ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷೆ ಮಾಲಿನಿ, ಮುಖ್ಯಾಧಿಕಾರಿ ವೆಂಕಟೇಶ ನಾವಡ, ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂಭವಿ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next