ಉಡುಪಿ, ಯುಪಿಸಿಎಲ್‌ನಿಂದ ಬರಬೇಕು!
ಕಾಪು ಸುತ್ತಮುತ್ತ ಎಲ್ಲೇ ಆದರೂ ಅವಘಡಗಳು ಸಂಭವಿಸಿದರೆ ರಕ್ಷಣೆಗೆ ಉಡುಪಿ ಅಥವಾ ಯುಪಿಸಿಎಲ್‌ನ ಅಗ್ನಿ ಶಾಮಕ ದಳಗಳೇ ಬರಬೇಕಾಗುತ್ತದೆ. ಆದರೆ ಉಡುಪಿಯಿಂದ ವಾಹನ ಗಳು ಬರುವಷ್ಟರಲ್ಲಿ ಸಾಕಷ್ಟು ಹಾನಿ ಸಂಭವಿಸಿಯಾಗಿರುತ್ತದೆ. ಇತ್ತೀಚಿನ ಹಲವು ಪ್ರಕರಣಗಳಲ್ಲಿ ಈ ಸಮಸ್ಯೆ ಗೋಚರವಾಗಿದೆ.
Advertisement
ಹೊಸ ತಾಲೂಕಿಗೆ ಬೇಕು ಹೊಸ ತಾಲೂಕು ರಚನೆಯಾಗುತ್ತಿ ದ್ದಂತೆಯೇ ತಾಲೂಕು ಕೇಂದ್ರಕ್ಕೆ ಅಗ್ನಿಶಾಮಕ ಠಾಣೆ ಮಂಜೂರಾಗುತ್ತದೆ. ಕಾಪು ವಿಚಾರದಲ್ಲೂ ಅಗ್ನಿಶಾಮಕ ಠಾಣೆಗೆ ಜಾಗ ಗುರುತಿಸುವಂತೆ ಸುತ್ತೋಲೆ ಬಂದಿದೆ. ಅದರಂತೆ ಜಾಗ ಹುಡುಕುವ ಕಾರ್ಯವೂ ನಡೆಯುತ್ತಿದೆ. ಈಗ ಚುನಾವಣಾ ಸಮಯವಾಗಿರುವುದರಿಂದ ಕೆಲಸದ ಒತ್ತಡ ಮತ್ತು ಚುನಾವಣಾ ನೀತಿ ಸಂಹಿತೆಯೂ ಅದಕ್ಕೆ ಅಡ್ಡಿಯಾಗುತ್ತಿದೆ. ಅತೀ ಶೀಘ್ರದಲ್ಲಿ ಅಗ್ನಿಶಾಮಕ ಠಾಣೆಗೆ ಜಾಗ ಮಂಜೂರು ಮಾಡಿಸಿಕೊಂಡು ಕೆಲಸ ಪ್ರಾರಂಭಿಸಲಾಗುವುದು ಎಂದು ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
ಕಾಪು ಮತ್ತು ಪಡುಬಿದ್ರಿ ಸುತ್ತಲಿನ ಪ್ರದೇಶಗಳಲ್ಲಿ ಪದೇ ಪದೇ ಗದ್ದೆ ಮತ್ತು ಕಾಡಿಗೆ ಬೆಂಕಿ, ಇತರ ಅವಘಡಗಳು ಸೇರಿ ಕಳೆದ ಮೂರು ತಿಂಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ. ಈ ಸಂದರ್ಭ ಕಾಪುವಿನಲ್ಲೇ ಅಗ್ನಿ ಶಾಮಕ ಠಾಣೆಯಿದ್ದಲ್ಲಿ ಹೆಚ್ಚಿನ ನಷ್ಟವನ್ನು ತಪ್ಪಿಸಲು ಸಾಧ್ಯವಿತ್ತು. ಕಾರಣಾಂತರ ಗಳಿಂದ ಬಾಕಿ
ಅಗ್ನಿಶಾಮಕ ಠಾಣೆಗೆ ಪಡುಬಿದ್ರಿಯಲ್ಲಿ ಈ ಹಿಂದೆಯೇ ಜಿಲ್ಲಾಧಿಕಾರಿಗಳು ಜಾಗ ಮಂಜೂರು ಮಾಡಿದ್ದರು. ಆದರೆ ವಿವಿಧ ಕಾರಣಗಳಿಂದ ಅದು ಬಾಕಿಯಾಗಿದೆ. ಈಗ ಆ ಜಮೀನನ್ನು ಸರಕಾರ ವಾಪಾಸು ಪಡೆದುಕೊಂಡು, ಎಸ್‌ಇಝಡ್‌ಗೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಿದೆ. ಕಾಪುವಿನಲ್ಲಿ ಮುಂದೆ ಅಗ್ನಿಶಾಮಕ ಠಾಣೆ ಪ್ರಾರಂಭವಾಗಲಿರುವುದರಿಂದ ಪಡುಬಿದ್ರಿಗೆ ಅದರ ಅಗತ್ಯ ಇರುವುದಿಲ್ಲ.
– ವಸಂತ್ ಕುಮಾರ್,
ಜಿಲ್ಲಾ ಅಗ್ನಿಶಾಮಕ ಅಧಿಕಾರಿ
Related Articles
– ಸೂರಿ ಶೆಟ್ಟಿ ಕಾಪು, ನಾಗರಿಕ
Advertisement
– ರಾಕೇಶ್ ಕುಂಜೂರು