Advertisement

ಕಾಪು‌: ಪೊಲಿಪು ಬಾಡಿಗೆ‌ ಮನೆಯಲ್ಲಿ ಬೆಂಕಿ; ಲಕ್ಷಾಂತರ ರೂ. ನಷ್ಟ

02:39 PM Aug 12, 2022 | Team Udayavani |

ಕಾಪು‌: ಪೊಲಿಪು ಸರ್ಕಲ್ ಬಳಿಯ ಬಾಡಿಗೆ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಕ್ಷಾಂತರ ರೂಪಾಯಿ ವೆಚ್ಚದ ಸೊತ್ತು ನಷ್ಟವುಂಟಾಗಿದೆ.

Advertisement

ಪೊಲಿಪು ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಗುರುರಾಜ್ ಮತ್ತು ಶಕೀಲಾ ಎಂಬವರ ಮನೆಯಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, ಪಕ್ಕದ ಕೃಷ್ಣರಾಜ್ ಅವರ ಮನೆಗೂ ಬೆಂಕಿಯ ಕೆನ್ನಾಲಗೆ ಚಾಚಿದೆ. ಘಟನೆಯಿಂದಾಗಿ ಗುರುರಾಜ್ ಅವರ ಮನೆಯೊಳಗಿನ ವಸ್ತುಗಳೆಲ್ಲಾ ಸಂಪೂರ್ಣ ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ಸೊತ್ತು ನಷ್ಟ ಅಂದಾಜಿಸಲಾಗಿದೆ.

ಕೃಷ್ಟರಾಜ್ ಅವರ ಮನೆಯ ಫ್ಯಾನ್, ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು ಸಾವಿರಾರು ರೂಪಾಯಿ ಮೌಲ್ಯದ ಸೊತ್ತು ನಷ್ಟ ಉಂಟಾಗಿದೆ.

ಇದನ್ನೂ ಓದಿ: ಉಳ್ಳಾಲ: ಕಾರ್ಮಿಕರಿಗೆ ಅಪರಿಚಿತ ವಾಹನ ಢಿಕ್ಕಿ; ಓರ್ವ ಸಾವು

ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಅಪಾರ ಹಾನಿಯನ್ನು ತಪ್ಪಿಸಿದೆ. ಗ್ರಾಮ ಕರಣಿಕ ಅವಿನಾಶ್, ಪುರಸಭಾ ಸದಸ್ಯರಾದ ರಾಧಿಕಾ ಸುವರ್ಣ, ಫರ್ಜಾನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next