Advertisement

ಕಾಪು ಪೇಟೆಯ ವಿವಿಧೆಡೆ ದಾಳಿ, ಪರಿಶೀಲನೆ

10:18 PM Sep 18, 2019 | Sriram |

ಕಾಪು: ಉಡುಪಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ಕಾಪು ಪೊಲೀಸ್‌ ಇಲಾಖೆಯು ಜಂಟಿಯಾಗಿ ಕಾಪು ಪೇಟೆಯ ವಿವಿಧ ಅಂಗಡಿಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಕೋಟ್ಪಾ ಕಾಯ್ದೆ ಜಾರಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಲಾಯಿತು.

Advertisement

ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿ ಕಾಪು ಪೇಟೆಯಲ್ಲಿ ತಂಬಾಕು ಪದಾರ್ಥಗಳಾದ ಬೀಡಿ, ಸಿಗರೇಟು, ನಶ್ಯಾ, ಗುಟ್ಕಾ ಮೊದಲಾದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಮತ್ತು ಬಾರ್‌ – ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಯ್ದೆ ಉಲ್ಲಂಘಿಸುತ್ತಿದ್ದ 10 ಅಂಗಡಿಗಳಿಗೆ ತಲಾ 400 ರೂ. ಗಳಂತೆ ದಂಡ ವಿಧಿಸಲಾಯಿತು.

ಫಲಕ ನೀಡಿ ಎಚ್ಚರಿಕೆ ಜಾಗೃತಿ : ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದ ಅಂಗಡಿ, ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿರುವುದು ಮಾತ್ರವಲ್ಲದೇ ಅಲ್ಲಿ ಆಹಾರ ಸಂರಕ್ಷಣೆ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ಎಚ್ಚರಿಕೆಯ ಬಗ್ಗೆ ಅಳವಡಿಸಬೇಕಾದ ಬೋರ್ಡಗಳನ್ನು ನೀಡಲಾಯಿತು.

ಉಡುಪಿ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ| ವಾಸುದೇವ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನಾ, ಹಿರಿಯ ಆಹಾರ ನಿರೀಕ್ಷಕ ವೆಂಕಟೇಶ್‌, ಆರೋಗ್ಯಾಧಿಕಾರಿ ದೇವಪ್ಪ ಪಟಾಗಾರ್‌, ಜಿಲ್ಲಾ ಕಾರ್ಮಿಕ ಇನ್ಸ್‌ಪೆಕ್ಟರ್‌ ಜೀವನ್‌, ಕಾಪು ಪೊಲೀಸ್‌ ಠಾಣಾ ಎಎಸ್ಸೆ ರಾಜೇಂದ್ರ ಮಣಿಯಾಣಿ, ಬೀಟ್‌ ಸಿಬಂದಿ ಲಕ್ಷ್ಮಣ್‌, ಮಂಜುಳಾ ಶೆಟ್ಟಿ, ಶೈಲಾ ಶಾಮನೂರ್‌ ಜೊತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next