ಕಾಪು : ಉಳಿಯಾರಗೋಳಿ- ಕಲ್ಯಾದ ಮನೆಯೊಂದರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಜುಗಾರಿ ನಿರತ 32 ಮಂದಿಯನ್ನು ಬಂಧಿಸಿ, 3.37 ಲಕ್ಷ ರೂ. ನಗದು ಸಹಿತ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.
ಜುಗಾರಿ ನಿರತರಾಗಿದ್ದ ಸಂಪತ್, ಸೂರಜ್, ಹೇಮಚಂದ್ರ, ಪ್ರಶಾಂತ್ ಸುವರ್ಣ, ಬಿಕೆಟ್, ಅಕ್ಷಯ್, ಯಂಕಪ್ಪ, ಸಿದ್ದೀಕ್, ರಾಜೇಶ್, ಸತೀಶ್, ರತ್ನಾಕರ್ ಶೆಟ್ಟಿ, ನಾರಾಯಣ, ವಿಶ್ವನಾಥ, ವಿನೋದ್, ಅಶ್ರಫ್, ವಿನಯ್, ಶಶಿ ಕುಮಾರ್, ಕಿಶೋರ್, ರಾಧಾಕೃಷ್ಣ, ಪ್ರಿತೇಶ, ಮಣಿಕಂಠ, ಚೇತನ್, ಚರಣ್, ಅಶ್ವತ್, ರಕ್ಷಿತ್, ಪಾಂಡು ಟಿ., ಅನ್ವರ್, ಸಂತೋಷ್, ಅರ್ಪಿತ್, ಪ್ರಜ್ವಲ್, ಪ್ರಶಾಂತ್, ಬೋಜರಾಜ್ ಅವರನ್ನು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಅವರಿಗೆ ದೊರಕಿದ ಮಾಹಿತಿಯ ಮೇರೆಗೆ ಕಾಪು ಪೊಲೀಸ್ ಠಾಣಾ ಸಿಬಂದಿಯವರೊಂದಿಗೆ ಜತೆಗೂಡಿ ಜುಗಾರಿ ಆಡ್ಡೆಗೆ ದಾಳಿ ನಡೆಸಿದ್ದು ಈ ವೇಳೆ 3,37,400/- ರೂ. ನಗದು ಹಣ, ಇಸ್ಪೀಟ್ ಜುಗಾರಿ ಆಟ ಆಡಲು ಬಳಸಿದ 4 ಸೆಟ್ ವಿವಿಧ ಬಣ್ಣಗಳ ಇಸ್ಪೀಟ್ ಎಲೆಗಳು, 37 ಮೊಬೈಲ್ ಫೋನ್ಗಳು, 7 ಕಾರುಗಳು, 6 ಮೋಟಾರ್ ಸೆ„ಕಲ್, 2 ಆಟೋ ರಿಕ್ಷಾ ಸ್ವಾಧೀನಪಡಿಸಿಕೊಂಡಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.